Homeಮುಖಪುಟಲೋಕಸಭೆ ಚುನಾವಣೆ ಘೋಷಣೆಗೆ ಮೊದಲೆ CAA ಬಗ್ಗೆ ಅಧಿಸೂಚನೆಗೆ ಕೇಂದ್ರ ಸಜ್ಜು?

ಲೋಕಸಭೆ ಚುನಾವಣೆ ಘೋಷಣೆಗೆ ಮೊದಲೆ CAA ಬಗ್ಗೆ ಅಧಿಸೂಚನೆಗೆ ಕೇಂದ್ರ ಸಜ್ಜು?

- Advertisement -
- Advertisement -

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತೆ ಮುನ್ನಲೆಗೆ ಬಂದಿದೆ. ಸಿಎಎ ಕಾಯ್ದೆಯಡಿಯಲ್ಲಿನ ನಿಯಮಗಳು ಸಿದ್ಧವಾಗಿದ್ದು, 2024ರ ಲೋಕಸಭೆ  ಚುನಾವಣೆ ಘೋಷಣೆಗೆ ಮೊದಲೇ ಈ ಕುರಿತು ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿದೆ.

ನಾವು ಶೀಘ್ರದಲ್ಲೇ ಸಿಎಎ ನಿಯಮಾವಳಿಗಳ ಬಗ್ಗೆ ಅಧಿಸೂಚನೆ ಹೊರಡಿಸಲಿದ್ದೇವೆ. ನಿಯಮಗಳನ್ನು ಹೊರಡಿಸಿದ ನಂತರ ಕಾನೂನನ್ನು ಜಾರಿಗೆ ತರಬಹುದು ಮತ್ತು ಅರ್ಹರಿಗೆ ಭಾರತೀಯ ಪೌರತ್ವವನ್ನು ನೀಡಬಹುದು ಎಂದು ಅಧಿಕಾರಿಯೋರ್ವರು ಹೇಳಿರುವ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.

CAA ನ್ನು ಡಿ.10, 2019ರಂದು ಲೋಕಸಭೆಯಲ್ಲಿ ಮತ್ತು ಎರಡು ದಿನಗಳ ನಂತರ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ ನಂತರ ಅಂಗೀಕರಿಸಲಾಯಿತು. ಕೇಂದ್ರ ಸರಕಾರವು ತರಲು ಉದ್ದೇಶಿಸಿರುವ ಸಿಎಎ ಅಥವಾ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ ಡಿಸೆಂಬರ್ 31, 2014ರ ಮೊದಲು ಭಾರತಕ್ಕೆ ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡುವುದಾಗಿದೆ. ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡುವುದು ಸಂವಿಧಾನಬಾಹಿರವಾಗಿದೆ. ಪ್ರಾಸ್ತವಿತ ಕಾಯ್ದೆಯಲ್ಲಿ ಮುಸಲ್ಮಾನರನ್ನು ಪೌರತ್ವದಿಂದ ಹೊರಗಿಟ್ಟಿದ್ದಕ್ಕೆ ದೇಶದಾದ್ಯಂತ ಭಾರೀ ಚರ್ಚೆ, ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು.

ದಿ ಇಂಡಿಯನ್ ವರದಿಯ ಎಕ್ಸ್‌ಪ್ರೆಸ್ ಪ್ರಕಾರ, ಸಿಎಎ ನಿಯಮಗಳು ಈಗ ಸಿದ್ಧವಾಗಿವೆ ಮತ್ತು ಸಿಎಎ ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಆನ್‌ಲೈನ್ ಪೋರ್ಟಲ್ ಸಹ ಸಿದ್ದವಾಗಿದೆ. ಇದು ಸಂಪೂರ್ಣವಾಗಿ ಆನ್‌ಲೈನ್‌ ಪ್ರಕ್ರಿಯೆಯಾಗಿದೆ. ನಾವು ಮುಂದಿನ ದಿನಗಳಲ್ಲಿ ಸಿಎಎ ನಿಯಮಗಳನ್ನು ಹೊರಡಿಸಲಿದ್ದೇವೆ. ನಿಯಮಗಳನ್ನು ಹೊರಡಿಸಿದ ನಂತರ, ಕಾನೂನನ್ನು ಜಾರಿಗೆ ತರಬಹುದು ಮತ್ತು ಅರ್ಹರಿಗೆ ಭಾರತೀಯ ಪೌರತ್ವವನ್ನು ನೀಡಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸಿಎಎ ಕುರಿತು ಎಲ್ಲಾ ವಿಷಯಗಳು ಸಿದ್ದವಾಗಿದೆ ಮತ್ತು ಚುನಾವಣೆಯ ಮೊದಲು ಅವುಗಳನ್ನು ಕಾರ್ಯಗತಗೊಳಿಸುವ ಸಾಧ್ಯತೆಯಿದೆ. ಅರ್ಜಿದಾರರು ಪ್ರಯಾಣ ದಾಖಲೆಗಳಿಲ್ಲದಿದ್ದರೂ, ಭಾರತವನ್ನು ಪ್ರವೇಶಿಸಿದ ವರ್ಷವನ್ನು ತಿಳಿಸಬೇಕಾಗುತ್ತದೆ. ಅರ್ಜಿದಾರರಿಂದ ಯಾವುದೇ ದಾಖಲೆಗಳನ್ನು ಕೇಳಲಾಗುವುದಿಲ್ಲ. 2014ರ ನಂತರ ಅರ್ಜಿ ಸಲ್ಲಿಸಿದ ಅರ್ಜಿದಾರರ ಅರ್ಜಿ ಹೊಸ ನಿಯಮಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ. ಇದಲ್ಲದೆ ಡಿ.31, 2014ರ ಮೊದಲು ಭಾರತಕ್ಕೆ ಬಂದವರಿಗೆ ಮಾತ್ರ ಸೀಮಿತವಾಗಿದ್ದ ಗಡುವನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕಳೆದ ಕೆಲವು ವರ್ಷಗಳಿಂದ ಬಿಜೆಪಿ ನಾಯಕರು ರ್ಯಾಲಿಗಳಲ್ಲಿ ಸಿಎಎ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಕಾಯಿದೆಯು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿಕೊಂಡಿದ್ದಾರೆ. ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಅಮಿತ್‌ ಶಾ, ಸಿಎಎ ಜಾರಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ದೀದಿ ಸಿಎಎಗೆ ಸಂಬಂಧಿಸಿದಂತೆ ನಮ್ಮ ನಿರಾಶ್ರಿತ ಸಹೋದರರನ್ನು ಆಗಾಗ್ಗೆ ದಾರಿ ತಪ್ಪಿಸುತ್ತಾರೆ. ಸಿಎಎ ದೇಶದ ಕಾನೂನು ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಇದು ನಮ್ಮ ಪಕ್ಷದ ಬದ್ಧತೆ ಎಂದು ಹೇಳಿದ್ದರು.

ಸಿಎಎಯ ಕಾನೂನು ಮಾನ್ಯತೆಯನ್ನು ಪ್ರಶ್ನಿಸುವ ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ನ್ಯಾಯಾಲಯದಲ್ಲಿ ಕಾನೂನನ್ನು ಸಮರ್ಥಿಸಿ ಅಫಿಡವಿತ್‌ ಸಲ್ಲಿಕೆ ಮಾಡಿತ್ತು.

ಕಾಂಗ್ರೆಸ್‌ ಪ್ರತಿಕ್ರಿಯೆ

ಸಿಎಎ ನಿಯಮಗಳ ಅಧಿಸೂಚನೆ ಕುರಿತು ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಸುರೇಂದ್ರ ರಜಪೂತ್, ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಇಂತಹ ಕಾನೂನನ್ನು ಪರಿಚಯಿಸುತ್ತಿದೆ. ನಿರುದ್ಯೋಗ ಮತ್ತು ಹಣದುಬ್ಬರಗಳಿಂದಾಗಿ  ಬಿಜೆಪಿಗೆ ಬುದ್ದಿ ಕಲಿಸಲು  ದೇಶವು ತಯಾರಿ ನಡೆಸುತ್ತಿದೆ. ಬಿಜೆಪಿಯು 2024ರ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭಯದಲ್ಲಿದೆ ಮತ್ತು ಅದಕ್ಕಾಗಿಯೇ ಅಂತಹ ಕಾನೂನು ತರಬಹುದು ಎಂದು ರಜಪೂತ್ ಹೇಳಿದರು.

ಇದನ್ನು ಓದಿ: ಸಿಎಎ ಈ ನೆಲದ ಕಾನೂನು, ಅದರ ಜಾರಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಅಮಿತ್‌ ಶಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read