Homeಮುಖಪುಟಅಕ್ರಮ ಗಣಿಗಾರಿಕೆ ಪ್ರಕರಣ: ಹೇಮಂತ್ ಸೊರೇನ್ ಆಪ್ತರ ಮೇಲೆ ಇಡಿ ದಾಳಿ

ಅಕ್ರಮ ಗಣಿಗಾರಿಕೆ ಪ್ರಕರಣ: ಹೇಮಂತ್ ಸೊರೇನ್ ಆಪ್ತರ ಮೇಲೆ ಇಡಿ ದಾಳಿ

- Advertisement -
- Advertisement -

ಅಕ್ರಮ ಗಣಿಗಾರಿಕೆ ಮತ್ತು ಹಣ ವರ್ಗಾವಣೆ ತನಿಖೆಯ ಭಾಗವಾಗಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯವು ಬುಧವಾರ ಬೆಳಗ್ಗೆ ರಾಂಚಿಯಲ್ಲಿ ದಾಳಿ ನಡೆಸಿದೆ.

ಇಡಿ ದಾಳಿಗೆ ಒಳಗಾಗಿರುವ ಅಭಿಷೇಕ್ ಪ್ರಸಾದ್ ಅವರು ಸಿಎಂ ಹೇಮಂತ್ ಅವರ ಮಾಧ್ಯಮ ಸಲಹೆಗಾರರಾಗಿದ್ದಾರೆ. ಅಭಿಷೇಕ್ ಪ್ರಸಾದ್ ಅವರ ನಿವಾಸ ಮತ್ತು ಸಾಹೇಬ್‌ಗಂಜ್ ಜಿಲ್ಲಾಧಿಕಾರಿ ನಿವಾಸ ಸೇರಿದಂತೆ 12 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇಡಿ ನೀಡಿದ ಸಮನ್ಸ್‌ಗಳನ್ನು ಮುಖ್ಯಮಂತ್ರಿ ನಿರ್ಲಕ್ಷಿಸಿದ್ದರಿಂದ ಈ ದಾಳಿಗಳು ನಡೆಯುತ್ತಿದ್ದು, ಈಗಾಗಲೇ ಅವರು ತಮ್ಮ ಆಸ್ತಿಯ ಎಲ್ಲ ವಿವರಗಳನ್ನು ತನಿಖಾ ಸಂಸ್ಥೆಗೆ ಒದಗಿಸಿದ್ದಾರೆ. ಈಗ ನೀಡುತ್ತಿರುವ ಸಮನ್ಸ್ ಕಾನೂನುಬಾಹಿರವಾಗಿದೆ ಎಂದು ಹೇಮಂತ್ ಸೋರೆನ್ ಆಪ್ತರು ಹೇಳಿದ್ದಾರೆ.

ಹೇಮಂತ್ ಸೊರೇನ್ ಅವರಿಗೆ 7ನೇ ಸಮನ್ಸ್ ಕಳುಹಿಸಲಾಗಿದ್ದು, ವಿಚಾರಣೆಗೆ ದಿನಾಂಕ, ಸಮಯ ಮತ್ತು ಸ್ಥಳವನ್ನು ನಿರ್ಧರಿಸುವಂತೆ ಇಡಿ ಕೇಳಿದೆ. ಎರಡು ದಿನಗಳ ನಂತರ ಸಮನ್ಸ್‌ಗೆ ಪ್ರತಿಕ್ರಿಯಿಸಿರುವ ಅವರು, ‘ಇಡಿ ಪಕ್ಷಪಾತದ ತನಿಖೆ ನಡೆಸುತ್ತಿದೆ’ ಎಂದು ಹೇಳಿದ್ದರು.

‘ಹೇಮಂತ್ ಸೊರೇನ್‌ಗೆ ಇದು ಕೊನೆಯ ಅವಕಾಶ’ ಎಂದು ಇಡಿ ಹೇಳಿದೆ. ‘ನಿಮಗೆ ನೀಡಿದ ಸಮನ್ಸ್‌ಗೆ ವಿಧೇಯನಾಗಿ ನೀವು ಜಾರಿ ನಿರ್ದೇಶನಾಲಯದ ಕಚೇರಿಗೆ ಬಂದಿಲ್ಲವಾದ್ದರಿಂದ, 2002ರ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 50ರ ಅಡಿಯಲ್ಲಿ ನಿಮ್ಮ ಹೇಳಿಕೆಯನ್ನು ಸ್ಥಳದಲ್ಲಿ ದಾಖಲಿಸಲು ನಾವು ನಿಮಗೆ ಈ ಕೊನೆಯ ಅವಕಾಶವನ್ನು ನೀಡುತ್ತೇವೆ. ನಿಮಗೆ ಅನುಕೂಲಕರವಾಗುವ ದಿನಾಂಕ ಮತ್ತು ಸಮಯದ ಬಗ್ಗೆ ಬರೆದು, ಸಮನ್ಸ್‌ಗಳನ್ನು ಸ್ವೀಕರಿಸಿದ 7 ದಿನಗಳ ಒಳಗೆ ಕಳುಹಿಸಬೇಕು’ ಎಂದು ತನ್ನ 7ನೇ ಸಮನ್ಸ್‌ನಲ್ಲಿ ತಿಳಿಸಿದೆ.

ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸೊರೇನ್‌ಗೆ ಇಡಿ ಮೊದಲ ಬಾರಿಗೆ ಆಗಸ್ಟ್ ಮಧ್ಯದಲ್ಲಿ ಸಮನ್ಸ್ ನೀಡಿತ್ತು. ಆಗಸ್ಟ್ 24 ಮತ್ತು ಸೆಪ್ಟೆಂಬರ್ 9 ರಂದು ಹಾಜರಾಗುವಂತೆ ಅವರನ್ನು ಮತ್ತೆ ಕೇಳಲಾಯಿತು. ಮುಂದಿನ ಸಮನ್ಸ್ ಸೆಪ್ಟೆಂಬರ್ 23, ಅಕ್ಟೋಬರ್ 4 ಮತ್ತು ಡಿಸೆಂಬರ್ 12 ರಂದು ನೀಡಲಾಗಿದೆ.

ಹೇಮಂತ್ ಸೋರೆನ್ ಪತ್ನಿ ಕಲ್ಪನಾ ಮುಂದಿನ ಮುಖ್ಯಮಂತ್ರಿ?

ಹೇಮಂತ್ ಪತ್ನಿ ಕಲ್ಪನಾ ಸೊರೇನ್ ಅವರನ್ನು ಮುಖ್ಯಮಂತ್ರಿ ಮಾಡಲು ಜಾರ್ಖಂಡ್ ಮುಕ್ತಿ ಮೋರ್ಚಾದೊಳಗೆ ಸಿದ್ಧತೆ ನಡೆದಿದೆ ಎಂಬ ಊಹಾಪೋಹಗಳು ಹರಿದಾಡಿದ್ದವು. ‘ಈ ಊಹಾಪೋಹಗಳಲ್ಲಿ ಸ್ವಲ್ಪವೂ ಸತ್ಯವಿಲ್ಲ. ಬಿಜೆಪಿಯ ಕಲ್ಪನೆಯ ಫಲಿತಾಂಶ’ ಎಂದು ಮುಖ್ಯಮಂತ್ರಿ ಹೇಳಿದರು.

‘ಮುಂದಿನ ಚುನಾವಣೆಯಲ್ಲಿ ನನ್ನ ಪತ್ನಿ ಸ್ಪರ್ಧಿಸುವ ಸಾಧ್ಯತೆಯು ಬಿಜೆಪಿಯ ಸಂಪೂರ್ಣ ಕಲ್ಪನೆಯಾಗಿದೆ. ಅವರಿಗೆ ಅಧಿಕಾರ ಹಸ್ತಾಂತರಿಸುವ ಊಹಾಪೋಹಗಳು ಸುಳ್ಳು ನಿರೂಪಣೆಯನ್ನು ನಿರ್ಮಿಸಲು ಬಿಜೆಪಿ ಹೆಣೆದ ಬಟ್ಟೆಯಾಗಿದೆ’ ಎಂದು ಹೇಮಂತ್ ಹೇಳಿದ್ದಾರೆ.

ಇದನ್ನೂ ಓದಿ; ದೆಹಲಿ ಅಬಕಾರಿ ನೀತಿ ಪ್ರಕರಣ: ಇಡಿ ವಿಚಾರಣೆಗೆ ಹಾಜರಾಗದ ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...