Homeಮುಖಪುಟಶೇ.74.1 ಭಾರತೀಯರು ಆರೋಗ್ಯಕರ ಆಹಾರ ಪಡೆಯಲು ಅಸಮರ್ಥರು: ಎಫ್ಎಒ ವರದಿ

ಶೇ.74.1 ಭಾರತೀಯರು ಆರೋಗ್ಯಕರ ಆಹಾರ ಪಡೆಯಲು ಅಸಮರ್ಥರು: ಎಫ್ಎಒ ವರದಿ

- Advertisement -
- Advertisement -

2021ರಲ್ಲಿ ಶೇ. 74.1 ಭಾರತೀಯರು ಆರೋಗ್ಯಕರ ಆಹಾರ ಪಡೆಯಲು ಅಸಮರ್ಥರಾಗಿದ್ದರು ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್ಎಒ) ಮಂಗಳವಾರ ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ.

ಆಹಾರ ಭದ್ರತೆ ಮತ್ತು ಪೋಷಣೆಯ 2023ರ ಪ್ರಾದೇಶಿಕ ಅವಲೋಕನದ ಪ್ರಕಾರ, 2020ರಲ್ಲಿ ಶೇ. 76.2ರಷ್ಟು ಭಾರತೀಯರು ಆರೋಗ್ಯಕರ ಆಹಾರವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. 2021ರಲ್ಲಿ ಈ ಸಂಖ್ಯೆ ಸ್ವಲ್ಪ ಸುಧಾರಣೆ ಕಂಡಿದೆ.

ವಿಶ್ವಸಂಸ್ಥೆಯ ಪ್ರಕಾರ ವಯಸ್ಕರ ಆರೋಗ್ಯಕರ ಆಹಾರವೆಂದರೆ ದಿನಕ್ಕೆ ಕನಿಷ್ಠ 400 ಗ್ರಾಂ. ಹಣ್ಣು, ತರಕಾರಿಗಳು, ಬೀಜಗಳು ಮತ್ತು ಧಾನ್ಯಗಳನ್ನು ಒಳಗೊಂಡಿರುವ ಆಹಾರವಾಗಿದೆ.

ದಕ್ಷಿಣ ಏಷ್ಯಾದ ಇತರ ಭಾಗಗಳನ್ನು ಗಮನಿಸಿದರೆ ಶೇ.82.8 ಪಾಕಿಸ್ತಾನಿ ನಾಗರಿಕರು 2021ರಲ್ಲಿ ಆರೋಗ್ಯಕರ ಆಹಾರ ಪಡೆಯಲು ಸಾಧ್ಯವಾಗಿಲ್ಲ ಎಂದು ಜಾಗತಿಕ ಆಹಾರ ಭದ್ರತಾ ಏಜೆನ್ಸಿಯ ವರದಿಯು ತೋರಿಸಿದೆ. ಇದು ಏಷ್ಯಾ-ಪೆಸಿಫಿಕ್ ವಲಯದ ರಾಷ್ಟ್ರಗಳ ಪೈಕಿ ಅತೀ ಹೆಚ್ಚಿನ ದರವಾಗಿದೆ.

ನೆರೆಯ ಬಾಂಗ್ಲಾದೇಶದಲ್ಲಿ ಶೇ. 66.1 ಮತ್ತು ನೇಪಾಳದಲ್ಲಿ ಶೇ. 76.4 ಮತ್ತು ಮಾಲ್ಡೀವ್ಸ್‌ನಲ್ಲಿ ಶೇ. 1.2ರಷ್ಟು ನಾಗರಿಕರು ಮಾತ್ರ 2021ರಲ್ಲಿ ಆರೋಗ್ಯಕರ ಆಹಾರ ಪಡೆದಿಲ್ಲ ಎಂದು ಎಫ್ಎಒ ವರದಿ ತಿಳಿಸಿದೆ.

ಆಹಾರದ ವೆಚ್ಚವನ್ನು ಆದಾಯದ ಹೆಚ್ಚಳದೊಂದಿಗೆ ಹೊಂದಿಸದಿದ್ದರೆ, ಹೆಚ್ಚಿನ ಜನರು ಆರೋಗ್ಯಕರ ಆಹಾರ ಪಡೆಯಲು ವಿಫಲರಾಗುತ್ತಾರೆ. ಅದೇ ಸಮಯದಲ್ಲಿ ಆದಾಯ ಕುಸಿದಂತೆ ಆಹಾರದ ವೆಚ್ಚ ಏರಿಕೆಯಾದರೆ ಒಂದು ಸಂಯುಕ್ತ ಪರಿಣಾಮ ಸಂಭವಿಸುತ್ತದೆ. ಇದು ಇನ್ನಷ್ಟು ಜನರು ಆರೋಗ್ಯಕರ ಆಹಾರ ಪಡೆಯಲು ಸಾಧ್ಯವಾಗದಂತೆ ಮಾಡುತ್ತದೆ ಎಂದು ಎಫ್ಎಒ ಎಚ್ಚರಿಸಿದೆ.

2020 ಮತ್ತು 2021 ರ ನಡುವೆ ಪೂರ್ವ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಒಟ್ಟಾರೆ ಪರಿಸ್ಥಿತಿಗಳು ಸುಧಾರಿಸಿದೆ. ಕೋವಿಡ್ ಸಮಯದಲ್ಲಿ ಸಮಸ್ಯೆ ಹೆಚ್ಚಾಗಿದೆ ಎಂದು ಎಫ್ಎಒ ತಿಳಿಸಿದೆ.

ಕೋವಿಡ್ ಸಮಯದಲ್ಲಿ ಏಕಾಏಕಿ ಉಂಟಾದ ಕೆಲಸದ ಕೊರತೆ, ಆಹಾರ ವ್ಯವಸ್ಥೆ ಮತ್ತು ಮಾರುಕಟ್ಟೆಗಳ ಸಮಸ್ಯೆ ಬಡ ಕುಟುಂಬಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿತ್ತು. ಇದರಿಂದ ಹೆಚ್ಚಿನ ಜನರು ಆರೋಗ್ಯಕರ ಆಹಾರ ಪಡೆಯಲು ಸಾಧ್ಯವಾಗಿಲ್ಲ ಎಂದು ಎಫ್ಎಒ ಹೇಳಿದೆ.

ಇದನ್ನೂ ಓದಿ : ಗಾಝಾದಲ್ಲಿ ಕದನ ವಿರಾಮ: ವಿಶ್ವಸಂಸ್ಥೆ ನಿರ್ಣಯ ಬೆಂಬಲಿಸಿದ ಭಾರತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...