Homeಮುಖಪುಟರಷ್ಯಾ ಅಧ್ಯಕ್ಷೀಯ ಚುನಾವಣೆ: ಯುದ್ಧ ವಿರೋಧಿಸಿದ್ದ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ

ರಷ್ಯಾ ಅಧ್ಯಕ್ಷೀಯ ಚುನಾವಣೆ: ಯುದ್ಧ ವಿರೋಧಿಸಿದ್ದ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ

- Advertisement -
- Advertisement -

ಉಕ್ರೇನ್ ಮೇಲಿನ ದಾಳಿ ವಿರೋಧಿಸಿದ್ದ ರಷ್ಯಾದ ರಾಜಕಾರಣಿಯ ನಾಮಪತ್ರವನ್ನು ಅಲ್ಲಿನ ಚುನಾವಣಾ ಆಯೋಗ ತಿರಸ್ಕರಿಸಿದೆ. ನಾಮಪತ್ರ ಸಲ್ಲಿಕೆ ವೇಳೆ ನೀಡಿದ್ದ ದಾಖಲೆಗಳಲ್ಲಿ ದೋಷದ ಕಾರಣ ನೀಡಿ ರಷ್ಯಾದ ಕೇಂದ್ರ ಚುನಾವಣಾ ಆಯೋಗ ನಾಮಪತ್ರ ತಿರಸ್ಕರಿಸಿದೆ.

ಮಾಜಿ ಸಂಸತ್ ಸದಸ್ಯೆ ಯೆಕತೆರಿನಾ ಡುಂಟ್ಸೋವ ಅವರ ನಾಮಪತ್ರ ತಿರಸ್ಕರಿಸಲಾಗಿದೆ. ಯೆಕತೆರಿನಾ ಉಕ್ರೇನ್‌ ಮೇಲಿನ ರಷ್ಯಾ ದಾಳಿಯನ್ನು ವಿರೋಧಿಸಿದ್ದರು. ಶಾಂತಿಗಾಗಿ ಕರೆ ನೀಡಿದ್ದರು. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗಿದ್ದ ಡುಂಟ್ಸೋವ, ಶಾಂತಿಯುತ, ಸ್ನೇಹಪರ ಮತ್ತು ಗೌರವ ತತ್ತ್ವದ ಮೇಲೆ ಎಲ್ಲರೊಂದಿಗೆ ಸಹಕರಿಸಲು ಸಿದ್ಧವಾಗಿರುವ ಮಾನವೀಯ ರಷ್ಯಾ ಕಟ್ಟುವ ದೃಷ್ಟಿಕೋನ ಹೊಂದಿದ್ದಾರೆ.

ಡಿಸೆಂಬರ್ 23 ರಂದು ಕೇಂದ್ರ ಚುನಾವಣಾ ಆಯೋಗವು ನನ್ನ ಬೆಂಬಲಿಗರ ಗುಂಪು ಸಲ್ಲಿಸಿದ್ದ ನಾಮಪತ್ರವನ್ನು ತಿರಸ್ಕರಿಸಿದೆ ಎಂದು ಡುಂಟ್ಸೋವ ಟೆಲಿಗ್ರಾಮ್ ಸಂದೇಶದ ಮೂಲಕ ಮಾಹಿತಿ ನೀಡಿದ್ದಾರೆ.

ಡುಂಟ್ಸೋವ ಅವರಿಗೆ ಸಂಬಂಧಿಸಿದ ಟೆಲಿಗ್ರಾಮ್ ಚಾನೆಲ್ ಪ್ರಕಾರ, ಚುನಾವಣಾ ಆಯೋಗವು ಅವರ ನಾಮಪತ್ರದಲ್ಲಿ ಹೆಸರುಗಳ ಕಾಗುಣಿತದಲ್ಲಿನ ತಪ್ಪುಗಳು ಸೇರಿದಂತೆ 100 ದೋಷಗಳನ್ನು ಕಂಡುಹಿಡಿದಿದೆ.

ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ರಷ್ಯಾದ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಡುಂಟ್ಸೋವ ಅವರು ತಿಳಿಸಿದ್ದಾರೆ.

ರಷ್ಯಾದ ಕಾನೂನಿನ ಪ್ರಕಾರ ಪಕ್ಷೇತರ ಅಭ್ಯರ್ಥಿಯ ನಾಮಪತ್ರಕ್ಕೆ ಕನಿಷ್ಟ 500 ಬೆಂಬಲಿಗರು ನಾಮನಿರ್ದೇಶನ ಮಾಡಬೇಕು. ಈ ಪ್ರಕಾರ ತಾನು 500 ಬೆಂಬಲಿಗರ ನಾಮನಿರ್ದೇಶನ ಹೊಂದಿದ್ದ ನಾಮಪತ್ರವನ್ನು ಡಿಸೆಂಬರ್ 20ರಂದು ಸಲ್ಲಿಸಿದ್ದೆ. ಡಿಸೆಂಬರ್ 23ರಂದು ನನ್ನ ನಾಮನಿರ್ದೇಶನದ ಗುಂಪನ್ನು ಮಾನ್ಯ ಮಾಡಲು ಚುನಾವಣಾ ಆಯೋಗ ನಿರಾಕರಿಸಿದೆ. ಈಗ ಮತ್ತೊಮ್ಮೆ ಬೆಂಬಲಿಗರ ಗುಂಪಿನಿಂದ ನಾಮನಿರ್ದೇಶನ ಮಾಡಲು ಸಮಯವಿಲ್ಲದ ಕಾರಣ, ತನ್ನನ್ನು ಅಭ್ಯರ್ಥಿಯಾಗಿ ಹೆಸರಿಸುವಂತೆ `ಯಬ್ಲೋಕೊ’ ಪಕ್ಷದ ಮುಖಂಡರಿಗೆ ಕೋರಿಕೆ ಸಲ್ಲಿಸಿದ್ದೇನೆ ಎಂದು ಡುಂಟ್ಸೋವ ಹೇಳಿದ್ದಾರೆ.

ಯಬ್ಲೋಕೊ ಪಕ್ಷದ ಸ್ಥಾಪಕ ಗ್ರೆಗೊರಿ ಯವ್ಲಿಂಸ್ಕಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿದು ಬಂದಿದೆ. ಆದರೆ, ಅವರು ಡುಂಟ್ಸೋವ ಅವರನ್ನು ಬೆಂಬಲಸುವ ಕುರಿತು ಇನ್ನೂ ನಿರ್ಧಾರವಾಗಿಲ್ಲ.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಕೇಂದ್ರ ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ರಷ್ಯಾದ ಕಾನೂನಿನ ಅಡಿಯಲ್ಲಿ, ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವುದಾದರೆ ಕನಿಷ್ಠ 500 ಬೆಂಬಲಿಗರು ನಾಮನಿರ್ದೇಶನ ಮಾಡಬೇಕು ಮತ್ತು 40ಕ್ಕೂ ಹೆಚ್ಚಿನ ಪ್ರದೇಶಗಳಿಂದ ಕನಿಷ್ಠ 300,000 ಬೆಂಬಲದ ಸಹಿಗಳನ್ನು ಸಂಗ್ರಹಿಸಬೇಕು.

ಇದನ್ನೂ ಓದಿ : ಚೀನಾ: ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕ್ರಮ, 6,300 ಜನರಿಗೆ ಶಿಕ್ಷೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುವ ಹಡಗಿಗೆ ಬಂದರಿನಲ್ಲಿ ನಿಲುಗಡೆ ನಿಷೇಧಿಸಿದ ಸ್ಪೇನ್

0
ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಹಡಗನ್ನು ಸ್ಪೇನ್ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಗುರುವಾರ ಹೇಳಿದ್ದಾರೆ. "ಇದೇ ಮೊದಲ ಬಾರಿಗೆ ನಾವು ಇಸ್ರೇಲ್‌ಗೆ ತೆರಳುತ್ತಿದ್ದ ಹಡಗಿಗೆ...