ಅಹಮದಾಬಾದ್‌ನಲ್ಲಿರುವ ಮೊಟೆರಾದ ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದೆ ಎಂದು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಬುಧವಾರ ಘೋಷಿಸಿದ್ದಾರೆ.
ವ್ಯಾಪಕವಾದ ನವೀಕರಣ ಕಾರ್ಯಗಳ ನಂತರ ಕ್ರೀಡಾಂಗನವನ್ನು ಇತ್ತೀಚೆಗೆ ಪುನಃ ತೆರೆಯಲಾಗಿದ್ದು ಅದನ್ನು ರಾಷ್ಟ್ರಪತಿ ಉದ್ಘಾಟಿಸಿದರು. ಹೊಸದಾಗಿ ನವೀಕೃತ ಕ್ರೀಡಾಂಗಣದಲ್ಲಿ ಇದೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಭಾರತ-ಇಂಗ್ಲೇಂಡ್ ನಡುವೆ ನಡೆಯುತ್ತಿರುವ ನಾಲ್ಕು ಪಂದ್ಯಗಳ ಸರಣಿಯ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯಾಟ ಬುಧವಾರದಿಂದ ಇಲ್ಲಿ ಪ್ರಾರಂಭವಾಗುತ್ತದೆ.
ಹೊಸದಾಗಿ ನವೀಕೃತಗೊಂಡ ಕ್ರೀಡಾಂಗಣವು 1,10,000 ಆಸನಗಳನ್ನು ಹೊಂದಿದ್ದು, ಇದೀಗ ಅದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ.
Watch LIVE: President Kovind inaugurates the Motera Cricket Stadium in Ahmedabad, Gujarat https://t.co/4hMDbMJqSf
— President of India (@rashtrapatibhvn) February 24, 2021
ಇದನ್ನೂ ಓದಿ: ನಾನು ಶಂಖ ಊದುತ್ತೇನೆ, ಮಾಸ್ಕ್ ಧರಿಸುವ ಅಗತ್ಯವಿಲ್ಲ – ಬಿಜೆಪಿ ಸಚಿವೆ ಉಷಾ ಠಾಕೂರ್
ಉದ್ಘಾಟನಾ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ, ಬಿಸಿಸಿಐ ಕಾರ್ಯದರ್ಶಿ ಜೇ ಶಾ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಉಪಸ್ಥಿತರಿದ್ದರು.
“ಮೊಟೆರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ಮತ್ತು ನರೇಂದ್ರ ಮೋದಿ ಕ್ರೀಡಾಂಗಣದೊಂದಿಗೆ ನಾರನ್‌ಪುರದಲ್ಲಿಯೂ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲಾಗುವುದು. ಈ ಮೂರು ಯಾವುದೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲು ಸಜ್ಜುಗೊಳ್ಳಲಿದೆ. ಅಹಮದಾಬಾದ್ ಅನ್ನು ಭಾರತದ ‘ಕ್ರೀಡಾ ನಗರ’ ಎಂದು ಕರೆಯಲಾಗುತ್ತದೆ” ಎಂದು ಉದ್ಘಾಟನಾ ಸಮಾರಂಭದಲ್ಲಿ ಅಮಿತ್ ಶಾ ಹೇಳಿದ್ದಾರೆ.
A momentous day for Indian cricket. Addressing the inaugural ceremony of world’s largest cricket stadium in Ahmedabad. Watch live! https://t.co/1fzFHwnkNR
— Amit Shah (@AmitShah) February 24, 2021
ಕಳೆದ ತಿಂಗಳು ಎರಡು ಸೆಟ್‌ಗಳ ಆಂಜಿಯೋಪ್ಲ್ಯಾಸ್ಟಿಗೆ ಒಳಗಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ: ಕೇಂದ್ರ ಸಚಿವರು ಸುಳ್ಳು ಹೇಳಿದರೇ?
