Homeಅಂಕಣಗಳುಸರ್ವೋದಯ ಸಮಾಜ

ಸರ್ವೋದಯ ಸಮಾಜ

- Advertisement -
- Advertisement -

ಎಚ್.ಎಸ್ ದೊರೆಸ್ವಾಮಿ |

ಸರ್ವೋದಯವೆಂದರೆ ವಿಶಿಷ್ಟ ಜನರ ಅಭ್ಯುದಯವಲ್ಲ. ಒಬ್ಬರ ಹಿತ ಇನ್ನೊಬ್ಬರ ಹಿತಕ್ಕೆ ವಿರೋಧಿಯಾಗದ ವ್ಯವಸ್ಥೆ ಅದು. ಸರ್ವರ ಎಂದರೆ ನಮ್ಮ ಕುಟುಂಬದಿಂದ ಆರಂಭವಾಗಿ ಈ ಉದಯವಿಶ್ವವನ್ನೇ ಆವರಿಸಬೇಕು. ಅದು ಕೆಲವರ ಹಿತವನ್ನಲ್ಲ ಬಯಸುವುದು. ಬಹುಜನರ ಹಿತವನ್ನೂ ಅಲ್ಲ. ಅದು ಸರ್ವರ ಹಿತ. ಸರ್ವೋದಯ ಸಮಾಜ ಪ್ರೀತಿಯ ತಳಹದಿಯ ಮೇಲೆ ನಿರ್ಮಾಣವಾಗುತ್ತದೆ.
ಸರ್ವೋದಯ ಎಂಬುದು ಜನತೆಯ ಸಮಾಜವಾದ. ಬಲಾತ್ಕಾರದಿಂದ ಹೇರಲ್ಪಡದ ಸ್ವಂತ ಇಚ್ಛೆಯಿಂದ ರೂಪುಗೊಳ್ಳುವ ಸಮಾಜವಾದವೇ ಯತಾರ್ಥವಾದುದು. ಅದೇ ವಾಸ್ತವಿಕ ಸಮಾಜವಾದ. ಹಳ್ಳಿ ಪಟ್ಟಣಗಳಲ್ಲಿ ಸಾಮೂಹಿಕ ಮನೋಭಾವ, ಸಾಮೂಹಿಕತೆ ಹಾಗೂ ಪರಸ್ಪರ ಸಹಕಾರದ ಭಾವನೆಯನ್ನು ಜಾಗೃತಿಗೊಳಿಸಿ, ಗ್ರಾಮಸ್ವರಾಜ್ಯ ಭಾವನೆಗೆ ಬೇಕಾದ ಬುನಾದಿಯನ್ನು ಸಿದ್ಧಪಡಿಸುತ್ತದೆ.
ವ್ಯಕ್ತಿಗಾಗಿ ಸಮಷ್ಠಿ, ಸಮಷ್ಠಿಯ ಅಭ್ಯುದಯಕ್ಕಾಗಿ ವ್ಯಕ್ತಿ, ನಾವೆಲ್ಲ ಒಂದು ಎಂಬ ಈ ಭಾವನೆಯನ್ನು ಸಮಾಜದಲ್ಲಿ ಬೆಳೆಸಬೇಕು. ಇದೇ ಗ್ರಾಮಭಾವನೆ. ಸಮಾನ ಭಾವನೆಯ ತಳಹದಿಯ ಮೇಲೆ ನಾವು ಗ್ರಾಮಗಳನ್ನು ರೂಪಿಸಬೇಕು. ಸಮುದಾಯಭಾವನೆ ಹಳ್ಳಿಗಳಲ್ಲಿ ಕಾಣುತ್ತಿಲ್ಲ. ಇದನ್ನು ಆಧರಿಸಿ ನಾವು ಅಭಿವೃದ್ದಿಯ ಕೆಲಸ ಮಾಡಬಹುದು. ಮನುಷ್ಯ ಸಮಾಜ ನಿರ್ಮಿಸುವುದು ನಮ್ಮ ಗುರಿಯಾಗಬೇಕು. ಹಳ್ಳಿಗಳ ನವನಿರ್ಮಾಣಕ್ಕಾಗಿ ಸಾಮುದಾಯಿಕ ಜಾಗೃತಿ ಅತ್ಯಗತ್ಯ. ಜನಶಕ್ತಿಯನ್ನು ಜಾಗೃತಗೊಳಿಸುವ ಮೂಲಕ ನಾವು ಗ್ರಾಮಸ್ವರಾಜ್ಯವನ್ನು ಸಾಧಿಸಬೇಕು. ಶ್ರೇಯ ಮತ್ತು ಕರುಣೆಯ ಮಾರ್ಗದಿಂದ ಸಾಮಾಜಿಕ ಕ್ರಾಂತಿ ತರಲು ಸಾಧ್ಯ. ತಿರಸ್ಕಾರ, ದ್ವೇಷಬುದ್ಧಿ ಮತ್ತು ಹಿಂಸೆಯಿಂದ ಅಶಾಂತಿ ಸಮಾಜದಲ್ಲಿ ಹರಡುತ್ತದೆ.
ಗ್ರಾಮಸ್ವರಾಜ್ಯವೆಂದರೆ ಪರಿಪೂರ್ಣ ಪ್ರಜಾರಾಜ್ಯ. ಸ್ವಾವಲಂಬನೆ ಅದರ ಗುರಿ. ಜೀವನಾವಶ್ಯಕತೆಯ ಎಲ್ಲವೂ ಗ್ರಾಮದಲ್ಲೇ ಉತ್ಪತ್ತಿ ಮಾಡಬೇಕು. ಎಲ್ಲಾ ಗ್ರಾಮಗಳು ಸ್ವಾವಲಂಬಿ, ಸ್ವಯಂಪರಿಪೂರ್ಣವಾಗಬೇಕು. ಗ್ರಾಮಗ್ರಾಮಗಳ ಮಧ್ಯೆ ಪರಸ್ಪರ ಅವಲಂಬನೆ ಅತಿಮುಖ್ಯ. ಪಕ್ಷರಹಿತ ಪ್ರಜಾಪ್ರಭುತ್ವ ಹಳ್ಳಿಗಳಲ್ಲಿ ಜಾರಿಗೆ ಬರಬೇಕು,
ಗ್ರಾಮದ ನೆಲ, ಜಲ, ಪ್ರಕೃತಿ ಸಂಪತ್ತು ಎಲ್ಲಾ ಗ್ರಾಮದ ಎಲ್ಲಾ ಜನರ ಸ್ವತ್ತಾಗಬೇಕು. ಮೂಲಭೂತ ತತ್ವಗಳನ್ನು ಸಂಶೋಧಿಸುವುದರಲ್ಲಿ ವಿನೋಬಾ ಅಗ್ರಗಣ್ಯರು. ಅವರು ತೀಕ್ಷ್ಣ ಬುದ್ಧಿಯ ವ್ಯಕ್ತಿ. ಅಹಿಂಸಾ ಮೂಲವಾದ ಸರ್ವೋದಯದ ಶಾಂತ ಚಳವಳಿಗೆ ಅವಕಾಶ ಕೊಡದಿದ್ದರೆ ಉಗ್ರ ಹಿಂಸಾ ಶಕ್ತಿಗಳು ಸಮಾಜವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಹಿಂಸಕ ಸಮಾಜವನ್ನು ಸೃಷ್ಟಿಸುವುದರಲ್ಲಿ ಫಲಕಾರಿಯಾಗುತ್ತಾರೆ. ಅದರಿಂದ ಆಗವ ಹಾನಿ ನಷ್ಟಗಳಿಗೆ ಪರಿಮಿತಿಯೂ ಇರುವುದಿಲ್ಲ. ಈ ನಿಷ್ಠುರ, ನಿರ್ದಾಕ್ಷಿಣ್ಯ ಸತ್ವವನ್ನು ಎಲ್ಲರೂ ಗ್ರಹಿಸಿದರೆ ಮಾತ್ರ ದೇಶದಲ್ಲಿ ಶಾಂತಿ ನೆಲೆಸುವುದು.
ವಿನೋಬಾರವರ ಪರದುಃಖ ಕಾತುರತೆ, ಜೀವನದ ಏಕತೆ ಮತ್ತು ಆತ್ಮದ ಪ್ರಖಂಡತೆಗಳು, ಅವರ ಆಂತರಿಕ ಚಿಂತನೆ ಮತ್ತು ಆಳವಾದ ಅನುಭವದಿಂದ ಹೊರಹೊಮ್ಮಿದೆ. ವಿನೋಬಾರವರಲ್ಲಿ ಸತ್ಯ, ಪ್ರೇಮ, ಕರುಣೆ ಸಾಕಾರಗೊಂಡಿದೆ. ಗ್ರಾಮಗಳಲ್ಲಿ ಭೂ ಹೀನರು ಯಾರು ಇರಕೂಡದು. ಭೂಮಿಗೆ ಮಾಲೀಕ ಎಂಬುದು ಅಪವಿತ್ರ ವಿಚಾರ. ಭೂಮಿಯ ಸೇವೆ ಮಾಡುವ ಎಲ್ಲರಿಗೂ ಜಮೀನು ಸಿಗಬೇಕು. ಭೂದಾನದ ಕೊನೆಯ ಹೆಜ್ಜೆ ಗ್ರಾಮದಾನ. ಗ್ರಾಮದಲ್ಲಿರುವ ಪ್ರತಿಯೊಬ್ಬನಿಗೂ ತನ್ನ ಹೊಟ್ಟೆ ಹೊರೆಯಲು ಬೇಕಾದಷ್ಟು ಭೂಮಿ ಸಿಗಲೇಬೇಕು. ಅಹಿಂಸೆಯ ಆಧಾರದ ಮೇಲೆ ವರ್ಗರಹಿತ, ಶಾಸನ ಮುಕ್ತ, ಶೋಷಣೆ ರಹಿತ, ಜಾತ್ಯಾತೀತ ಸಮಾಜವನ್ನು ಸ್ಥಾಪಿಸುವ ಸಿದ್ಧಾಂತವೇ ಸರ್ವೋದಯ. ವ್ಯಕ್ತಿ ಮತ್ತು ಸಮಷ್ಠಿಯ ಉದ್ಧಾರದಲ್ಲಿ ಸಮಗ್ರ ರಾಷ್ಟ್ರಹಿತ ಅಡಗಿದೆ.
ದೀನದಲಿತರು, ದುರ್ಬಲರು ಸಮಾಜದಲ್ಲಿರುವವರೆಗೂ ಸರ್ವಜನರ ಹಿತದ ಸರ್ವೋದಯ ಸಮಾಜ ಸ್ಥಾಪನೆಯಾಗಲಾರದು. ದೀನ ದಲಿತರ, ದುರ್ಬಲರ ಅಭ್ಯುದಯ ಸಾಧಿಸಿದ್ದರೆ ಸರ್ವೋದಯ ಸಮಾಜ ರಚನೆಯಾದಂತೆ.
ಗ್ರಾಮದಲ್ಲಿ ಬೆಳೆಯುವ ಕಚ್ಚಾ ವಸ್ತುಗಳನ್ನು ಪ್ರೊಸೆಸಿಂಗ್ ಮಾಡಬೇಕು. ನಾಲ್ಕು ಹಳ್ಳಿಗಳಿಗೆ ಸೇರಿದಂತೆ ಒಂದು ಸಣ್ಣ ಕೈಗಾರಿಕೆ ಸ್ಥಾಪನೆಯಾಗಬೇಕು. ವ್ಯವಸಾಯ ಮತ್ತು ಕೈಗಾರಿಕೆ ಎಲ್ಲ ಗ್ರಾಮಗಳಲ್ಲೂ ಒಟ್ಟೊಟ್ಟಿಗೆ ನಡೆದರೆ, ಹಳ್ಳಿಗಳ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ.
ಹಿಂದೆ ನಮ್ಮ ಹಳ್ಳಿಗಳಲ್ಲಿ ಎಲ್ಲಾ ಗ್ರಾಮ ಕೈಗಾರಿಕೆಗಳಿದ್ದವು. ಕುಂಬಾರ, ಚಮ್ಮಾರ, ಬಡಗಿ, ಪ್ರಾರಿಕ, ನೇಯ್ಗೆಯವ, ಕಮ್ಮಾರ, ಎಲ್ಲ ಉದ್ಯಮಿಗಳು ಇದ್ದರು. ಮೇಲೆ ಹೇಳಿದ ಎಲ್ಲ ಉದ್ಯಮಿಗಳು ವ್ಯವಸಾಯ ಮಾಡುವವರಿಗೆ ಅವರಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ರೈತರು ತಾವು ಬೆಳೆದದ್ದರಲ್ಲಿ ಸ್ವಲ್ಪಭಾಗ ಅವರಿಗೆ ಕೊಡುತ್ತಿದ್ದರು. ಹೀಗೆ ಅವರು ಪರಸ್ಪರಾವಲಂಬನೆಯ ಸೂತ್ರವನ್ನು ಜಾರಿಗೊಳಿಸುತ್ತಿದ್ದರು.
ಬೃಹತ್ ಕೈಗಾರಿಕೆಗಳು ಅದಕ್ಕೆ ಬೇಕಾದ ಬೃಹತ್ ಯಂತ್ರಗಳು ಸೃಷ್ಟಿಯಾದ ಮೇಲೆ ಗ್ರಾಮೀಣ ಉದ್ಯೋಗಗಳು ಒಂದೊಂದಾಗಿ ಮುಚ್ಚಲ್ಪಟ್ಟವು. ಬೃಹತ್ ಕೈಗಾರಿಕೆಗಳು ಒಚಿss ಠಿಡಿoಜuಛಿಣioಟಿನಲ್ಲಿ ತೊಡಗಿ ಸ್ಪರ್ಧೆಗೆ ನಿಂತಿತಾಗಿ Pಡಿoಜuಛಿಣioಟಿ bಥಿ mಚಿsses ಸ್ಥಗಿತಗೊಂಡಿತು. ಗ್ರಾಮಗಳಲ್ಲಿದ್ದ ಉದ್ಯಮಗಳು ಮುಚ್ಚಿಹೋದವು. ಅವರೆಲ್ಲ ಹೊಟ್ಟೆಪಾಡಿಗಾಗಿ ಪಟ್ಟಣಗಳ ಕಡೆಗೆ ವಲಸೆ ಹೋದರು.
ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಸ್ವಯಂಚಾಲಿತ ಯಂತ್ರಗಳು, ರೋಬೋಟ್‍ಗಳು ಅಸ್ತಿತ್ವಕ್ಕೆ ಬಂದಂತೆ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದರು. ಹತ್ತು ಜನ ಕೆಲಸ ಮಾಡುವ ಕಡೆ ಇಬ್ಬರೇ ಬೇಕಾಯಿತು. ಉಳಿದ 8 ಜನರ ಕೆಲಸವನ್ನು ಯಂತ್ರವೇ ಮಾಡಲು ಆರಂಭಿಸಿತು. ಇದರಿಂದ ಕಾರ್ಮಿಕರು ಬೀದಿಪಾಲಾದರು. ನಿರುದ್ಯೋಗ ಸಮಸ್ಯೆ ಉಲ್ಭಣಗೊಂಡಿತು.
ಸಮಾಜದಲ್ಲಿ ಉಳ್ಳವರು-ನಿರ್ಗತಿಕರು, ಈ ಜಾತಿ-ಆ ಜಾತಿ, ಮೇಲು-ಕೀಳು, ಸ್ಪøಶ್ಯ-ಅಸ್ಪøಶ್ಯ, ವಿದ್ಯಾವಂತ-ನಿರಕ್ಷರಕುಕ್ಷಿ ಈ ಭೇದಾಸುರರ ಹಾವಳಿ ಹೆಚ್ಚಾಯಿತು. ಕುಡಿತ, ಹಾದರ, ಜೂಜು, ಸಟ್ಟಾ ವ್ಯಾಪಾರ, ಷೇರುಪೇಟೆ ವ್ಯಾಪಾರ, ಕುದುರೆಜೂಜು, ಡ್ಯಾನ್ಸ್ ಬಾರ್, ಹೆಣ್ಣು ಮಕ್ಕಳ ನಗ್ನಕುಣಿತ ಮುಂತಾದ ದುಷ್ಟವ್ಯಸನಗಳು ಹೆಚ್ಚಾದವು. ದುವ್ರ್ಯಸನಗಳು, ನಿರುದ್ಯೋಗ ಇವು ಜಾಸ್ತಿಯಾದಂತೆ, ಸಮಾಜದಲ್ಲಿ ಕೊಲೆ, ಸುಲಿಗೆ, ದೌರ್ಜನ್ಯ, ಚಾಕು ಚೂರಿ ಸಂಸ್ಕøತಿ ಎಲ್ಲ ಬೆಳೆಯಿತು. ಮತಾಂಧ ಹಿಂದುತ್ವ ಪ್ರತಿಪಾದಕರ ಹಾವಳಿಯಿಂದ ವಿಚಾರವಾದಿಗಳ ಅನ್ಯಮತೀಯರ ಸಾಲ್ಗೊಲೆ ಆರಂಭವಾಯಿತು. ಹೀಗಾಗಿ ಇಂದಿನ ಸಮಾಜ ಒಂದು ಹ್ಯೂಮನ್ ಜಂಗಲ್. ಇಲ್ಲಿರುವವು ಎರಡು ಕಾಲಿನ ದುಷ್ಟ ಪ್ರಾಣಿಗಳು.
ಈ ಸಾಮಾಜಿಕ ಪಿಡುಗುಗಳಿಂದ ಸಮಾಜವನ್ನು ಮುಕ್ತಗೊಳಿಸಲು ವಿಚಾರಕ್ರಾಂತಿಯನ್ನು ಸಮಾಜದಲ್ಲಿ ರೂಪಿಸಬೇಕಾಗಿದೆ.
ಕ್ರಾಂತಿ ಎಂದಾಕ್ಷಣ ರಕ್ತಕ್ರಾಂತಿಯ ನೆನಪಾಗುತ್ತದೆ. ಸರ್ವೋದಯ ಸಮಾಜವನ್ನು ವಿಚಾರಕ್ರಾಂತಿಯಿಂದ ಮಾತ್ರ ರೂಪಿಸಲು ಸಾಧ್ಯ. ಸರ್ವೋದಯ ಕ್ರಾಂತಿಯ ಬೀಜಗಳನ್ನು ಜನತೆಯ, ಅದಕ್ಕೂ ಮುಖ್ಯವಾಗಿ ಯುವಜನರ ಮನಸ್ಸಿನಲ್ಲಿ ಬಿತ್ತಬೇಕು. ವಿಚಾರ ಕ್ರಾಂತಿಯ ಈ ಬೀಜಗಳು ಜನರ ತಲೆಗಳಲ್ಲಿ ಸ್ಫೋಟಗೊಳ್ಳಬೇಕು. ಆಗ ಅದು ವಿಚಾರ ಕ್ರಾಂತಿಯ ಸ್ವರೂಪ ಪಡೆಯುತ್ತದೆ. ಈ ವಿಚಾರ ಕ್ರಾಂತಿಯನ್ನು ರಾಷ್ಟ್ರದ ತುಂಬ ಹರಡಲು ವಿಚಾರವಂತ ಯುವಜನರ ಪಡೆ ಸಿದ್ಧವಾಗಬೇಕು. ವಿಚಾರಕ್ರಾಂತಿ ಆಯಿತೆಂದರೆ ಹೊಸ ಸಮಾಜ ನಿರ್ಮಾನಕ್ಕೆ ಅಡಿಪಾಯ ಹಾಕಿದಂತೆ. ಈ ಅಡಿಪಾಯದ ಮೇಲೆ ಸರ್ವೋದಯ ಸಮಾಜವನ್ನು ನಿರ್ಮಾಣ ಮಾಡಬೇಕು. ಅನಿವಾರ್ಯವಾದರೆ ಶಾಂತಿಯುತ ಹೋರಾಟಕ್ಕೂ ಕಾರ್ಯಕರ್ತರು ತಯಾರಿರಬೇಕು. ದೇಶದ ತುಂಬ ಸಜ್ಜಾಗಿ ಇರುವ ಈ ಕ್ರಾಂತಿಕಾರಿ ಸರ್ವೋದಯ ಕಾರ್ಯಕರ್ತರು ಈ ಹೋರಾಟವನ್ನು ನಡೆಸಬೇಕು.
ಮೌಲ್ಯಗಳ ಬದಲಾವಣೆಯೂ ಕ್ರಾಂತಿ. ಈಗ ಚಾಲ್ತಿಯಲ್ಲಿರುವ ಎಲ್ಲಾ ಮೌಲ್ಯಗಳೂ ಸವಕಲಾಗಿವೆ. ಅವು ಭೇದಾಸುರರಂತೆ ಕೆಲಸ ನಿರ್ವಹಿಸುತ್ತಿವೆ. ಇಂದಿನ ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕøತಿಕ ಮೌಲ್ಯಗಳನ್ನೆಲ್ಲ ಕಿತ್ತೆಸೆದು, ಸಮಾನತೆ, ಸಹೋದರತ್ವಗಳನ್ನುಳ್ಳ ಸಮಾಜವನ್ನು ನಿರ್ಮಿಸುವುದು ನಮ್ಮ ಗುರಿಯಾಗಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...