Homeಮುಖಪುಟಸಾವರ್ಕರ್ ಕ್ಷಮೆ ಬೇಡಿದ್ದರು: ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ಹೀಗಿತ್ತು..

ಸಾವರ್ಕರ್ ಕ್ಷಮೆ ಬೇಡಿದ್ದರು: ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ಹೀಗಿತ್ತು..

- Advertisement -
- Advertisement -

ಭಾರತ್ ಜೋಡೋ ಯಾತ್ರೆ ಮೂಲಕ ಪ್ರಚಲಿತದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾವರ್ಕರ್ ವಿರುದ್ಧ ಕಿಡಿಕಾರಿದ್ದಾರೆ. ಅವರು ಕ್ಷಮಾಧಾನ ಅರ್ಜಿಗಳನ್ನು ಬರೆದರೆಂದು ಟೀಕಿಸಿದ್ದಾರೆ. ಇದನ್ನೆ ನೆಪವಾಗಿಟ್ಟುಕೊಂಡು ಬಿಜೆಪಿಯು “ಸಾವರ್ಕರ್ ಟೀಕಿಸುವ ಕಾಂಗ್ರೆಸ್‌ನೊಡನೆ ಉದ್ಧವ್ ಠಾಕ್ರೆ ಮೈತ್ರಿ ಮಾಡಿಕೊಂಡಿರುವುದೇಕೆ” ಎಂದು ಪ್ರಶ್ನಿಸಿದೆ. ರಾಹುಲ್ ಸಾವರ್ಕರ್‌ರವರನ್ನು ಟೀಕಿಸಿರುವುದರನ್ನು ವಿರೋಧಿಸುತ್ತಲೆ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಯಾತ್ರೆಯ ಭಾಗವಾಗಿ ಬುಡಕಟ್ಟು ಹೋರಾಟಗಾರ ಬಿರ್ಸಾ ಮುಂಡಾ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಬ್ರಿಟಿಷರು ಬಿರ್ಸಾ ಮುಂಡಾರವರಿಗೆ ಭೂಮಿ ನೀಡುವುದಾಗಿ ಆಮಿಷವೊಡ್ಡಿದರು ಸಹ ಅವರು ತಲೆಬಾಗಲು ನಿರಾಕರಿಸಿದರು; ಬ್ರೀಟಿಷರ ವಿರುದ್ಧ ದಿಟ್ಟ ಹೋರಾಟ ನಡೆಸಿ ಸಾವನ್ನು ಆರಿಸಿಕೊಂಡರು. ನಾವು, ಕಾಂಗ್ರೆಸ್ ಪಕ್ಷ ಅವರನ್ನು ನಮ್ಮ ಆರಾಧ್ಯ ದೈವವೆಂದು ಪರಿಗಣಿಸುತ್ತೇವೆ. ಆದರೆ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆದು ಪಿಂಚಣಿ ಸ್ವೀಕರಿಸಿದ ಸಾವರ್ಕರ್‌ ಜೀ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಆರಾಧ್ಯ ದೈವವಾಗಿದ್ದಾರೆ” ಎಂದು ವ್ಯಂಗ್ಯವಾಡಿದ್ದರು.

ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವ ಸೇನಾ ಬಣದ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. “ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿಡಿ ಸಾವರ್ಕರ್ ಅವರ ಬಗ್ಗೆ ತಿರುಚಿದ ಇತಿಹಾಸವನ್ನು ಹರಡುತ್ತಿದೆ. ಆದರೆ ಮಹಾರಾಷ್ಟ್ರದ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಬಿಜೆಪಿಯ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.

ಉದ್ಧವ್ ಠಾಕ್ರೆ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ಬಾಳಾಸಾಹೇಬ್ ಠಾಕ್ರೆ ಅವರು ಸಾವರ್ಕರ್ ಅವರ ಹಿಂದುತ್ವ ಸಿದ್ಧಾಂತವನ್ನು ತಮ್ಮ ಜೀವನದುದ್ದಕ್ಕೂ ಮುಂದಕ್ಕೆ ಕೊಂಡೊಯ್ದರು. ವೀರ್ ಸಾವರ್ಕರ್ ಅವರನ್ನು ಕೀಳಾಗಿ ಬಿಂಬಿಸುವವರಿಗೆ ಬೆದರಿಕೆಯೊಡ್ಡಿದರು. ದುರದೃಷ್ಟವಶಾತ್, ಇಂದು ಅವರ ಕುಟುಂಬದ ನಾಯಕರು ರಾಹುಲ್ ಗಾಂಧಿಯವರ ಯಾತ್ರೆಯಲ್ಲಿ” ಭಾಗವಹಿಸುತ್ತಿದ್ದಾರೆ ಎಂದು ಫಡ್ನವೀಸ್ ಕಿಡಿಕಾರಿದ್ದರು.

ವಿಡಿ ಸಾವರ್ಕರ್ ಬಗ್ಗೆ “ಅಪಾರ ಗೌರವ” ಎಂದಿರುವ ಉದ್ಧವ್ ಠಾಕ್ರೆ, ರಾಹುಲ್ ಗಾಂಧಿ ಹೇಳಿಕೆಗೆ ಸಹಮತವಿಲ್ಲ ಎಂದಿದ್ದಾರೆ. ನಾವು ವಿಡಿ ಸಾವರ್ಕರ್‌ರವರನ್ನು ಗೌರವಿಸುತ್ತೇವೆ. ಬಿಜೆಪಿಯನವರು ನಮಗೆ ಪಾಠ ಹೇಳಲು ಬರಬೇಕಿಲ್ಲ. ಏಕೆಂದರೆ ಅವರು ಕಾಶ್ಮೀರದಲ್ಲಿ ಭಾರತ್ ಮಾತಾ ಕೀ ಜೈ ಎನ್ನದ ಪಿಡಿಪಿ ಪಕ್ಷ ಜೊತೆ ಸರ್ಕಾರ ರಚಿಸಿದ್ದರು ಎಂಬುದನ್ನು ಮರೆಯಬಾರದು ಎಂದಿದ್ದಾರೆ. ಅಲ್ಲದೆ ಬ್ರಿಟಿಷರಿಂದ ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಕೋಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸಾವರ್ಕರ್ ಬರೆದಿದ್ದ ಕ್ಷಮಾಪಣಾ ಪತ್ರಗಳನ್ನು ಪ್ರದರ್ಶಿಸಿದ್ದಾರೆ. ‘ಸರ್, ನಿಮ್ಮ ಅತ್ಯಂತ ವಿಧೇಯ ಸೇವಕನಾಗಿ ಉಳಿಯಲು ನಾನು ಬೇಡಿಕೊಳ್ಳುತ್ತೇನೆ’ ಎಂದು ಬರೆದ ಸಾವರ್ಕರ್ ಅದಕ್ಕೆ ಸಹಿ ಹಾಕಿದ್ದಾರೆ. ಕಾರಣ ಅವರು ಪುಕ್ಕಲರಾಗಿದ್ದರು, ಅವರು ಬ್ರಿಟಿಷರಿಗೆ ಹೆದರುತ್ತಿದ್ದರು. ಮಹಾತ್ಮ ಗಾಂಧಿ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯ್ ಪಟೇಲ್‌ರವರು ಹಲವು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಆದರೆ ಅವರೆಂದು ಸಾವರ್ಕರ್ ರೀತಿ ಕ್ಷಮಾಪಣ ಪತ್ರಗಳನ್ನು ಬರೆದಿರಲಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೆ ಈ ಕುರಿತು ಕಾಂಗ್ರೆಸ್ ಚರ್ಚೆಗೆ ಸಿದ್ದವಿದೆ ಎಂದಿದ್ದಾರೆ.

ಇದನ್ನೂ ಓದಿ; ಸಾವರ್ಕರ್ ಸಿ.ಐ.ಎ. ಏಜೆಂಟರಾಗಿದ್ದರೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...