Homeಮುಖಪುಟಚುನಾವಣಾ ಬಾಂಡ್‌: SBI ಕಾಲಾವಕಾಶ ಕೋರಿರುವುದರ ವಿರುದ್ಧ ಭುಗಿಲೆದ್ದ ಆಕ್ರೋಶ

ಚುನಾವಣಾ ಬಾಂಡ್‌: SBI ಕಾಲಾವಕಾಶ ಕೋರಿರುವುದರ ವಿರುದ್ಧ ಭುಗಿಲೆದ್ದ ಆಕ್ರೋಶ

- Advertisement -
- Advertisement -

ಸಾರ್ವಜನಿಕ ಚುನಾವಣಾ ಬಾಂಡ್ ವಿವರಗಳನ್ನು ನೀಡಲು ಜೂನ್ 30ರವರೆಗೆ ಮೂರುವರೆ ತಿಂಗಳಿಗಿಂತ ಹೆಚ್ಚು ಹೆಚ್ಚುವರಿ ಸಮಯವನ್ನು ಕೋರಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅರ್ಜಿ ಬಗ್ಗೆ ವ್ಯಾಪಕವಾದಂತಹ ಆಕ್ರೋಶ ವ್ಯಕ್ತವಾಗಿದೆ. ಸುಪ್ರೀಂಕೋರ್ಟ್‌ ಆದೇಶವಿರುವಾಗ ಎಸ್‌ಬಿಐ ಈ ಮಾಹಿತಿಯನ್ನು ಚುನಾವಣೆಯ ಮೊದಲು ಏಕೆ ಸಾರ್ವಜನಿಕಗೊಳಿಸುತ್ತಿಲ್ಲ? ಎಂದು ಪ್ರತಿಪಕ್ಷಗಳ ನಾಯಕರು ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ.

ಎಸ್‌ಬಿಐಯ ಅರ್ಜಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನರೇಂದ್ರ ಮೋದಿಯವರು ದೇಣಿಗೆ ವ್ಯವಹಾರವನ್ನು ಮರೆಮಾಚಲು ತಮ್ಮ ಕೈಲಾದಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಚುನಾವಣಾ ಬಾಂಡ್‌ಗಳ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುವುದು ದೇಶವಾಸಿಗಳ ಹಕ್ಕು ಎಂದು ಸುಪ್ರೀಂಕೋರ್ಟ್ ಹೇಳಿರುವಾಗ, ಎಸ್‌ಬಿಐ ಈ ಮಾಹಿತಿಯನ್ನು ಚುನಾವಣೆಯ ಮೊದಲು ಸಾರ್ವಜನಿಕಗೊಳಿಸಬಾರದು ಎಂದು ಏಕೆ ಬಯಸುತ್ತಿದೆ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಒಂದೇ ಕ್ಲಿಕ್‌ನಲ್ಲಿ ಪಡೆಯಬಹುದಾದ ಮಾಹಿತಿಯನ್ನು ನೀಡಲು ಜೂನ್ 30ರವರೆಗೆ ಸಮಯ ಕೇಳುವುದು, ಅದರ ಹಿಂದಿನ ಉದ್ದೇಶವನ್ನು ತೋರಿಸುತ್ತದೆ. ದೇಶದ ಪ್ರತಿಯೊಂದು ಸ್ವತಂತ್ರ ಸಂಸ್ಥೆಗಳು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ‘ಮೋದಾನಿ’ ಕುಟುಂಬದ ಭಾಗವಾಗುತ್ತಿದೆ. ಚುನಾವಣೆಗೂ ಮುನ್ನ ಮೋದಿಯ ನಿಜಮುಖವನ್ನು ಮರೆ ಮಾಚಲು ಇದು ಕೊನೆಯ ಪ್ರಯತ್ನ ಎಂದು ಹೇಳಿದ್ದಾರೆ.

ಚುನಾವಣಾ ಬಾಂಡ್‌ಗಳ ಮಾಹಿತಿ ನೀಡಲು ಸಮಯಾವಕಾಶ ಕೇಳಿದ ಎಸ್‌ಬಿಐ ಬೇಡಿಕೆ ವಿಚಾರವನ್ನು ಮುಂದಿಟ್ಟುಕೊಂಡು ತಮ್ಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶಿವಸೇನೆ ಸಂಸದ ಸಂಜಯ್ ರಾವತ್, ‘ಇಂಡಿಯಾವನ್ನು ‘ಡಿಜಿಟಲ್ ಇಂಡಿಯಾ’ಕ್ಕೆ ಬದಲಾಯಿಸಿದ ಪ್ರಧಾನಿಯನ್ನು ಬ್ಯಾಂಕ್ ಅಧಿಕಾರಿಗಳು ಅವಮಾನಿಸಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. ಎಸ್‌ಬಿಐ ಅಧ್ಯಕ್ಷರು ಮತ್ತು ನಿರ್ದೇಶಕರು “ನಮ್ಮ ಪ್ರಧಾನಿ ಮೋದಿಯನ್ನು ಅವಮಾನಿಸಿದ್ದಕ್ಕಾಗಿ ಅವರನ್ನು ಶಿಕ್ಷಿಸಬೇಕು” ಎಂದು ಹೇಳಿದ್ದಾರೆ.

ಈ ಬಗ್ಗೆ ಲೇವಡಿ ಮಾಡಿರುವ ರಾವತ್ಮ ‘ಮೋದಿಜಿ ಇಂಡಿಯಾವನ್ನು ಬದಲಾಯಿಸಿದ್ದಾರೆ, ಈಗ ಅದು ಡಿಜಿಟಲ್ ಇಂಡಿಯಾ! ಚುನಾವಣಾ ಬಾಂಡ್‌ಗಳ ವಿವರಗಳನ್ನು ಸಲ್ಲಿಸಲು ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ 4 ತಿಂಗಳ ಸಮಯವನ್ನು ಕೇಳಿದೆ’ ಎಂದು ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

‘365 ದಿನಗಳು 9 ವರ್ಷ 10 ತಿಂಗಳು 20 ಗಂಟೆ ದುಡಿಯುತ್ತಿರುವ ನಮ್ಮ ಪ್ರೀತಿಯ ಪ್ರಧಾನಿ ಮೋದಿಜಿಯನ್ನು ಅವಮಾನಿಸಲು ಅವರಿಗೆ ಎಷ್ಟು ಧೈರ್ಯ!  ಈ ‘ಕಾಮ್ ಚೋರ್‌’ಗೆ 4 ತಿಂಗಳು ಬೇಕೇ? ಅವರೆಲ್ಲರನ್ನೂ ಜೈಲಿಗೆ ಕಳುಹಿಸಿ’ ಎಂದು ಸಂಜಯ್ ರಾವುತ್ ಬರೆದುಕೊಂಡಿದ್ದಾರೆ.

ಈ ಬಗ್ಗೆ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಪ್ರತಿಕ್ರಿಯಿಸಿದ್ದು, ಇದು ಸಂಪೂರ್ಣ ದುರುದ್ದೇಶಪೂರಿತವಾಗಿದೆ. ಎಸ್‌ಬಿಐ ಈ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕಿದ್ದ ಒಂದು ದಿನ ಮುಂಚಿತವಾಗಿ ಈ ಅರ್ಜಿಯನ್ನು ಸಲ್ಲಿಸಿದೆ. ಮೂರು ದಿನಗಳ ಕಾಲ ಅವರು ಏನೂ ಮಾಡಲಿಲ್ಲ, ಮತ್ತು ಈಗ ಅವರು ಚುನಾವಣೆ ಕಳೆದ ಬಳಿಕ ಅಂದರೆ ಜೂನ್ 30ರವರೆಗೆ ವಿಸ್ತರಣೆಗೆ ಕೋರಿರುವುದು ಏಕೆ? ಏಕೆಂದರೆ ಸರ್ಕಾರ ಅವರನ್ನು ಈ ಅರ್ಜಿಯನ್ನು ಸಲ್ಲಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ.

 

ಈ ಕುರಿತು ಪ್ರತಿಕ್ರಿಯಿಸಿದ ತನಿಖಾ ಪತ್ರಕರ್ತ ಸೌರವ್‌ ದಾಸ್‌, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಎಸ್‌ಬಿಐ ಸುಲಭವಾಗಿ ನಾಶಪಡಿಸಲು ಸಾಧ್ಯವಿದೆ ಎಂಬುದಕ್ಕೆ ಇದು ಪುರಾವೆಯಾಗಿದೆ. ಹೆಚ್ಚು ಸಮಯವನ್ನು ಕೇಳುವ ಮೂಲಕ ಅವರು ಸುಳ್ಳು ಸಾಕ್ಷಿ ಹೇಳುತ್ತಿದ್ದಾರೆಯೇ? ಸಂವಿಧಾನ ಪೀಠ ಈ ಬಗ್ಗೆ ಎಸ್ಬಿಐ ಮುಖ್ಯಸ್ಥರಿಗೆ ಸಮನ್ಸ್ ನೀಡಬೇಕು ಎಂದು ಹೇಳಿದ್ದಾರೆ. 

ಅತ್ಯಂತ ಚಿಕ್ಕ ಬ್ಯಾಂಕ್ ಕೂಡ ಕೆಲವು ವಾರಗಳಲ್ಲಿ ಮೂಲಭೂತ ಮಾಹಿತಿಯನ್ನು (ದಾನಿ ಮತ್ತು ಸ್ವೀಕರಿಸುವವರನ್ನು) ನೀಡಲು ಸಾಧ್ಯವಿಲ್ಲ ಎಂದು ಹೇಳಿದರೆ, ಅದರ ಬ್ಯಾಂಕಿಂಗ್ ಪರವಾನಗಿಯನ್ನು ಮೂಲ ದಾಖಲೆ ರಕ್ಷಣೆ ನಿಯಮಗಳ ಉಲ್ಲಂಘನೆಗೆ ರದ್ದುಗೊಳಿಸಲಾಗುತ್ತದೆ. ಇದು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯ ಅತಿದೊಡ್ಡ ಬ್ಯಾಂಕ್ ಆಗಿದೆ ಎಂದು ತಮಿಳುನಾಡಿನ ಸಚಿವ ತ್ಯಾಗರಾಜನ್‌ ಪೋಸ್ಟ್‌ ಮಾಡಿದ್ದಾರೆ.

 

ಈ ಕುರಿತು ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನಾಟೆ ಪ್ರತಿಕ್ರಿಯಿಸಿದ್ದು, ಎಸ್‌ಬಿಐ ಚುನಾವಣಾ ಬಾಂಡ್‌ಗಳ ಮಾಲೀಕರ ವಿವರಗಳನ್ನು ಬಹಿರಂಗಪಡಿಸುವ 24 ಗಂಟೆಗಳ ಮೊದಲು, ಅವರ ಹೆಸರನ್ನು ಸಾರ್ವಜನಿಕಗೊಳಿಸಲು ಜೂನ್ 30, 2024 ರವರೆಗೆ ಸಮಯ ಕೇಳಿದೆ. ಕೇವಲ 22,217 ಎಲೆಕ್ಟೋರಲ್ ಬಾಂಡ್‌ಗಳ ವಿವರಗಳನ್ನು ನೀಡಲು ದೇಶದ ಅತಿದೊಡ್ಡ ಬ್ಯಾಂಕ್‌ಗೆ 5 ತಿಂಗಳ ಸಮಯ ಏಕೆ ಬೇಕು? ಬಿಜೆಪಿಗೆ ಯಾಕೆ ಇಷ್ಟೊಂದು ಭಯ? ಸಂಸ್ಥೆಗಳು ಬಿಜೆಪಿಗೆ ದೇಣಿಗೆ ನೀಡುವಂತೆ ಕಂಪನಿಗಳನ್ನು ಒತ್ತಾಯಿಸುತ್ತಿವೆಯೇ? ಇದು ವಿವರಗಳನ್ನು ಮರೆಮಾಚಲು ಪ್ರಧಾನಿ ಮೋದಿ ಮತ್ತು ಬಿಜೆಪಿಯ ಆದೇಶದ ಸ್ಪಷ್ಟ ಪ್ರಯತ್ನವಾಗಿದೆ. ಈ ಕೆಟ್ಟ ಸಂಚನ್ನು ಜನರು ನೋಡಬಹುದು. ಎಸ್‌ಬಿಐ ರಾಜಕೀಯ ಪಕ್ಷವೊಂದರ ಕೈಯಲ್ಲಿದ್ದು ಜೊತೆಗೆ ತನ್ನದೇ ಆದ ಖ್ಯಾತಿಯನ್ನು ಹಾಳುಮಾಡಿಕೊಳ್ಳುವುದರ ಜೊತೆಗೆ, ದೇಶದ ಅತಿದೊಡ್ಡ ಬ್ಯಾಂಕ್ ಸುಪ್ರೀಂಕೋರ್ಟ್‌ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ನೀಡಲು ಜೂನ್ 30ರವರೆಗೆ ಗಡುವನ್ನು ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಕಳೆದ ತಿಂಗಳು ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿತ್ತು ಮತ್ತು ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ (ಇಸಿ) ಬಾಂಡ್‌ಗಳ ಕುರಿತು ಮಾಹಿತಿ ನೀಡುವಂತೆ ಎಸ್‌ಬಿಐಗೆ ಸೂಚಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಮನೀಶ್‌ ತಿವಾರಿ, ಎಲೆಕ್ಟೋರಲ್ ಬಾಂಡ್‌ಗಳ ಮೇಲಿನ ವಂಚನೆಯಿಂದ ತಪ್ಪಿಸಿಕೊಳ್ಳಲು ಎಸ್‌ಬಿಐ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಬಾರದು. ಸಾರ್ವತ್ರಿಕ ಚುನಾವಣೆಯ ಮೊದಲು ಯಾರಿಂದ ಏನನ್ನು ಪಡೆದರು ಎಂಬುವುದನ್ನು ಜನರು ಅರಿಯಬೇಕು ಎಂದು ಹೇಳಿದ್ದಾರೆ.

ಚುನಾವಣಾ ಬಾಂಡ್:

ಜನ ಸಾಮಾನ್ಯರು, ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಗೆ ಕ್ರಮವಾಗಿದೆ ಚುನಾವಣಾ ಬಾಂಡ್. ಜನರು 1,000 ರೂ, 10,000 ರೂ, 1 ಲಕ್ಷ ರೂ, 10 ಲಕ್ಷ ರೂ, 1 ಕೋಟಿ ರೂ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್​ಗಳನ್ನು ಖರೀದಿಸಬಹುದಿತ್ತು. ಈ ಬಾಂಡ್​ಗಳು ಅನಾಮಧೇಯವಾಗಿತ್ತು. ಅಂದರೆ, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗಗೊಳ್ಳುತ್ತಿರಲಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಆ ಪಕ್ಷ ಹೆಸರೂ ಬಹಿರಂಗವಾಗುತ್ತಿರಲಿಲ್ಲ.

ಜನವರಿ 2,2018ರಂದು ಅಂದಿನ ಮೋದಿ ಸರ್ಕಾರ ಚುನಾವಣಾ ಬಾಂಡ್ ಯೋಜನೆಗೆ ಅಧಿಸೂಚನೆ ಹೊರಡಿಸಿತ್ತು. ಚುನಾವಣಾ ಬಾಂಡ್​ಗಳನ್ನು ಹಣಕಾಸು ಕಾಯ್ದೆ 2017ರ ತಿದ್ದುಪಡಿ ಮೂಲಕ ಜಾರಿಗೆ ತರಲಾಗಿತ್ತು. ಈ ಬಾಂಡ್​ಗಳನ್ನು ವರ್ಷಕ್ಕೆ ನಾಲ್ಕು ಬಾರಿ, ಅಂದರೆ ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್​ನಲ್ಲಿ ನೀಡಲಾಗುತ್ತಿತ್ತು. ಜನರು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ವೆಬ್​ಸೈಟ್​ನಲ್ಲಿ ಆನ್​ಲೈನ್​ನಲ್ಲಿ ಇದನ್ನು ಖರೀದಿಸಬಹುದಿತ್ತು.

ಇದನ್ನು ಓದಿ:  ನೀವು ಜೈ ಶ್ರೀರಾಮ್ ಘೋಷಣೆ ಕೂಗಬೇಕು, ಹಸಿವಿನಿಂದ ಸಾಯಬೇಕೆಂದು ಪ್ರಧಾನಿ ಬಯಸುತ್ತಾರೆ: ರಾಹುಲ್‌ ಗಾಂಧಿ ವಾಗ್ಧಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...