Homeಮುಖಪುಟಕಾರು ಓವರ್‌ಟೇಕ್‌ ಮಾಡಿದ್ದಕ್ಕೆ ಯುವಕರಿಗೆ ಗಂಭೀರವಾಗಿ ಥಳಿತ: ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ತಹಶೀಲ್ಧಾರ್‌ ವಿರುದ್ಧ ಎಫ್‌ಐಆರ್‌

ಕಾರು ಓವರ್‌ಟೇಕ್‌ ಮಾಡಿದ್ದಕ್ಕೆ ಯುವಕರಿಗೆ ಗಂಭೀರವಾಗಿ ಥಳಿತ: ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ತಹಶೀಲ್ಧಾರ್‌ ವಿರುದ್ಧ ಎಫ್‌ಐಆರ್‌

- Advertisement -
- Advertisement -

ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ತಹಶೀಲ್ದಾರ್‌ ಸೇರಿ ನಾಲ್ವರ ವಿರುದ್ಧ ಅವರ ಕಾರನ್ನು ಓವರ್‌ಟೇಕ್ ಮಾಡಿದ ಇಬ್ಬರು ಯುವಕರನ್ನು ಥಳಿಸಲು ಆದೇಶಿಸಿದ ಆರೋಪದ    ಹಿನ್ನೆಲೆ ಅಮಾನತು ಮಾಡಲಾಗಿದ್ದು, ಇದೀಗ ಆರೋಪಿಗಳ ವಿರುದ್ಧ ಪೊಲೀಸ್ ತನಿಖೆಗೆ ಆದೇಶಿಸಲಾಗಿದೆ.

ಸೋಮವಾರ ಸಂಜೆ 5 ಗಂಟೆಗೆ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್‌ ಬಳಿಕ ಪ್ರಕರಣವನ್ನು ದಾಖಲಿಸಲಾಗಿದೆ. ಯುವಕರು ಸಂಚರಿಸುತ್ತಿದ್ದ ಕಾರು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರ ಕಾರನ್ನು ಹಿಂದಿಕ್ಕಿದ್ದಕ್ಕೆ ಯುವಕರನ್ನು ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ. ವಿಡಿಯೋ ವೈರಲ್‌ ಬಳಿಕ ಪೊಲೀಸರು ತಹಸೀಲ್ದಾರ್, ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಎಸ್‌ಡಿಎಂ ಅಮಿತ್ ಸಿಂಗ್, ತಹಸೀಲ್ದಾರ್ ವಿನೋದ್ ಕುಮಾರ್, ಎಸ್‌ಡಿಎಂನ ಚಾಲಕ ನರೇಂದ್ರ ದಾಸ್ ಪಣಿಕಾ ಮತ್ತು ತಹಸೀಲ್ದಾರ್ ಸಹಾಯಕ ಸಂದೀಪ್ ಸಿಂಗ್ ಅವರ ಮೇಲೆ ಎಫ್‌ಐಆರ್‌ ದಾಖಲಿಸಿಲಾಗಿದೆ. ಸೋಮವಾರ ಸಂಜೆ ಹೆಡ್ ಕಾನ್‌ಸ್ಟೆಬಲ್ ಶಿಶಿರ್ ತ್ರಿಪಾಠಿ ಅವರು ಮೂರು ವಾಹನಗಳ ಮಾಲೀಕರ ನಡುವೆ ಹೊಡೆದಾಟದ ಬಗ್ಗೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಇಬ್ಬರು ಯುವಕರಿಗೆ ಥಳಿಸಲಾಗಿದ್ದು, ಅವರು ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಅವರನ್ನು ಅಲ್ಲಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಬಗ್ಗೆ ಗಾಯಾಳುಗಳ ಹೇಳಿಕೆಯನ್ನು ದಾಖಲಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಪೋಸ್ಟ್ ಇನ್‌ಚಾರ್ಜ್ ಅಮರ್ ಸಿಂಗ್ ಹೇಳಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 294 , 323 , 341 ಮತ್ತು 34 ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆಯಲ್ಲಿ ಪ್ರಕಾಶ್ ದಹಿಯಾ ಅವರಿಗೆ ತಲೆ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿದೆ. ವಾಹನದಲ್ಲಿ ‘ಎಸ್‌ಡಿಎಂ’ ಎಂದು ಬರೆದಿದ್ದ ಜನರು ಕೆಳಗಿಳಿದು ತನಗೆ ಮತ್ತು ಶಿವಂ ಯಾದವ್‌ಗೆ ಥಳಿಸಿದ್ದಾರೆ. ಕಾರಿನ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದವರು ಎಸ್‌ಡಿಎಂ ಮತ್ತು ತಹಸೀಲ್ದಾರ್ ಎಂದು ನಂತರ ತನಗೆ ತಿಳಿಯಿತು ಎಂದು ದಹಿಯಾ ಆರೋಪಿಸಿದ್ದಾರೆ.

ಶಿವಂ ಕಾರನ್ನು ಓಡಿಸುತ್ತಿದ್ದರು ಮತ್ತು ಅವರು ಎಸ್‌ಡಿಎಂ ಕಾರನ್ನು ಹಿಂದಿಕ್ಕಿದ್ದರು. ನಂತರ ಎಸ್‌ಡಿಎಂ ಅವರ ವಾಹನವು ನಮ್ಮ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದೆ. ನರೇಂದ್ರದಾಸ್ ಪಣಿಕಾ ಮತ್ತು ಸಂದೀಪ್ ಸಿಂಗ್ ಅವರು ದೊಣ್ಣೆಗಳಿಂದ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಾಂಧವಗಢದಲ್ಲಿ ಕರ್ತವ್ಯದಲ್ಲಿರುವ ಎಸ್‌ಡಿಎಂ ಅಮಿತ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿದ್ದು, ತನ್ನ ಸಮ್ಮುಖದಲ್ಲಿ ಹಲ್ಲೆ ನಡೆದಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಸಂತ್ರಸ್ತರಲ್ಲಿ ಒಬ್ಬರು ತಮ್ಮ ಕಾರನ್ನು ಅಜಾಗರೂಕತೆಯಿಂದ ಓಡಿಸುತ್ತಿದ್ದರು ಮತ್ತು ಅವರು ಸಂಚರಿಸುತ್ತಿದ್ದ ಸರಕಾರಿ ವಾಹನಕ್ಕೆ ಡಿಕ್ಕಿ ಹೊಡೆಯಲು ಮುಂದಾಗಿದ್ದರು ಎಂದು ಆರೋಪಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುವುದರಿಂದ ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶಗಳಿಗೆ ತನ್ನ ವಾಹನದಲ್ಲಿ ತೆರಳುತ್ತಿದ್ದಾಗ ಕಾರು ಢಿಕ್ಕಿ ಹೊಡೆಯಲು ಮುಂದಾಗಿತ್ತು, ನಮ್ಮ ಕಾರಿನ ಚಾಲಕ ಇದನ್ನು ತಪ್ಪಿಸಿಕೊಂಡಿದ್ದಾನೆ. ಇಬ್ಬರ ಮೇಲಿನ ದಾಳಿಯನ್ನು ನೋಡಿದ ನಂತರ ತಾನು ತನ್ನ ವಾಹನದಿಂದ ಕೆಳಗಿಳಿದು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದೆ. ತನ್ನ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಜನರು ದಾಳಿಯಲ್ಲಿ ಭಾಗಿಯಾಗಿಲ್ಲ, ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್, ಇಬ್ಬರು ಯುವಕರನ್ನು ಥಳಿಸಿದ ಘಟನೆ ಬೆಳಕಿಗೆ ಬಂದ ನಂತರ ನಾನು ಬಾಂಧವ್‌ಗಢ ಎಸ್‌ಡಿಎಂನ್ನು ಅಮಾನತುಗೊಳಿಸುವಂತೆ ಸೂಚಿಸಿದ್ದೇನೆ. ಇದು ದುರದೃಷ್ಟಕರ ಘಟನೆ, ರಾಜ್ಯದಲ್ಲಿ ಉತ್ತಮ ಆಡಳಿತದ ಸರ್ಕಾರವಿದೆ, ಸಾಮಾನ್ಯ ಜನರೊಂದಿಗೆ ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಕ್ರಿಶ್ಚಿಯನ್ನರ ಮೇಲೆ ಹಿಂದುತ್ವ ಗುಂಪಿನ ದೌರ್ಜನ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...