ಭದ್ರತಾ ನಿಯಮ ಉಲ್ಲಂಘನೆ - ಮುಖ್ಯಮಂತ್ರಿಯ ಹೆಲಿಕಾಪ್ಟರ್‌‌ನಲ್ಲಿ ಪ್ರೀ ವೆಡ್ಡಿಂಗ್‌‌ ಶೂಟ್!

ಭಾವಿ ದಂಪತಿಗಳು ತಮ್ಮ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌‌ ಅನ್ನು ಚತ್ತೀಸ್‌ಘಡ ಮುಖ್ಯಮಂತ್ರಿಯ ಹೆಲಿಕಾಪ್ಟರ್‌‌ನಲ್ಲಿ ನಡೆಸಿದ್ದು ಇದೀಗ ಭಾರಿ ವಿವಾದ ಏರ್ಪಟ್ಟಿದೆ. ಫೋಟೋಶೂಟ್‌ಗೆ ರಾಜ್ಯದ ಹೆಲಿಕಾಪ್ಟರ್‌ನಲ್ಲಿ ಕೂತು ಪೋಸ್ ನೀಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಚಾಲಕ ಯೋಗೇಶ್ವರ್ ಸಾಯಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಯೋಗೇಶ್ವರ್‌‌ ಸಾಯಿ ವರನ ಸ್ನೇಹಿತನಾಗಿದ್ದು, ರಾಜ್ಯ ಹ್ಯಾಂಗರ್‌ (ವಿಮಾನಗಳನ್ನು ನಿಲ್ಲಿಸುವ ಸ್ಥಳ) ನಲ್ಲಿ ಭಾವಿ ದಂಪತಿಗಳಿಗೆ ಫೋಟೋಶೂಟ್ ಮಾಡಲು ಅವಕಾಶ ನೀಡಿದ್ದರು. ಆದರೆ, ಹ್ಯಾಂಗರ್‌ನ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾಯಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಗಾಂಧಿಯನ್ನು ಕೊಂದ ಸಂಘಪರಿವಾರದವರು ರಾಮಭಕ್ತರಾಗಲು ಸಾಧ್ಯವೇ?- ಸಿದ್ದರಾಮಯ್ಯ ಪ್ರಶ್ನೆ

ಪೊಲೀಸರ ಮಾಹಿತಿಯ ಪ್ರಕಾರ, ದಂಪತಿಗಳು ಜಶ್ಪುರ ಜಿಲ್ಲೆಗೆ ಸೇರಿದವರಾಗಿದ್ದು, ಕಳೆದ ತಿಂಗಳು ರಾಯ್‌ಪುರದ ಪೊಲೀಸ್ ಮಾರ್ಗಗಳಲ್ಲಿರುವ ರಾಜ್ಯ ಹೆಲಿಕಾಪ್ಟರ್ “ಎಡಬ್ಲ್ಯೂ 109 ಪವರ್ ಎಲೈಟ್” ನೊಂದಿಗೆ ಫೋಟೊಶೂಟ್ ಮಾಡಿದ್ದಾರೆ. ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲಾದ ನಂತರ ವಿವಾದಕ್ಕೀಡಾಗಿದೆ.

“ಚಾಲಕ ಯೋಗೇಶ್ವರ್ ಸಾಯಿ ಅವರು ಭದ್ರತಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಜನವರಿ 21 ರಂದು ಅನಧಿಕೃತ ಜನರನ್ನು ಹ್ಯಾಂಗರ್‌ಗೆ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ” ಎಂದು ರಾಜ್ಯ ನಾಗರಿಕ ವಿಮಾನಯಾನ ವಿಭಾಗದ ನಿರ್ದೇಶಕ ನೀಲಂ ನಾಮದೇವ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.

ಜನವರಿ 20 ರಂದು ದಂಪತಿಗಳ  ಪ್ರೀ ವೆಡ್ಡಿಂಗ್ ಚಿತ್ರೀಕರಣ ನಡೆದಿದೆ ಎಂದು ರಾಯ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಜಯ್ ಯಾದವ್ ಹೇಳಿದ್ದಾರೆಂದು ಹಿಂದೂಸ್ಥಾನ್ ಟೈಮ್ಸ್ ಉಲ್ಲೇಖಿಸಿದೆ. ವಿಮಾನಯಾನ ವಿಭಾಗದ ಚಾಲಕ ದಂಪತಿಗಳನ್ನು ಒಳಗೆ ಕರೆದೊಯ್ದಿದ್ದಾರೆ. ಗಾರ್ಡ್‌ಗಳಿಗೆ ಚಾಲಕನ ಪರಿಚಯ ಇದ್ದಿದ್ದರಿಂದ ಆಕ್ಷೇಪಿಸಲಿಲ್ಲ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ಮಂತ್ರಾಲಯದ ಸ್ವಾಮೀಜಿ ಕರೆ ಮಾಡಿದ್ದರು’ – ಪಠ್ಯ ಕಡಿತಕ್ಕೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವರು

ಈ ಬಗ್ಗೆ ಚತ್ತೀಸ್‌ಘಡ ಮುಖ್ಯಮಂತ್ರಿ ಭೂಪೇಶ್ ಬಾಘೆಲ್, “ರಾಜ್ಯ ಸರ್ಕಾರದ ಹೆಲಿಕಾಪ್ಟರ್‌ನಲ್ಲಿ ಪ್ರೀ ವೆಡ್ಡಿಂಗ್‌ ಚಿತ್ರೀಕರಣದ ಘಟನೆ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅಲ್ಲದೆ, ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಬೇಡಿ. ದಂಪತಿಗೆ ಸಂತೋಷದ ದಾಂಪತ್ಯ ಜೀವನವನ್ನು ನಾನು ಬಯಸುತ್ತೇನೆ. ಸಂತೋಷವಾಗಿರಿ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರದ ಈ ಕ್ರಮದಿಂದ ಧರ್ಮನಿರಪೇಕ್ಷತೆಗೆ ಕತ್ತರಿ – ಡಾ.ಬಿ.ಪಿ.ಮಹೇಶ್‌ ಚಂದ್ರ ಗುರು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here