Homeಕರ್ನಾಟಕಶಿವಮೊಗ್ಗ: ರಾಷ್ಟ್ರ ಲಾಂಛನದ ಮೇಲೆ ಕೇಸರಿ ಧ್ವಜ ಹಾರಿಸಿದ ದುಷ್ಕರ್ಮಿಗಳು

ಶಿವಮೊಗ್ಗ: ರಾಷ್ಟ್ರ ಲಾಂಛನದ ಮೇಲೆ ಕೇಸರಿ ಧ್ವಜ ಹಾರಿಸಿದ ದುಷ್ಕರ್ಮಿಗಳು

ಇನ್ನೂ ಪ್ರಕರಣದ ದಾಖಲಿಸದ ಪೊಲೀಸರು, ಯಾರಾದರೂ ದೂರು ನೀಡಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ

- Advertisement -
- Advertisement -

ರಾಷ್ಟ್ರ ಲಾಂಛನವಾದ ಅಶೋಕ ಸ್ಥಂಭದ ಮೇಲೆ ದುಷ್ಕರ್ಮಿಗಳು ಕೇಸರಿ ಧ್ವಜವನ್ನು ಹಾರಿಸಿರುವ ಘಟನೆ ಶಿವಮೊಗ್ಗದ ಅಶೋಕ ನಗರದಲ್ಲಿ ನಡೆದಿದೆ. ಧ್ವಜವನ್ನು ವಶಪಡಿಸಿಕೊಂಡಿದ್ದಾಗಿ ನಾನುಗೌರಿ.ಕಾಂಗೆ ಪೊಲೀಸರು ಹೇಳಿದ್ದಾರೆ. ಈವರೆಗೆ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ಹೇಳಿದ್ದು, ಯಾರಾದರೂ ದೂರು ನೀಡಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಗಣೇಶ ಚತುರ್ಥಿ ಮೆರವಣಿಗೆಯ ಅಂಗವಾಗಿ ಬಿಜೆಪಿ ಬೆಂಬಲಿತ ಸಂಘಟನೆಗಳು ಶಿವಮೊಗ್ಗದಾದ್ಯಂತ ಕೇಸರಿ ಧ್ವಜಗಳು, ಗಾಂಧಿ ಕೊಲೆ ಆರೋಪಿ ವಿ.ಡಿ. ಸಾವರ್ಕರ್‌ ಮತ್ತು ಈ ಹಿಂದೆ ಹತ್ಯೆಗೀಡಾಗಿದ್ದ ರೌಡಿ ಶೀಟರ್‌ ಹಾಗೂ ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದ ಕಾರ್ಯಕರ್ತ ಹರ್ಷ ಅವರ ಫ್ಲೆಕ್ಸ್‌-ಬ್ಯಾನರ್‌ಗಳನ್ನು ಕೂಡಾ ಹಾಕಲಾಗಿತ್ತು. ಇದೇ ವೇಳೆ ದುಷ್ಕರ್ಮಿಗಳು ರಾಷ್ಟ್ರ ಲಾಂಛನದ ಮೇಲೆ ಕೂಡಾ ಕೇಸರಿ ಧ್ವಜವನ್ನು ಕಟ್ಟಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶಿವಮೊಗ್ಗದಲ್ಲಿ ಇತ್ತಿಚೆಗಷ್ಟೆ ಬ್ಯಾನರ್‌ ವಿಚಾರವಾಗಿ ಚಾಕು ಇರಿತ ಘಟನೆ ನಡೆದಿತ್ತು. ಸರಣಿ ಕೋಮು ದುರ್ಘಟನೆಗಳಿಂದ ನಗರವೂ ಕೋಮು ಸೂಕ್ಷ್ಮ ಪ್ರದೇಶವಾಗಿ ಮಾರ್ಪಟ್ಟಿದೆ. ಗಣೇಶ ಚತುರ್ಥಿಯನ್ನು ಗಾಂಧಿ ಕೊಲೆ ಆರೋಪಿ ಸಾವರ್ಕರ್‌ ಸ್ಥಾಪಿಸಿದ್ದ ಪಕ್ಷವಾದ HMS ಪ್ರತಿಷ್ಠಾಪಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದು, ಕಟ್ಟೆಚ್ಚರ ವಹಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿವಮೊಗ್ಗ ಗ್ರಾಮಾಂತರ: ಅಭಿವೃದ್ಧಿ ಮರೀಚಿಕೆಯಾದ ಮೀಸಲು ಕ್ಷೇತ್ರದಲ್ಲಿ ಮೇಲ್ವರ್ಗದ ಜಾತಿಪ್ರತಿಷ್ಠೆ!

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಶಿವಮೊಗ್ಗೆ ಡಿಎಸ್‌ಪಿ ಬಾಲರಾಜ್,“ಧ್ವಜವನ್ನು ವಿಡಿಯೊಗ್ರಾಫ್ ಮಾಡಿ ಕಾರ್ಪೋರೇಷನ್ ಕಡೆಯಿಂದ ತೆಗೆಸಿ ಅವನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಯಾರಾದರೂ ದೂರು ನೀಡಿದರೆ ಎಫ್‌ಐಆರ್‌ ದಾಖಲಿಸುತ್ತೇವೆ. ಇದೀಗ ಕಾನೂನು ತಜ್ಞರ ಸಹಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.

ಕಾರ್ಯಕ್ರಮವನ್ನು ಸಂಘಟಿಸಿದವರ ವಿರುದ್ಧ ಕ್ರಮಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅದನ್ನು ಯಾರು ಹಾಕಿದ್ದಾರೆ ಎಂದು ಇನ್ನೂ ಗೊತ್ತಿಲ್ಲ. ಅಲ್ಲಿನ ಸಿಸಿ ಕ್ಯಾಮರಾ ಎಲ್ಲವನ್ನೂ ಪರಿಶೀಲಿಸಬೇಕು” ಎಂದು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.

ಈ ಹಿಂದೆ ಶಿವಮೊಗ್ಗದ ಬಿಜೆಪಿ ಶಾಸಕ, ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಕೆಂಪು ಕೋಟೆಯಲ್ಲಿ ಕೂಡಾ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೊಂಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಡಿ.ಎಸ್‌. ಪಿ. ಬಾಲರಾಜ್ ತಲೆಯಲ್ಲಿ ಮನುವಾದ ತುಂಬಿರುವಂತಿದೆ. ಅವಮಾನ ಆಗಿರುವುದು ರಾಷ್ಟ್ರಲಾಂಚನಕ್ಕೆ. ಯಾರೂ ದೂರು ಕೊಡದಿದ್ದರೂ, ಸ್ವಯಂ ಪ್ರೇರಿತ ದೂರನ್ನು ದಾಕಲಿಸಬೇಕು. ಇಲ್ಲದಿದ್ದರೆ ಈ ಬಾಲರಾಜ್ ವಿರುದ್ಧವೂ ಕರ್ತವ್ಯಲೋಪದ ದೂರನ್ನು ದಾಕಲಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...