Homeಮುಖಪುಟಇಂಡಿಯಾ ಟುಡೇ, ನವ ಭಾರತ್ ಸೇರಿ 5 ಎಕ್ಸಿಟ್‌ ಪೋಲ್‌ಗಳಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ

ಇಂಡಿಯಾ ಟುಡೇ, ನವ ಭಾರತ್ ಸೇರಿ 5 ಎಕ್ಸಿಟ್‌ ಪೋಲ್‌ಗಳಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ

- Advertisement -
- Advertisement -

ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಮತದಾನ ಮುಗಿದಿದೆ. ಹಲವಾರು ಚಾನೆಲ್‌ಗಳು ಮತ್ತು ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ನಡೆಸಿದ್ದು, ಅವುಗಳನ್ನು ಇಂದು ಪ್ರಕಟಿಸಿವೆ. ಅವುಗಳಲ್ಲಿ ಇಂಡಿಯಾ ಟುಡೇ, ನವ ಭಾರತ್, TimesNow-ETG, India TV-CNX ಮತ್ತು ಝೀ ಮ್ಯಾಟ್ರಿಕ್ ಎಕ್ಸಿಟ್‌ ಪೋಲ್‌ಗಳು ಕಾಂಗ್ರೆಸ್‌ ಸ್ಪಷ್ಟ ಬಹುಮತ ಸಾಧಿಸುತ್ತದೆ ಎಂದಿವೆ.

ಇಂಡಿಯಾ ಟುಡೇ – ಎಕ್ಸಿಸ್ ಮೈ ಇಂಡಿಯಾ

ಕಾಂಗ್ರೆಸ್:122-140
ಬಿಜೆಪಿ:62-80
ಜೆಡಿಎಸ್:20-25
ಇತರರು:00-03

ಮತ ಹಂಚಿಕೆ

ಕಾಂಗ್ರೆಸ್:43%
ಬಿಜೆಪಿ:35%
ಜೆಡಿಎಸ್:16%
ಇತರರು:06%

ಮುಂಬೈ ಕರ್ನಾಟಕದಲ್ಲಿ ಕಾಂಗ್ರೆಸ್ ಚೇತರಿಕೆ ಕಾಣಲಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಪಕ್ಷ 28 ಸ್ಥಾನಗಳಲ್ಲಿ ಗೆಲುವು ಕಂಡರೆ, ಬಿಜೆಪಿ 21 ಸ್ಥಾನಗಳನ್ನು ಮತ್ತು ಜೆಡಿಎಸ್ ಒಂದು ಸ್ಥಾನ ಪಡೆದುಕೊಳ್ಳಲಿದೆ ಎಂದು ಎಕ್ಸಿಟ್ ಪೋಲ್ ಹೇಳಿದೆ.

ಕಳೆದ ಚುನಾವಣೆಯಲ್ಲಿ ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮುಗ್ಗಿರಿಸಿತ್ತು. ಆದರೆ ಈ ಬಾರಿ ಅಲ್ಲಿ ಕಾಂಗ್ರೆಸ್ ಬೃಹತ್ ಚೇತರಿಕೆ ಕಾಣಲಿದೆ ಎಂದು ಇಂಡಿಯಾ ಟುಡೇ ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆಗಳು ಹೇಳಿವೆ. ಕಾಂಗ್ರೆಸ್ 12, ಬಿಜೆಪಿ 10, ಜೆಡಿಎಸ್ 01 ಸ್ಥಾನಗಳನ್ನು ಪಡೆಯಲಿವೆ ಎಂದು ಸಮೀಕ್ಷೆ ತಿಳಿಸಿದೆ.

ಅದೇ ರೀತಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ನೀಡಲಿದೆ ಎಂದು ಸಮೀಕ್ಷೆ ಹೇಳಿದೆ. ಅಲ್ಲಿ ಕಾಂಗ್ರೆಸ್ 17, ಬಿಜೆಪಿ 10, ಜೆಡಿಎಸ್ 01 ಸ್ಥಾನಗಳನ್ನು ಪಡೆಯಲಿವೆ ಎನ್ನಲಾಗಿವೆ.

ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಬಂಪರ್ ಬೆಳೆ ತೆಗೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಅದು 32 ಸೀಟುಗಳನ್ನು ಪಡೆದರೆ, ಬಿಜೆಪಿ ಕೇವಲ 07 ಸೀಟುಗಳಿಗೆ ತೃಪ್ತಿಪಡಲಿದೆ. ಜೆಡಿಎಸ್ ಕೇವಲ 01 ಸ್ಥಾನ ಪಡೆಯಲಿದೆ ಎಂದಿದೆ.

ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯಲಿದೆ. ಒಟ್ಟು ಸ್ಥಾನಗಳಲ್ಲಿ 19 ಬಿಜೆಪಿ 16 ಪಡೆಯಲಿದೆ. ಕಾಂಗ್ರೆಸ್ 03 ಪಡೆದರೆ, ಜೆಡಿಎಸ್ ಖಾತೆ ತೆರೆಯುವಲ್ಲಿ ವಿಫಲವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

TimesNow-ETG 

Congress: 113
BJP: 85
JDS: 23
Others: 3

India TV-CNX 

Congress: 115
BJP: 85
JD(S): 22
Others: 2

ಝೀ ಮ್ಯಾಟ್ರಿಜ್

ಕಾಂಗ್ರೆಸ್:103-118
ಬಿಜೆಪಿ:79-89
ಜೆಡಿಎಸ್:25-33
ಇತರರು:02-05

ನವಭಾರತ್

ಕಾಂಗ್ರೆಸ್:106-120
ಬಿಜೆಪಿ:78-92
ಜೆಡಿಎಸ್:20-26
ಇತರರು:02-04

ಬಿಜೆಪಿಗೆ ಬಹುಮತ ಎಂದ ಎರಡು ಸಮೀಕ್ಷೆಗಳು

News Nation-CGS

BJP: 114
Congress: 86
JD(S): 21

ಸುವರ್ಣ ನ್ಯೂಸ್-ಜನ್ ಕಿ ಬಾತ್

BJP: 94 – 117
Congress: 91 – 106
JD(S): 14 – 24
Other: 02

ಉಳಿದ ಸಮೀಕ್ಷೆಗಳು ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸಹ ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದಿವೆ.

ಇದನ್ನೂ ಓದಿ: 2018ರಲ್ಲಿ ನಿಜವಾಗಿದ್ದ ಎಕ್ಸಿಟ್ ಪೋಲ್; 8 ಸಮೀಕ್ಷೆಗಳು ಏನು ಹೇಳಿದ್ದವು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read