Homeಮುಖಪುಟಶೀಘ್ರ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸೋನಮ್ ವಾಂಗ್‌ಚುಕ್ ಪತ್ನಿ

ಶೀಘ್ರ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸೋನಮ್ ವಾಂಗ್‌ಚುಕ್ ಪತ್ನಿ

- Advertisement -
- Advertisement -

ಸೆಪ್ಟೆಂಬರ್ 24 ರಂದು ಲಡಾಖ್‌ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗಳ ನಂತರ ಬಂಧನಕ್ಕೊಳಗಾದಾಗಿನಿಂದ ರಾಜಸ್ಥಾನದ ಜೋಧ್‌ಪುರ ಜೈಲಿನಲ್ಲಿ ಇರಿಸಲಾಗಿರುವ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಾಂಗ್‌ಚುಕ್ ಅವರ ಬಂಧನ ಕಾನೂನುಬಾಹಿರವಾಗಿದೆ, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಗೀತಾಂಜಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ವಾಂಗ್‌ಚುಕ್ ಅವರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ, ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಲಾಗಿದೆ; ಇದು ಸುಳ್ಳು ಎಂದು ಅವರ ಪತ್ನಿ ಗೀತಾಂಜಲಿ ಹೇಳಿದ್ದಾರೆ.

ವಾಂಗ್‌ಚುಕ್ ಮೇಲೆ ಎನ್‌ಎಸ್‌ಎ (ರಾಷ್ಟ್ರೀಯ ಭದ್ರತಾ ಕಾಯ್ದೆ) ಹೇರಿರುವುದನ್ನು ಅವರು ಪ್ರಶ್ನಿಸಿದ್ದು, ನನಗೆ ಇನ್ನೂ ಬಂಧನ ಆದೇಶ ಬಂದಿಲ್ಲ, ಇದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳಿದರು. ನನ್ನ ಪತಿಯನ್ನು ಸಂಪರ್ಕಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ರಾಜಸ್ಥಾನದ ಜೋಧ್‌ಪುರ ಜೈಲಿನಲ್ಲಿರುವ ಹವಾಮಾನ ಕಾರ್ಯಕರ್ತನ ಬಿಡುಗಡೆಗಾಗಿ ಮಧ್ಯಪ್ರವೇಶಿಸುವಂತೆ ಗೀತಾಂಜಲಿ ಜೆ ಆಂಗ್ಮೋ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಪರ್ಕಿಸಿದ್ದಾರೆ.

“ಯಾರಿಗೂ ಬೆದರಿಕೆಯಾಗದ ವ್ಯಕ್ತಿ ವಾಂಗ್‌ಚುಕ್ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ನಾವು ವಿನಂತಿಸುತ್ತೇವೆ, ಅವರು ತಮ್ಮ ರಾಷ್ಟ್ರವನ್ನು ಬಿಟ್ಟು ಬೇರೆಯವರಿಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ. ಅವರು ಲಡಾಖ್‌ನ ಧೈರ್ಯಶಾಲಿ ಪುತ್ರರಿಗೆ ಸೇವೆ ಸಲ್ಲಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ನಮ್ಮ ಮಹಾನ್ ರಾಷ್ಟ್ರದ ರಕ್ಷಣೆಗಾಗಿ ಭಾರತೀಯ ಸೇನೆಯೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದ್ದಾರೆ” ಎಂದು ಆಂಗ್ಮೋ ಲೇಹ್‌ನ ಉಪ ಆಯುಕ್ತರ ಮೂಲಕ ರವಾನಿಸಲಾದ ಪತ್ರದಲ್ಲಿ ತಿಳಿಸಿದ್ದಾರೆ.

ಲೇಹ್‌ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗಳ ನಂತರ ಸೆಪ್ಟೆಂಬರ್ 26 ರಂದು ವಾಂಗ್‌ಚುಕ್ ಅವರನ್ನು ಬಂಧಿಸಲಾಗಿದೆ.

ಲೇಹ್ ಪಟ್ಟಣದಲ್ಲಿ ಹಿಂಸಾತ್ಮಕ ಘರ್ಷಣೆಗಳು ನಾಲ್ವರು ಜನರನ್ನು ಬಲಿತೆಗೆದುಕೊಂಡ ಎರಡು ದಿನಗಳ ನಂತರ, ಸೆಪ್ಟೆಂಬರ್ 26 ರಂದು ವಾಂಗ್‌ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಆ ಪ್ರದೇಶವನ್ನು ಸಂವಿಧಾನದ ಆರನೇ ಶೆಡ್ಯೂಲ್‌ಗೆ ಸೇರಿಸುವುದು ಸೇರಿದಂತೆ ಬೇಡಿಕೆಗಳನ್ನು ಬೆಂಬಲಿಸಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತು.

2023 ರಲ್ಲಿ ಮಕ್ಕಳ ಮೇಲಿನ ಅಪರಾಧಗಳಲ್ಲಿ ಶೇ. 9.2 ರಷ್ಟು ಹೆಚ್ಚಳ: ಎನ್‌ಸಿಆರ್‌ಬಿ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಥನಾಲ್ ಪ್ರಮಾಣವನ್ನು ಶೇ. 20ರಿಂದ 30ಕ್ಕೆ ಏರಿಸಲು ಕೇಂದ್ರ ಸರ್ಕಾರದಲ್ಲಿ ಈ ಹಿಂದೆಯೇ ಚರ್ಚೆಯಾಗಿತ್ತು!: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!

ಬೆಂಗಳೂರು: ಕರ್ನಾಟಕದಲ್ಲಿ E20 ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತಲೂ ಅಧಿಕ ಪ್ರಮಾಣದ ಎಥನಾಲ್ ಬೆರೆಸಿ ಸಾರ್ವಜನಿಕರಿಗೆ ವಂಚಿಸಲಾಗುತ್ತಿದೆ ಎನ್ನುವ ರಾಜ್ಯ ಸರ್ಕಾರದ ಗಂಭೀರ ಆರೋಪಗಳ ನಡುವೆಯೇ, ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ...

ಬಂಗಾಳ ಎಸ್‌ಐಆರ್ ನ್ಯಾಯಮಂಡಳಿಗೆ ನಿವೃತ್ತ ನ್ಯಾಯಾಧೀಶ ಬಿಸ್ವಜಿತ್ ಬಸು ರಾಜೀನಾಮೆ

ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿಸ್ವಜಿತ್ ಬಸು ಪಶ್ಚಿಮ ಬಂಗಾಳ ಎಸ್‌ಐಆರ್ ನ್ಯಾಯಮಂಡಳಿಗಳಿಗೆ ರಾಜೀನಾಮೆ ನೀಡಿದ್ದಾರೆ, ಒಂದು ತಿಂಗಳಲ್ಲಿ ಸಮಿತಿಯಿಂದ ಹೊರಗುಳಿದ 19 ಸದಸ್ಯರಲ್ಲಿ ನಾಲ್ಕನೇ ವ್ಯಕ್ತಿಯಾಗಿದ್ದಾರೆ. ರಾಜ್ಯದ ಮತದಾರರ ಪಟ್ಟಿಯಿಂದ ಹೊರಗುಳಿದ...

‘ನೋಟ್ ಬಂದಿ’ ಆರ್ಥಿಕತೆ ಹಾಳು ಮಾಡಿದೆ, ‘ವೋಟ್ ಬಂದಿ’ ರಾಜಕೀಯ ನಾಶಪಡಿಸುತ್ತಿದೆ: ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದೆ. 2016ರಲ್ಲಿ ಜಾರಿಗೊಳಿಸಿದ 'ನೋಟ್ ಬಂದ್' ದೇಶದ ಆರ್ಥಿಕತೆಯನ್ನು ಹಾಳುಮಾಡಿದ್ದರೆ, ಈಗ ನಡೆಯುತ್ತಿರುವ 'ವೋಟ್ ಬಂದ್' ದೇಶದ ರಾಜಕೀಯ...

“ಪಟಾಕಿಗಳನ್ನು ಸಿಡಿಸುವುದರಿಂದ ಹಲವು ರೋಗ-ರುಜಿನಗಳು ಗುಣಮುಖವಾಗುತ್ತವೆ” – ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ ಹೇಳಿಕೆ!

ಕಾಳಿ ಪೂಜೆ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಹಾಗೂ ಶಬ್ದ ನಿಯಂತ್ರಿಸಲು ಆಡಳಿತ ಮಂಡಳಿಗಳು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ವಿಧಿಸುತ್ತಿರುವ ಬೆನ್ನಲ್ಲೇ, ಕೋಲ್ಕತ್ತಾದ ಟಾಲಿಗಂಜ್ ಕ್ಷೇತ್ರದ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ...

ಎನ್‌ಡಿಎ ಪರೀಕ್ಷೆ; ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶಿವಮೊಗ್ಗದ ವಿದ್ಯಾರ್ಥಿನಿ

ಕರ್ನಾಟಕದ 18 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ...

ಗೂಗಲ್ ‘ರೀಯೂನಿಯನ್’ ಜಾಹೀರಾತು ಬಿಡುಗಡೆಯಾಗಿ 13 ವರ್ಷ: ಕುನಾಲ್ ಕಾಮ್ರಾ ಪೋಸ್ಟ್‌ನಿಂದ ಮತ್ತೆ ನೆನಪಾದ ಗಡಿ ಮೀರಿದ ಸೌಹಾರ್ದತೆ!

13 ವರ್ಷಗಳ ಹಿಂದೆ ಅಂದರೆ 2013ರ ನವೆಂಬರ್ 13ರಂದು ಗೂಗಲ್ ಇಂಡಿಯಾ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದ ಜಾಗತಿಕ ಪ್ರಸಿದ್ಧ ‘ರೀಯೂನಿಯನ್’ (Google Reunion) ಜಾಹೀರಾತು, ಇಂದು ಸಾಮಾಜಿಕ ಜಾಲತಾಣ...

ಕೇಂದ್ರ ಸಚಿವರ ಜೇಬು ತುಂಬಿಸಲು ಎಥನಾಲ್ ದಂಧೆ!: 130 ಕೋಟಿ ಜನರಿಗೆ 20% ಹೆಸರಲ್ಲಿ 40% ಎಥನಾಲ್ – ಪ್ರಿಯಾಂಕ್‌ ಖರ್ಗೆ!

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು (OMCs) ಸರಬರಾಜು ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಯಮಾನುಸಾರ ಇರಬೇಕಾದ ಶೇಕಡಾ 20 ಕ್ಕಿಂತಲೂ ಅಧಿಕ ಪ್ರಮಾಣದ ಎಥನಾಲ್ ಮಿಶ್ರಣ ಮಾಡುತ್ತಿರುವುದು ಈಗ ರಾಜ್ಯ ಸರ್ಕಾರ ನಡೆಸಿದ ತನಿಖೆಯಿಂದ...

ಎಥೆನಾಲ್ ಅತಿಯಾದ ಮಿಶ್ರಣ: ಸಾವಿರಾರು ವಾಹನಗಳಿಗೆ ಸಮಸ್ಯೆ, ಎಂಜಿನ್‌ಗಳು ಸ್ಥಗಿತ; ಆರೋಪ ಮತ್ತಷ್ಟು ತೀವ್ರಗೊಳಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ವಿವಾದ ಕರ್ನಾಟಕದಲ್ಲಿ ಮತ್ತಷ್ಟು ತೀವ್ರಗೊಂಡಿದೆ. ರಾಜ್ಯದ ವಿವಿಧೆಡೆ ಸಾವಿರಾರು ವಾಹನಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿವೆ, ಎಂಜಿನ್‌ಗಳು ಪದೇಪದೇ ಸ್ಥಗಿತಗೊಳ್ಳುತ್ತಿವೆ ಮತ್ತು...

‘ಕಾಂಗ್ರೆಸಿಗರನ್ನು ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತೇವೆ’ ಎಂದಿದ್ದ ನಾರಾಯಣಸ್ವಾಮಿ ಮನೆಗೆ ಬ್ಲಿಂಕಿಟ್ ಮೂಲಕ 20 ಚಾಕುಗಳ ಆರ್ಡರ್: ದೂರು ದಾಖಲಿಸಿದ ಬಿಜೆಪಿ

ಬೆಂಗಳೂರು: ಕ್ವಿಕ್ ಕಾಮರ್ಸ್ ವೇದಿಕೆ ಬ್ಲಿಂಕಿಟ್ ಮೂಲಕ ತನಗೆ 20 ಚಾಕುಗಳನ್ನು ಕಳುಹಿಸಲಾಗಿದೆ. ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರೇ ಈ ಚಾಕುಗಳನ್ನು ಆರ್ಡರ್ ಮಾಡಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ...

ಫಿರೋಜಾಬಾದ್‌ನಲ್ಲಿ ಸಾಮೂಹಿಕ ಅತ್ಯಾಚಾರ; ಬಹು ಅಂಗಾಂಗ ಹಾನಿಯಿಂದ 16 ವರ್ಷದ ದಲಿತ ಬಾಲಕಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನವೆಂಬರ್ 1 ರಂದು ಬರ್ಬರ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 16 ವರ್ಷದ ದಲಿತ ಬಾಲಕಿ, ಆಗ್ರಾದ ಆಸ್ಪತ್ರೆಯೊಂದರಲ್ಲಿ ಸುಮಾರು ಒಂದು ವಾರಗಳ ಕಾಲ ಸಾವಿನೊಂದಿಗೆ ಹೋರಾಡಿದ ನಂತರ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ. ಆಕೆಯನ್ನು...