Homeಮುಖಪುಟಬಿಜೆಪಿ ಸೀಟುಗಳನ್ನು ಕಡಿತಗೊಳಿಸಬಹುದು ಎಂಬುದನ್ನು ತೋರಿಸಿದ್ದೇವೆ: ಅಖಿಲೇಶ್ ಯಾದವ್

ಬಿಜೆಪಿ ಸೀಟುಗಳನ್ನು ಕಡಿತಗೊಳಿಸಬಹುದು ಎಂಬುದನ್ನು ತೋರಿಸಿದ್ದೇವೆ: ಅಖಿಲೇಶ್ ಯಾದವ್

- Advertisement -
- Advertisement -

ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. 403 ಕ್ಷೇತ್ರಗಳಲ್ಲಿ 273 ಕ್ಷೇತ್ರಗಳನ್ನು ಗೆದ್ದುಕೊಂಡು ಸತತ ಎರಡನೇ ಭಾರಿಗೆ ಅಧಿಕಾರದ ಗದ್ದುಗೆಗೇರಲು ಸಿದ್ದವಾಗಿದೆ. ಯೋಗಿ ಆದಿತ್ಯನಾಥ್ ಆಡಳಿತಕ್ಕೆ ಜನ ಮನ್ನಣೆ ನೀಡಿರುವುದು ಫಲಿತಾಂಶದಲ್ಲಿ ಗೋಚರವಾಗುತ್ತಿದೆ. ಇದೇ ಸಂದರ್ಭದಲ್ಲಿ ತೀವ್ರ ಪೈಪೋಟಿ ನೀಡಿದ್ದ ಸಮಾಜವಾದಿ ಪಕ್ಷದ ಮೈತ್ರಿಕೂಟ ಮತ್ತೊಮ್ಮೆ ಮುಗ್ಗರಿಸಿದೆ. 125 ಕ್ಷೇತ್ರಗಳಿಗೆ ಸೀಮಿತವಾದ ಮೈತ್ರಿಕೂಟವು ಮತ್ತೊಮ್ಮೆ ವಿರೋಧ ಪಕ್ಷದಲ್ಲಿ ಕೂರಬೇಕಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಬಿಜೆಪಿ ಸೀಟುಗಳು ಕುಸಿಯುತ್ತಿವೆ, ಜನರಿಗಾಗಿನ ಹೋರಾಟ ಮುಂದುವರೆಯುತ್ತದೆ” ಎಂದಿದ್ದಾರೆ.

“ನಮ್ಮ ಸೀಟುಗಳ ಸಂಖ್ಯೆಯನ್ನು ಎರಡೂವರೆ ಪಟ್ಟು ಹೆಚ್ಚಿಸಿದ ಮತ್ತು ಮತ ಹಂಚಿಕೆಯನ್ನು ಒಂದೂವರೆ ಪಟ್ಟು ಹೆಚ್ಚಿಸಿದ ಉತ್ತರ ಪ್ರದೇಶದ ಜನರಿಗೆ ಧನ್ಯವಾದಗಳು. ನಾವು ಬಿಜೆಪಿಯ ಸೀಟುಗಳ ಸಂಖ್ಯೆ ಕಡಿತಗೊಳಿಸಬಹುದು ಎಂಬುದನ್ನು ಕಂಡಿದ್ದೇವೆ. ಅದು ಮುಂದುವರೆಯುತ್ತದೆ. ಬಿಜೆಪಿಯ ಬಗೆಗೆ ಜನರಲ್ಲಿದ್ದ ಅರ್ಧಕ್ಕಿಂತ ಹೆಚ್ಚು ಗೊಂದಲ, ಭ್ರಮೆ ನಿವಾರಣೆಯಾಗಿದೆ, ಇನ್ನುಳಿದದ್ದು ಕೆಲವೇ ದಿನಗಳಲ್ಲಿ ಆಗಲಿದೆ. ಜನರ ಒಳಿತಿಗಾಗಿನ ಹೋರಾಟಕ್ಕೆ ಜಯವಾಗಲಿ” ಎಂದು ಅಖಿಲೇಶ್ ಟ್ವೀಟ್ ಮಾಡಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿಯ 41.29 ಶೇಕಡಾ ಮತಗಳನ್ನು ಪಡೆದರೆ ಸಮಾಜವಾದಿ ಪಕ್ಷವು 32.06 ಶೇಕಡಾ ಮತಗಳನ್ನು ಪಡೆದಿದೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಎಸ್‌ಪಿ ಪಕ್ಷಗಳು ಮುಖಭಂಗ ಅನುಭವಿಸಿವೆ. ಕಾಂಗ್ರೆಸ್ ಎರಡು ಸೀಟು ಮಾತ್ರ ಗೆಲ್ಲಲು ಸಾಧ್ಯವಾದರೆ, ಬಿಎಸ್‌ಪಿ ಒಂದು ಸ್ಥಾನಕ್ಕೆ ಸೀಮಿತಗೊಂಡಿದೆ.


ಇದನ್ನೂ ಓದಿ: ವಿಶ್ಲೇಷಣೆ: ಮತ್ತೊಂದು ಆತ್ಮ ವಿಮರ್ಶೆಯ ಹೊಸ್ತಿಲಲ್ಲಿರುವ ಕಾಂಗ್ರೆಸ್ ಸೋತದ್ದೆಲ್ಲಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...