Homeಕರ್ನಾಟಕಅಮಿತ್ ಷಾ ಎದುರು ಮಾನ ಉಳಿಸಿಕೊಳ್ಳಲು ರಾಜ್ಯ ಬಿಜೆಪಿ ದುಡ್ಡು ಹಂಚಿಕೆ: ಕಾಂಗ್ರೆಸ್ ಆರೋಪ

ಅಮಿತ್ ಷಾ ಎದುರು ಮಾನ ಉಳಿಸಿಕೊಳ್ಳಲು ರಾಜ್ಯ ಬಿಜೆಪಿ ದುಡ್ಡು ಹಂಚಿಕೆ: ಕಾಂಗ್ರೆಸ್ ಆರೋಪ

- Advertisement -
- Advertisement -

“ಹಿಂದಿನ ಜನಸಂಕಟಯಾತ್ರೆಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ ಈಗ ಅಮಿತ್ ಶಾ ಎದುರು ಮಾನ ಉಳಿಸಿಕೊಳ್ಳಲು ಕುರ್ಚಿಗಳಿಗಷ್ಟೇ ಅಲ್ಲ ಕುರ್ಚಿ ಮೇಲೆ ಕೂರುವವರಿಗೂ ಹಣ ಕೊಟ್ಟು ಕರೆಸಿದೆ. ಈ ಹಣ ಯಾವುದು?” ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ವಿಡಿಯೊವೊಂದನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, “ಈ ಹಣ 40% ಕಮಿಷನ್ ಲೂಟಿಯದ್ದೇ? ಹುದ್ದೆಗಳ ಮಾರಾಟದ ಸಂಪಾದನೆಯೇ? ಮಂತ್ರಿಗಿರಿ ಮಾರಾಟದಿಂದ ಬಂದ ಹಣವೇ?” ಎಂದು ಕೇಳಿದೆ.

ಮತ್ತೊಂದು ಟ್ವೀಟ್‌ನಲ್ಲಿ, “ಚುನಾವಣೆಗಾಗಿ ಕರ್ನಾಟಕದ ಕಡೆ ‘ದಂಡ’ಯಾತ್ರೆ ಕೈಗೊಂಡಿದ್ದಾರೆ ಬಿಜೆಪಿಯ ದೆಹಲಿ ನಾಯಕರು! ಗಡಿ ವಿವಾದ ಬಗೆಹರಿಸಾಲಾಗದ ಅಮಿತ್ ಶಾ ಅವರ ಮಾತಿಗೆ ಮಹಾರಾಷ್ಟ್ರ ಕಿಮ್ಮತ್ತು ನೀಡುತ್ತಿಲ್ಲ. ಈ ಕಿಮ್ಮತ್ತಿಲ್ಲದ ವ್ಯಕ್ತಿಗೆ ಕರ್ನಾಟಕದ ಜನತೆ ಬೆಲೆ ಕೊಡುವುದು ಅಸಂಭವ! ಬಿಜೆಪಿ ಅದೆಷ್ಟೇ ಸರ್ಕಸ್ ನಡೆಸಿದರೂ ಜನರ ತಿರಸ್ಕಾರ ಎದುರಿಸುವುದು ನಿಶ್ಚಿತ” ಎಂದಿದೆ.

“ಚುನಾವಣೆಗಾಗಿ ಕರ್ನಾಟಕದತ್ತ ಮುಖ ಮಾಡುತ್ತಿರುವ ಮೋದಿ – ಶಾ ಜೋಡಿ ಕರ್ನಾಟಕ ಸಂಕಷ್ಟ ಎದುರಿಸುತ್ತಿದ್ದಾಗ ನಾಪತ್ತೆಯಾಗಿದ್ದರು. ‘ಕಷ್ಟಕ್ಕೆ ಬರಬೇಡ, ಚುನಾವಣೆಗೆ ಮಾತ್ರ ಬಿಡಬೇಡ’ ಎಂಬಂತಿದೆ ಅವರ ನಡೆ. ಮಂಡ್ಯದಲ್ಲಿ ರೈತರು ಹಲವು ದಿನಗಳಿಂದ ತಮ್ಮ ಬೇಡಿಕೆ ಮುಂದಿಟ್ಟು ಪ್ರತಿಭಟಿಸುತ್ತಿದ್ದಾರೆ, ಬಿಜೆಪಿಗೆ ನೈಜ ಕಾಳಜಿ ಇದ್ದರೆ ಅವರ ಬಳಿ ಹೋಗಲಿ” ಎಂದು ಆಗ್ರಹಿಸಿದೆ.

ಯಶವಂತಪುರ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯ ಬೋರ್ಡ್ ಅನ್ನು ಬಿಜೆಪಿ ಪ್ರಚಾರಕ್ಕೆ ಬಳಸಿರುವುದನ್ನು ಪ್ರಶ್ನಿಸಿರುವ ಕಾಂಗ್ರೆಸ್, “ಜನರ ಹಣ, ಸರ್ಕಾರಿ ಆಸ್ಪತ್ರೆ, ಆದರೆ ಪ್ರಚಾರ ಮಾತ್ರ ಬಿಜೆಪಿಯದ್ದು. ಬಸವರಾಜ ಬೊಮ್ಮಾಯಿಯವರೇ ಯಶವಂತಪುರದ ಕೋವಿಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿಜೆಪಿ ಪ್ರಚಾರದ ಬೋರ್ಡ್ ಹಾಕಿದ್ದೇಕೆ? ಸರ್ಕಾರಿ ಆಸ್ತಿಗಳೆಲ್ಲವನ್ನು ಬಿಜೆಪಿ ಕಬಳಿಸಿತೇ ಹೇಗೆ? ಇದು ಅಧಿಕಾರ ದುರ್ಬಳಕೆ ಅಲ್ಲದೆ ಇನ್ನೇನು? ನೈತಿಕತೆ ಇದ್ದರೆ ಕೂಡಲೇ ಇದನ್ನು ತೆರವುಗೊಳಿಸಿ” ಎಂದು ಒತ್ತಾಯಿಸಿದೆ.

ಮೂಲ ಬಿಜೆಪಿ v/s ವಲಸೆ ಬಿಜೆಪಿ

ಮೂಲ ಬಿಜೆಪಿ v/s ವಲಸೆ ಬಿಜೆಪಿ ನಡುವೆ ಕಿತ್ತಾಟವಾಗುತ್ತಿದೆ ಎಂದು ವಿಡಿಯೊವೊಂದನ್ನು ಕಾಂಗ್ರೆಸ್ ಹಂಚಿಕೊಂಡಿದೆ. “ಮೂಲ ಬಿಜೆಪಿ vs ವಲಸೆ ಬಿಜೆಪಿ ಎಂಬ ವೈಮಸ್ಸು ಜೋರಾಗಿದೆ! ಆಪರೇಷನ್ ಕಮಲ ನಡೆಸಿದ ಬಿಜೆಪಿಗೆ ಅದೇ ಆಪರೇಷನ್ ಸಂಕಟ ತಂದಿಡುವುದು ನಿಶ್ಚಿತ. ಬಿಜೆಪಿ ಹಾಳು ಮಾಡಿ ಹೋಗಲು ಬಂದಿದ್ದಾರೆ ಎಂದು ನಿಮ್ಮದೇ ಕಾರ್ಯಕರ್ತರು ಆರೋಪಿಸಿದ್ದು ಯಾರಿಗೆ? ತಾವು ಬಳಸಿ ಬಿಸಾಡುವವರು ಎಂದು ಬಿಜೆಪಿ ಕಾರ್ಯಕರ್ತರಿಗೆ ತಿಳಿಯುತ್ತಿದೆ” ಎಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಎಇಒ ಕ್ರೈಸ್ತ ಧರ್ಮದವರಲ್ಲ

0
ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿ (ಎಇಒ) ಆಗಿ ಯೇಸುರಾಜ್ ನೇಮಕಗೊಂಡಿದ್ದಾರೆ. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ...