Homeಮುಖಪುಟ45 ಶಾಸಕರ ಬೆಂಬಲ; ಜಾರ್ಖಂಡ್ ವಿಧಾನಸಭೆಯಲ್ಲಿ 'ವಿಶ್ವಾಸಮತ' ಗೆದ್ದ ಹೇಮಂತ್ ಸೊರೇನ್

45 ಶಾಸಕರ ಬೆಂಬಲ; ಜಾರ್ಖಂಡ್ ವಿಧಾನಸಭೆಯಲ್ಲಿ ‘ವಿಶ್ವಾಸಮತ’ ಗೆದ್ದ ಹೇಮಂತ್ ಸೊರೇನ್

- Advertisement -
- Advertisement -

ಜುಲೈ 4 ರಂದು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು, ಸೋಮವಾರ 81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದರು. ನೂತನ ಮುಖ್ಯಮಂತ್ರಿಯನ್ನು 45 ಶಾಸಕರು ಬೆಂಬಲಿಸಿದ್ದು, ವಿಶ್ವಾಸಮತಕ್ಕೂ ಮುನ್ನ ವಿಪಕ್ಷ ಶಾಸಕರು ಸದನದಿಂದ ಹೊರನಡೆದರು.

ಜಾರ್ಖಂಡ್ ವಿಧಾನಸಭೆಯ ಪ್ರಸ್ತುತ ಸಂಖ್ಯಾಬಲ 76 ಆಗಿದ್ದು, ಜುಲೈ 3 ರಂದು ಹೇಮಂತ್ ಸೊರೇನ್ ಸರ್ಕಾರ ರಚಿಸಲು ಹಕ್ಕು ಮಂಡಿಸಿದಾಗ ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟವು 44 ಶಾಸಕರ ಬೆಂಬಲ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿತು.

ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಶಾಸಕರು ಬಹುಮತ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ, ಇದು ಸುಲಭವಲ್ಲ ಎಂದು ಬಿಜೆಪಿ ವಾದಿಸಿತು.

ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್‌ನ ಹೈಕೋರ್ಟ್ ಜಾಮೀನು ನೀಡಿದ ನಂತರ, ಜೂನ್ 28 ರಂದು ಹೇಮಂತ್ ಸೊರೇನ್ ಜೈಲಿನಿಂದ ಬಿಡುಗಡೆಯಾಗಿದ್ದರು. ಜನವರಿ 31ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸುವ ಮುನ್ನವೇ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಮಾರು ಐದು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿರುವ ಹೇಮಂತ್ ಸೊರೇನ್ ಅವರು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಜುಲೈ 4 ರಂದು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದರು. ರಾಂಚಿಯ ರಾಜಭವನದಲ್ಲಿ ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೇಮಂತ್ ಸೊರೇನ್ ಅವರ ತಂದೆ ಶಿಬು ಸೊರೇನ್ ಕೂಡ ಉಪಸ್ಥಿತರಿದ್ದರು.

ಚಂಪೈ ಸೊರೇನ್ ರಾಜೀನಾಮೆ

ಹೇಮಂತ್ ಸೊರೇನ್ ಬಂಧನದ ನಂತರ ಫೆಬ್ರವರಿ 2 ರಂದು ಜಾರ್ಖಂಡ್‌ನ 12 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಚಂಪೈ ಸೊರೇನ್ ಅವರು, ಬುಧವಾರ ರಾಜಭವನದಲ್ಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ಜೆಎಂಎಂ ಕಾರ್ಯಾಧ್ಯಕ್ಷರ ಸಮ್ಮುಖದಲ್ಲಿ ರಾಜೀನಾಮೆ ಸಲ್ಲಿಸಿದರು.

“ಜೆಎಂಎಂ ನೇತೃತ್ವದ ಮೈತ್ರಿಕೂಟದ ನಿರ್ಧಾರದಂತೆ ನಾನು ರಾಜೀನಾಮೆ ನೀಡಿದ್ದೇನೆ. ನಮ್ಮ ಮೈತ್ರಿ ಪ್ರಬಲವಾಗಿದೆ” ಎಂದು ರಾಜಭವನದಿಂದ ಹೊರಬಂದ ನಂತರ ಚಂಪೈ ಸೊರೇನ್ ಹೇಳಿದ್ದರು.

“ಹೇಮಂತ್ ಸೊರೇನ್ ಜೊತೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ.. ನನಗೆ ಸಮ್ಮಿಶ್ರ ಪಾಲುದಾರರು ಜವಾಬ್ದಾರಿಯನ್ನು ನೀಡಿದ್ದಾರೆ. ಈಗ, ಮೈತ್ರಿಕೂಟವು ಹೇಮಂತ್ ಸೊರೇನ್ ಪರವಾಗಿ ನಿರ್ಧರಿಸಿದೆ” ಎಂದು ಅವರು ಹೇಳಿದರು.

ಹೇಮಂತ್ ಸೊರೇನ್ ಈಗ ಜಾರ್ಖಂಡ್‌ನ 13 ನೇ ಮುಖ್ಯಮಂತ್ರಿಯಾಗಿದ್ದಾರೆ, ಇದನ್ನು ನವೆಂಬರ್ 15, 2000 ರಂದು ಬಿಹಾರದಿಂದ ಬೇರ್ಪಡಿಸಲಾಗಿದೆ.

ಇದನ್ನೂ ಓದಿ; ಅಸ್ಸಾಂ: ನಿರಾಶ್ರಿತ ಮಣಿಪುರ ನಿವಾಸಿಗಳನ್ನು ಭೇಟಿಯಾದ ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕಾಂಗ್ರೆಸಿಗರನ್ನು ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತೇವೆ’ ಎಂದಿದ್ದ ನಾರಾಯಣಸ್ವಾಮಿ ಮನೆಗೆ ಬ್ಲಿಂಕಿಟ್ ಮೂಲಕ 20 ಚಾಕುಗಳ ಆರ್ಡರ್: ದೂರು ದಾಖಲಿಸಿದ ಬಿಜೆಪಿ

ಬೆಂಗಳೂರು: ಕ್ವಿಕ್ ಕಾಮರ್ಸ್ ವೇದಿಕೆ ಬ್ಲಿಂಕಿಟ್ ಮೂಲಕ ತನಗೆ 20 ಚಾಕುಗಳನ್ನು ಕಳುಹಿಸಲಾಗಿದೆ. ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರೇ ಈ ಚಾಕುಗಳನ್ನು ಆರ್ಡರ್ ಮಾಡಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ...

ಫಿರೋಜಾಬಾದ್‌ನಲ್ಲಿ ಸಾಮೂಹಿಕ ಅತ್ಯಾಚಾರ; ಬಹು ಅಂಗಾಂಗ ಹಾನಿಯಿಂದ 16 ವರ್ಷದ ದಲಿತ ಬಾಲಕಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನವೆಂಬರ್ 1 ರಂದು ಬರ್ಬರ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 16 ವರ್ಷದ ದಲಿತ ಬಾಲಕಿ, ಆಗ್ರಾದ ಆಸ್ಪತ್ರೆಯೊಂದರಲ್ಲಿ ಸುಮಾರು ಒಂದು ವಾರಗಳ ಕಾಲ ಸಾವಿನೊಂದಿಗೆ ಹೋರಾಡಿದ ನಂತರ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ. ಆಕೆಯನ್ನು...

ಬಂಗಾಳದ SIR ಟ್ರಿಬ್ಯೂನಲ್‌ನಿಂದ 4ನೇ ನ್ಯಾಯಾಧೀಶರ ನಿರ್ಗಮನ: ನಿವೃತ್ತ ನ್ಯಾಯಮೂರ್ತಿ ಬಿಸ್ವಜಿತ್ ಬಸು ರಾಜೀನಾಮೆ!

ಕೋಲ್ಕತಾ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಮೇಲ್ಮನವಿ ಟ್ರಿಬ್ಯೂನಲ್‌ನಿಂದ ನಿವೃತ್ತ ನ್ಯಾಯಮೂರ್ತಿ ಬಿಸ್ವಜಿತ್ ಬಸು ಅವರು ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವರದಿಗಳ ಪ್ರಕಾರ, ಕಲ್ಕತ್ತಾ...

‘6 ತಿಂಗಳಲ್ಲಿ ನನ್ನ ಪ್ರಾಣ ತೆಗೆಯಲು ಇದು 7ನೇ ಯತ್ನ!’: ಕೋರ್ಟ್-ಪೋಲಿಸ್ ಇಲಾಖೆ ಹಾಗೂ ಬಿಜೆಪಿ ವಿರುದ್ಧ ಸಿಡಿದೆದ್ದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ!

ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತಾದ ಕಾಳಿಘಾಟ್ ನಿವಾಸದ ಹೊರಭಾಗದಲ್ಲಿ ಶುಕ್ರವಾರ ನಡುರಾತ್ರಿ ಭಾರಿ ಹೈಡ್ರಾಮಾವೊಂದು ಸಂಭವಿಸಿದೆ. 2...

́ನಿಮ್ಮ ದೀಪಾವಳಿ ವೀಕೆಂಡ್ ಹಾಳುಮಾಡಲ್ಲ, ಸೋಮವಾರ ಉತ್ತರ ಕೊಡ್ತೀವಿ!’: ಎಥನಾಲ್ ಮಿಶ್ರಣ ಸ್ಪಷ್ಟೀಕರಣ ನೀಡಿದ ತೈಲ ಸಂಸ್ಥೆಗಳಿಗೆ ಸಚಿವ ರಿಜ್ವಾನ್ ಅರ್ಷಾದ್ ಟಾಂಗ್!

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿಪಡಿಸಿದ ಶೇಕಡ 20 ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದರ...

ಯೂಟರ್ನ್ ಹೊಡೆದ ಚುನಾವಣಾ ಆಯೋಗ : SIR ವಿರುದ್ಧದ ಹೋರಾಟದಲ್ಲಿ ಜನ ಸಂಘಟನೆಗಳಿಗೆ ಮತ್ತೊಂದು ಮಹತ್ವದ ಗೆಲುವು

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧದ ಹೋರಾಟದಲ್ಲಿ ಜನ ಸಂಘಟನೆಗಳಿಗೆ ಮತ್ತೊಂದು ಮಹತ್ವದ ಗೆಲುವಾಗಿದೆ. ಎಸ್‌ಐಆರ್ ವೇಳೆ ಡಿಲೀಟ್ ಪಟ್ಟಿಗೆ (ಎಎಸ್‌ಡಿಡಿ) ಬಿದ್ದ ಅರ್ಹ ಮತದಾರರು ತಮ್ಮ ಹಕ್ಕು ಮರಳಿ...

‘ಪ್ರಧಾನಿ ಮೋದಿಯನ್ನು ಗೊಂದಲಕ್ಕೀಡುಮಾಡಬೇಡಿ, ನನ್ನೊಂದಿಗೆ ಬಹಿರಂಗ ಚರ್ಚೆಗೆ ಒಪ್ಪಿಸಿ!’: ಅಮಿತ್ ಷಾಗೆ ರಾಹುಲ್ ಗಾಂಧಿ ಆಗ್ರಹ!

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೊಂದಲಕ್ಕೀಡುಮಾಡುವ ಬದಲು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಇವಿಎಂ ಕುರಿತು ತಮ್ಮೊಂದಿಗೆ ಬಹಿರಂಗ ಚರ್ಚೆಗೆ...

‘ಅಮೆರಿಕ ಅಧ್ಯಕ್ಷರ ಹತ್ಯೆ ಮಾಡುವಂತೆ ಧ್ವನಿ ಕೇಳಿಸುತ್ತಿತ್ತು’: ವೈಟ್ ಹೌಸ್ ಬಳಿ ಮಾರಕಾಸ್ತ್ರಗಳಿದ್ದ ಕಾರಿನೊಂದಿಗೆ ವೆನಿಜುವೆಲ್ಲಾ ಪ್ರಜೆ ಬಂಧನ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ 26 ವರ್ಷದ ರೋನಿ ಯೋರ್ಡ್ರಿಕ್ಸ್ ಗುವಾನಿಪಾ ಚ್ರಿನೋಸ್ ಎಂಬ ವೆನಿಜುಎಲ್ಲಾ ಮೂಲದ ವಲಸಿಗನನ್ನು ಯುಎಸ್ ಸೀಕ್ರೆಟ್ ಸರ್ವಿಸ್...

‘E20 turned into 420’ : ಕರ್ನಾಟಕ ಸರ್ಕಾರದ ಪರಿಶೀಲನೆಯಲ್ಲಿ ಬಯಲಾದ ‘ಪೆಟ್ರೋಲ್ ಚೋರಿ’; ಕೇಂದ್ರದ ವಿರುದ್ಧ ಜನಾಕ್ರೋಶ

E20 ಹೆಸರಿನಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ಶೇಕಡ 30ಕ್ಕಿಂತ (31.2) ಅಧಿಕ ಎಥೆನಾಲ್ ಇರುವುದು ಕರ್ನಾಟಕ ಸರ್ಕಾರದ ನಡೆಸಿದ ಪರಿಶೀಲನೆಯಲ್ಲಿ ಬಟಾಬಯಲಾಗಿದ್ದು, ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ...

ಜೆಡಿಎಸ್ ಸಮರ್ಥನೆ ಬಿಜೆಪಿಯ ರಾಜಕೀಯ ದಿವಾಳಿತನ ತೋರಿಸುತ್ತದೆ : ಆರ್. ಅಶೋಕ್ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು!

ಕರ್ನಾಟಕ ರಾಜಕೀಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾಕ್ಸಮರ ತೀವ್ರಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಆರ್. ಅಶೋಕ್ ಮಾಡಿದ ಕಟು...