Homeಮುಖಪುಟತೇಜಸ್ವಿ ಯಾದವ್ ಬಿಹಾರದ ಮುಂದಿನ ಮುಖ್ಯಮಂತ್ರಿ: ಸುಳಿವು ನೀಡಿದ ನಿತೀಶ್ ಕಮಾರ್

ತೇಜಸ್ವಿ ಯಾದವ್ ಬಿಹಾರದ ಮುಂದಿನ ಮುಖ್ಯಮಂತ್ರಿ: ಸುಳಿವು ನೀಡಿದ ನಿತೀಶ್ ಕಮಾರ್

- Advertisement -
- Advertisement -

2025ರ ಚುನಾವಣೆಯ ನಂತರ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾಗುತ್ತಾರೆ ಎಂಬುದಾಗಿ ಹಾಲಿ ಸಿಎಂ ನಿತೀಶ್ ಕುಮಾರ್ ಸುಳಿವು ನೀಡಿದ್ದಾರೆ.

“ನಾನು ಪ್ರಧಾನಿ ಅಭ್ಯರ್ಥಿ ಅಥವಾ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ಬಿಜೆಪಿಯನ್ನು ಸೋಲಿಸುವುದೇ ನನ್ನ ಗುರಿ. ನಾವು ತೇಜಸ್ವಿ ಯಾದವ್ ಅವರನ್ನು ಪ್ರೋತ್ಸಾಹಿಸಬೇಕಾಗಿದೆ” ಎಂದು ಬಿಹಾರದ ಆಡಳಿತ ಒಕ್ಕೂಟದ ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್ ಹೇಳಿದ್ದಾರೆ.

“ನಾವು ಬಹಳಷ್ಟು ಮಾಡುತ್ತಿದ್ದೇವೆ. ಇನ್ನೂ ಏನಾದರೂ ಉಳಿದಿದ್ದರೆ ಭವಿಷ್ಯದಲ್ಲಿ ತೇಜಸ್ವಿ ಯಾದವ್ ಆ ಕೆಲಸ ಮಾಡುತ್ತಾರೆ ಮತ್ತು ಎಲ್ಲವನ್ನೂ ಪೂರ್ಣಗೊಳಿಸುತ್ತಾರೆ. ನಮ್ಮನ್ನು ವಿಭಜಿಸಲು ಕೆಲವರು ಬಯಸುತ್ತಿದ್ದಾರೆ. ಆದರೆ ಯಾರ ಮಾತಿಗೂ ಮಣಿಯಲು ಪ್ರಯತ್ನಿಸಬೇಡಿ. ನಾವು ಒಗ್ಗಟ್ಟಾಗಿರಬೇಕು ಮತ್ತು ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ಘರ್ಷಣೆ ಇರಬಾರದು” ಇಂದು ಈ ಮುಂಚೆ ನಿತೀಶ್ ಕುಮಾರ್ ಹೇಳಿದ್ದರು.

“ತೇಜಸ್ವಿ ಇಲ್ಲಿದ್ದಾರೆ, ಅವರನ್ನು ಮುಂದಕ್ಕೆ ಕೊಂಡೊಯ್ಯಲು ನಾನು ಏನು ಮಾಡಬಹುದೋ ಅದನ್ನು ಮಾಡಿದ್ದೇನೆ. ನಾನು ಅವರನ್ನು ಇನ್ನೂ ಮುಂದಕ್ಕೆ ಕರೆದೊಯ್ಯುತ್ತೇನೆ. ಅದನ್ನು ನೀವು ನೋಡುತ್ತೀರಿ. ನಮ್ಮ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ. ನಾವು ಏನೇ ಮಾಡಿದರೂ ಗಾಂಧಿ ಮಾರ್ಗವನ್ನೇ ಅನುಸರಿಸುತ್ತಿದ್ದೇವೆ’’ ಎಂದು ಹೇಳುವ ಮೂಲಕ ಬಿಹಾರದ ತನ್ನ ಮುಂದಿನ ಉತ್ತರಾಧಿಕಾರಿ ತೇಜಸ್ವಿ ಯಾದವ್ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತೇಜಸ್ವಿ ಯಾದವ್, ‘ಸದ್ಯದ ನನ್ನ ಗುರಿ 2024ರ ಚುನಾವಣೆಯಾಗಿದೆ. ಉಳಿದ ವಿಷಯಗಳ ಬಗ್ಗೆ ನಂತರ ಯೋಚಿಸುತ್ತೇವೆ’ ಎಂದಿದ್ದಾರೆ.

2017ರಿಂದ ತೇಜಸ್ವಿ ಯಾದವ್ ನಿತೀಶ್ ಕುಮಾರ್‌ರವರ ಕಟು ಟೀಕಾಕಾರರಾಗಿದ್ದರು. ಏಕೆಂದರೆ ಆ ಸಮಯದಲ್ಲಿ ಮಹಾ ಘಟಬಂಧನ್ ಮೈತ್ರಿ ತೊರೆದು ನಿತೀಶ್ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದ್ದರು. ಅದೇ ರೀತಿಯಾಗಿ 2022ರಲ್ಲಿಯೂ ಸಹ ಬಿಜೆಪಿ ಕೈಬಿಟ್ಟು ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಿದ್ದಾರೆ. ಅಂದಿನಿಂದ ತೆಜಸ್ವಿ ಯಾದವ್ ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾಗಿದ್ದಾರೆ.

ಕಳೆದ ತಿಂಗಳು ತೇಜಸ್ವಿ ಯಾದವ್ ನಿತೀಶ್ ಕುಮಾರ್‌ರವರನ್ನು ಹೊಗಳಿದ್ದರು. “ನನ್ನ ತಂದೆ ಮತ್ತು ತಾಯಿ ಮುಖ್ಯಮಂತ್ರಿಯಾಗಿದ್ದರು, ವಿರೋಧ ಪಕ್ಷದ ನಾಯಕರಾಗಿದ್ದರು. ನಾನು ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿದ್ದೇನೆ. ಒಮ್ಮೆ ವಿರೋಧ ಪಕ್ಷದ ಮುಖಂಡನಾಗಿದ್ದೆ. ಅಲ್ಲದೆ ಬಹಳ ಅನುಭವವುಳ್ಳ ಮುಖ್ಯಮಂತ್ರಿಯವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಅದೃಷ್ಟವಂತೆ ವ್ಯಕ್ತಿ” ಅಲ್ಲವೇ? ಎಂದಿದ್ದರು.

ಇದನ್ನೂ ಓದಿ; ‘ಸಂವಿಧಾನ ಉಳಿಸಲು ಮೋದಿಯನ್ನು ಕೊಲ್ಲಿರಿ’ ಎಂದಿದ್ದ ಕಾಂಗ್ರೆಸ್ ಮುಖಂಡನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...