Homeಮುಖಪುಟತೆಲಂಗಾಣ: 18 ವರ್ಷಗಳ ಜೈಲುವಾಸದ ನಂತರ ದುಬೈನಿಂದ ಆಗಮಿಸಿದ ಐವರು

ತೆಲಂಗಾಣ: 18 ವರ್ಷಗಳ ಜೈಲುವಾಸದ ನಂತರ ದುಬೈನಿಂದ ಆಗಮಿಸಿದ ಐವರು

- Advertisement -
- Advertisement -

ಕ್ರಿಮಿನಲ್ ಪ್ರಕರಣವೊಂದರಲ್ಲಿ ಅರಬ್‌ನಲ್ಲಿ ಶಿಕ್ಷೆಗೆ ಗುರಿಯಾಗಿದ್ದ ತೆಲಂಗಾಣದ ಐವರು ಪುರುಷರು 18 ವರ್ಷಗಳ ನಂತರ ದುಬೈನಿಂದ ತವರಿಗೆ ಮರಳಿದ್ದಾರೆ. ತಮ್ಮವರನ್ನು ಕಂಡ ಖುಷಿಯಲ್ಲಿ, ವಿಮಾನ ನಿಲ್ದಾಣದಲ್ಲೇ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ತಮ್ಮ ವಾಪಸಾತಿಗೆ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ ಕೆಟಿ ರಾಮರಾವ್ (ಕೆಟಿಆರ್) ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿರುವ ಎಲ್ಲ ಐವರು ಪುರುಷರು ರಾಜ್ಯದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ನಿವಾಸಿಗಳು. ಬಿಆರ್‌ಎಸ್‌ ಪಕ್ಷವು ಅವರ ಕುಟುಂಬ ಸದಸ್ಯರೊಂದಿಗೆ ನಿವಾಸಿಗಳ ಪುನರ್ಮಿಲನದ ಭಾವನಾತ್ಮಕ ವೀಡಿಯೊವನ್ನು ಹಂಚಿಕೊಂಡಿದೆ.

ಐದು ಜನರ ಮೇಲೆ ಕ್ರಿಮಿನಲ್ ಆರೋಪ

ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ನಿವಾಸಿಗಳಾದ ಶಿವರಾತ್ರಿ ಮಲ್ಲೇಶ್, ಶಿವರಾತ್ರಿ ರವಿ, ಗೊಲ್ಲೆಂ ನಾಂಪಲ್ಲಿ, ದುಂಡುಗುಲ ಲಕ್ಷ್ಮಣ್ ಮತ್ತು ಶಿವರಾತ್ರಿ ಹನ್ಮಂತು ಎಂಬ ಐವರು ನೇಪಾಳದ ಪ್ರಜೆಯೊಬ್ಬರನ್ನು 2005ರಲ್ಲಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಹತ್ಯೆ ಮಾಡಿದ ಆರೋಪದ ಮೇಲೆ, 25 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ದುಬೈನಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಬಹದ್ದೂರ್ ಸಿಂಗ್ ಎಂಬ ಮೃತ ನೇಪಾಳದ ಪ್ರಜೆಯ ಕುಟುಂಬವನ್ನು ಭೇಟಿ ಮಾಡಲು ಕೆಟಿಆರ್ ನೇಪಾಳಕ್ಕೆ ಹೋಗಿದ್ದರು ಎಂದು ಬಿಆರ್‌ಎಸ್ ಹೇಳಿಕೊಂಡಿದೆ. ದುಬೈನಲ್ಲಿನ ಕಾನೂನಿನ ಪ್ರಕಾರ, ಬಹದ್ದೂರ್ ಅವರ ಕುಟುಂಬ ಸದಸ್ಯರು ಕ್ಷಮೆ ನೀಡಿದರೆ ಐವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿತ್ತು. ಆದ್ದರಿಂದ, ಕೆಟಿಆರ್ ಬಹದ್ದೂರ್ ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ನೇಪಾಳದ ಬಹದ್ದೂರ್ ಅವರ ಕುಟುಂಬ ಸದಸ್ಯರು, ವಕೀಲರು ಮತ್ತು ಇತರ ಪ್ರತಿನಿಧಿಗಳ ಸಹಾಯದಿಂದ ಕ್ಷಮಾದಾನಕ್ಕೆ ಸಹಿ ಹಾಕಿದರು. ನೇಪಾಳದ ಪ್ರಜೆಯ ಕುಟುಂಬಕ್ಕೆ ಕೆಟಿಆರ್ ₹15 ಲಕ್ಷ ಚೆಕ್ ನೀಡಿದ್ದಾರೆ ಎಂದು ಬಿಆರ್‌ಎಸ್ ಹೇಳಿಕೊಂಡಿದೆ.

‘ಬಿಆರ್‌ಎಸ್ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವರ ಸತತ ಪ್ರಯತ್ನದಿಂದ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ನಿವಾಸಿಗಳು 18 ವರ್ಷಗಳ ಜೈಲುವಾಸದ ನಂತರ ದುಬೈನಿಂದ ಮನೆಗೆ ಮರಳಿದರು. ಮಾಜಿ ಸಚಿವ ಹಾಗೂ ಶಾಸಕರಾದ ಕೆಟಿಆರ್ ಅವರು  ಎಲ್ಲರಿಗೂ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದರು’ ಎಂದು ಬಿಆರ್‌ಎಸ್‌ ತನ್ನ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ.

‘ಎರಡು ತಿಂಗಳ ಹಿಂದೆ ದುಬೈ ಜೈಲಿನಿಂದ ಬಿಡುಗಡೆಯಾಗಿದ್ದ ಕೋನರಾವ್ ಪೇಟೆ ಮಂಡಲದ ದಂಡುಂಗುಲ ಲಕ್ಷ್ಮಣ್. ಮತ್ತೊಬ್ಬ ರುದ್ರಂಗಿ ಮಂಡಲದ ಮನಾಳ ಗ್ರಾಮದ ಶಿವರಾತ್ರಿ ಹನ್ಮಂತು ಎರಡು ದಿನಗಳ ಹಿಂದೆ ಬಿಡುಗಡೆಗೊಂಡು ಮನೆಗೆ ತಲುಪಿದ್ದ. ದುಬೈ ನ್ಯಾಯಾಲಯದ ಕ್ಷಮಾದಾನದಿಂದಾಗಿ ಜಿಲ್ಲೆಯ ನಿವಾಸಿಗಳು ಮನೆಗೆ ತೆರಳುತ್ತಿದ್ದಾರೆ. ಪೆದ್ದೂರು ಗ್ರಾಮದ ಶಿವರಾತ್ರಿ ಮಲ್ಲೇಶಂ ಹಾಗೂ ರವಿ ಎಂಬ ಇಬ್ಬರು ಸಹೋದರರು ಇದೇ ತಿಂಗಳ 21ರಂದು ಬಿಡುಗಡೆಯಾಗಿದ್ದರು. ಚಂದೂರ್ತಿ ಮಂಡಲದ ಮತ್ತೊಬ್ಬ ವ್ಯಕ್ತಿ ವೆಂಕಟೇಶ್ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದಾರೆ’ ಎಂದು ಬಿಆರ್‌ಎಸ್‌ ಹೇಳಿದೆ.

‘ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ಚಂದೂರ್ತಿ ಮಂಡಲದ ಕೋನರಾವ್ ಪೇಟೆ ಗ್ರಾಮದ ಗೋಲಂ ನಾಂಪಳ್ಳಿ, ಶಿವರಾತ್ರಿ ಹನುಮಂಡ್ಲು ಹಾಗೂ ದಂಡುಂಗುಲ ಲಕ್ಷ್ಮಣ್ ದುಬೈಗೆ ತೆರಳಿದ್ದರು. ಹೋದ ಆರು ತಿಂಗಳ ನಂತರ ನೇಪಾಳದ ಬಹದ್ದೂರ್ ಸಿಂಗ್ ಎಂಬ ಕಾವಲುಗಾರನ ಕೊಲೆ ಮಾಡಲಾಯಿತು. ಅಲ್ಲಿ ಕೆಲಸ ಮಾಡುತ್ತಿರುವ ಜಿಲ್ಲೆಯ ಐವರು ನಿವಾಸಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಭಾಷೆ ಸಂವಹನದ ಕಾರಣದಿಂದ ಪೊಲೀಸರಿಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಶಿಕ್ಷೆ ಸಾಬೀತಾಗಿದ್ದು, ದುಬೈ ಕೋರ್ಟ್ ಆರಂಭದಲ್ಲಿ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮೇಲ್ಮನವಿ ಸಲ್ಲಿಸಿದ ನಂತರ, 25 ವರ್ಷಗಳ ಶಿಕ್ಷೆ ವಿಧಿಸಲಾಯಿತು. ದುಬೈನ ಕಾನೂನು ಪ್ರಕಾರ ಕೊಲೆಯಾದವರ ಕುಟುಂಬಸ್ಥರು ಕ್ಷಮೆ ಯಾಚಿಸಿದರೆ ಬಿಡುಗಡೆ ಸಾಧ್ಯತೆ ಇದ್ದು, 2011ರಲ್ಲಿ ಶಾಸಕ ಕೆ.ಟಿ.ಆರ್ ಒಮ್ಮೆ ನೇಪಾಳಕ್ಕೆ ತೆರಳಿದ್ದರು’ ಎಂದು ಹೇಳಿದೆ.

‘ನೇಪಾಳದ ಬಹದ್ದೂರ್ ಅವರ ಕುಟುಂಬ ಸದಸ್ಯರು ವಕೀಲ ಅನುರಾಧ ಮತ್ತು ಇತರ ಪ್ರತಿನಿಧಿಗಳ ಸಹಾಯದಿಂದ ಕ್ಷಮಾದಾನಕ್ಕೆ ಸಹಿ ಹಾಕಿದರು. ಆರ್ಥಿಕವಾಗಿ ಕೆಟಿಆರ್ ಅವರಿಗೆ ಹದಿನೈದು ಲಕ್ಷ ರೂಪಾಯಿ ಚೆಕ್ ನೀಡಿದರು. ಅವರ ಕ್ಷಮಾದಾನ ಅರ್ಜಿಯನ್ನು ದುಬೈ ನ್ಯಾಯಾಲಯವು ತಿರಸ್ಕರಿಸಿತು. ಇದು ದುಬೈನಲ್ಲಿನ ಕಾನೂನುಗಳ ಬದಲಾವಣೆಯಿಂದಾಗಿ ಅವರ ಬಿಡುಗಡೆಗೆ ತಡವಾಯಿತು. ಸೆಪ್ಟೆಂಬರ್‌ನಲ್ಲಿ ಸಚಿವ ಕೆಟಿಆರ್ ಅವರು ಸಂತ್ರಸ್ತೆಯ ಕುಟುಂಬ ಸದಸ್ಯರೊಂದಿಗೆ ದುಬೈ ಕೋರ್ಟ್‌ನಲ್ಲಿ ಪ್ರಕರಣವನ್ನು ಪರಿಶೀಲಿಸಿದರು ಮತ್ತು ಕೇಂದ್ರ ವಿದೇಶಾಂಗ ಸಚಿವಾಲಯದ ಸಹಾಯದಿಂದ ದುಬೈ ರಾಜನ ಅಪಾಯಿಂಟ್‌ಮೆಂಟ್ ಪಡೆದು ಈ ಪ್ರಕರಣದಲ್ಲಿ ಕ್ಷಮಾದಾನ ಕೋರಿದರು’ ಎಂದು ಪಕ್ಷ ಹೇಳಿಕೊಂಡಿದೆ.

ಇದನ್ನೂ ಓದಿ; ಹರಿಯಾಣ 160 ರೈತರನ್ನು ಗಾಯಗೊಳಿಸಿದ್ದರೂ ನಮ್ಮ ಪೊಲೀಸರು ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ: ಪಂಜಾಬ್ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...