Homeಕರ್ನಾಟಕಗಡಿಯಲ್ಲಿ ಏನು ನಡೆಯುತ್ತಿದೆ ಎಂಬುವುದನ್ನು ದೇಶಕ್ಕೆ ತಿಳಿಸಿ: ಹೆಚ್‌. ಡಿ. ದೇವೇಗೌಡ

ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುವುದನ್ನು ದೇಶಕ್ಕೆ ತಿಳಿಸಿ: ಹೆಚ್‌. ಡಿ. ದೇವೇಗೌಡ

- Advertisement -
- Advertisement -

ಗಾಲ್ವಾನ್ ಕಣಿವೆಯಲ್ಲಿ ಏನು ನಡೆಯುತ್ತಿದೆ, ಪ್ರಧಾನ ಮಂತ್ರಿ ಮೋದಿ ಹಾಗೂ ರಕ್ಷಣಾ ಮಂತ್ರಿ ರಾಷ್ಟ್ರದ ಹಿತದೃಷ್ಟಿಯಿಂದ ಅಲ್ಲಿನ ಸ್ಪಷ್ಟವಾದ ಚಿತ್ರಣವನ್ನು ನೀಡಬೇಕು ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹೇಳಿದ್ದಾರೆ.

ಪೂರ್ವ ಲಡಾಕ್ ಸೆಕ್ಟರ್‌ನ ನಾಲ್ಕು ಸ್ಟ್ಯಾಂಡ್‌ಆಫ್ ಪಾಯಿಂಟ್‌ಗಳಲ್ಲಿ ಒಂದಾದ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಮುಖಾಮುಖಿಯಲ್ಲಿ ಭಾರತದ ಸೇನಾಧಿಕಾರಿ ಹಾಗೂ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಂದು ರಕ್ಷಣಾ ಸಚಿವಾಲಯದ ಹೇಳಿತ್ತು.

ನಂತರ ಹೇಳಿಕೆ ನೀಡಿದ ಭಾರತೀಯ ಸೇನೆ ಎರಡೂ ಕಡೆಯಿಂದಲೂ ಸಾವು ನೋವಾಗಿದೆ ಎಂದು ಹೇಳಿಕೆ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ “ಗಲ್ವಾನ್ ಕಣಿವೆಯಿಂದ ಬರುವ ವರದಿಗಳು ಗೊಂದಲಕಾರಿಯಾಗಿದೆ. ಉಲ್ಬಣಗೊಳ್ಳುವ ಬಿಕ್ಕಟ್ಟಿನಿಂದಾಗಿ ನಮ್ಮ ಸೈನಿಕರು ಯಾಕೆ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ? ರಾಷ್ಟ್ರೀಯ ಹಿತದೃಷ್ಟಿಯಿಂದ, ಪ್ರಧಾನಿ ಮತ್ತು ರಕ್ಷಣಾ ಮಂತ್ರಿ ಚೀನಾದೊಂದಿಗಿನ ಗಡಿ ವಿಷಯದಲ್ಲಿ ರಾಷ್ಟ್ರಕ್ಕೆ ಸ್ಪಷ್ಟವಾದ ಚಿತ್ರಣವನ್ನು ನೀಡಬೇಕು.” ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.

ಕಳೆದ ಕೆಲವು ವಾರಗಳಿಂದ ಲಡಾಖ್‌ನ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರೊಂದಿಗೆ ಚಕಮಕಿ ನಡೆಯುತ್ತಿದ್ದು, ಚೀನಾ ಸೈನ್ಯವೂ ಭಾರತದ ಭೂ ಪ್ರದೇಶದಲ್ಲಿದೆ ಎಂದು ಹಲವಾರು ಮೂಲಗಳು ವರದಿ ಮಾಡಿವೆ.


ಓದಿ: ಭಾರತೀಯ ಭೂಪ್ರದೇಶವನ್ನು ಒಳಗೊಂಡ ನಕ್ಷೆ ಅಂಗೀಕರಿಸಿದ ನೇಪಾಳ


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...