Homeಅಂತರಾಷ್ಟ್ರೀಯಪ್ರತಿಭಟನೆಯ ಹಕ್ಕಿನ ಬಗ್ಗೆ ‘ಮಿಸ್‌ ಯುನಿವರ್ಸ್’ ವೇದಿಕೆಯಲ್ಲಿ ಮಾತನಾಡಿದ ಭಾರತವನ್ನು ಪ್ರತಿನಿಧಿಸಿದ ಸ್ಪರ್ಧಿ!

ಪ್ರತಿಭಟನೆಯ ಹಕ್ಕಿನ ಬಗ್ಗೆ ‘ಮಿಸ್‌ ಯುನಿವರ್ಸ್’ ವೇದಿಕೆಯಲ್ಲಿ ಮಾತನಾಡಿದ ಭಾರತವನ್ನು ಪ್ರತಿನಿಧಿಸಿದ ಸ್ಪರ್ಧಿ!

- Advertisement -
- Advertisement -

69 ನೇ ‘ಮಿಸ್ ಯೂನಿವರ್ಸ್’ ಸ್ಪರ್ಧೆಯು ಅಮೆರಿಕದ ಫ್ಲೋರಿಡಾದಲ್ಲಿ ಸೋಮವಾರ ನಡೆದಿದ್ದು, ಅಂತಿಮ ಸುತ್ತಿನ ಆಯ್ಕೆಯಲ್ಲಿ 26 ವರ್ಷದ ಮೆಕ್ಸಿಕೊದ ಆಂಡ್ರಿಯಾ ಮೆಜಾ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಬ್ರೆಜಿಲ್‌ನ ಜೂಲಿಯಾ ಗಾಮಾ ಎರಡನೆ ಸ್ಥಾನಕ್ಕೆ ಆಯ್ಕೆಯಾಗಿದ್ದು, ಪೆರುವಿನ ಜಾನಿಕ್ ಮಾಸೆಟಾ ಮೂರನೆ ಸ್ಥಾನಕ್ಕೆ ಹಾಗೂ ಭಾರತವನ್ನು ಪ್ರತಿನಿಧಿಸಿದ್ದ 22 ವರ್ಷದ ಆಡ್ಲೈನ್‌ ಕ್ಯಾಸ್ಟೆಲಿನೊ ನಾಲ್ಕನೆ ಸ್ಥಾನವನ್ನು ಅಲಂಕರಿಸಿದರು.

ಭಾರತವನ್ನು ಪ್ರತಿನಿಧಿಸಿದ್ದ ಆಡ್ಲೈನ್‌ ಕ್ಯಾಸ್ಟೆಲಿನೊ ಅವರಿಗೆ ಅಂತಿಮ ಪ್ರಶ್ನೋತ್ತರ ಸುತ್ತಿನಲ್ಲಿ, “ದೇಶಗಳು ತಮ್ಮ ಆರ್ಥಿಕತೆಯ ಮೇಲೆ ಒತ್ತಡದ ಹೊರತಾಗಿಯೂ ಕೊರೊನಾ ಕಾರಣಕ್ಕಾಗಿ ಲಾಕ್‌ಡೌನ್‌ ಮಾಡಬೇಕೆ ಅಥವಾ ಅವರು ತಮ್ಮ ಗಡಿಗಳನ್ನು ತೆರೆಯಬೇಕೆ” ಎಂದು ಪ್ರಶ್ನಿಸಲಾಯಿತು.

ಇದನ್ನೂ ಓದಿ: ಅಂಬೇಡ್ಕರ್: ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಹೋರಾಟಗಾರ

ಇದಕ್ಕೆ ಉತ್ತರಿಸಿದ ಆಡ್ಲೈನ್ ​​ಕ್ಯಾಸ್ಟೆಲಿನೊ, “ಗುಡ್ ಈವ್ನಿಂಗ್ ಯುನಿವರ್ಸ್. ನಾನು ಭಾರತದವಳಾಗಿದ್ದು ಭಾರತವು ಇದೀಗ ಅನುಭವಿಸುತ್ತಿರುವುದಕ್ಕೆ ಸಾಕ್ಷಿಯಾಗಿದ್ದೇನೆ. ಪ್ರೀತಿಪಾತ್ರರ ಆರೋಗ್ಯಕ್ಕಿಂತ ಏನೂ ಮುಖ್ಯವಲ್ಲ ಎಂದು ಅರಿತುಕೊಂಡಿದ್ದೇನೆ. ಆರ್ಥಿಕತೆ ಮತ್ತು ಆರೋಗ್ಯದ ನಡುವಿನ ಸಮತೋಲನವನ್ನು ಕಾಪಾಡಬೇಕು. ಸರ್ಕಾರವು ಜನರೊಂದಿಗೆ ನಿಂತು ಕೈಜೋಡಿಸಿ ಕೆಲಸ ಮಾಡಿದಾಗ ಮಾತ್ರ ಇದನ್ನು ಮಾಡಬಹುದು” ಎಂದು ಹೇಳಿದ್ದಾರೆ.

ಇದರ ನಂತರ ನಡೆದ ‘ಅಂತಿಮ ಹೇಳಿಕೆ’ (ಫೈನಲ್ ಸ್ಟೇಟ್‌ಮೆಂಟ್) ನಲ್ಲಿ ಆಡ್ಲೈನ್‌ ಕ್ಯಾಸ್ಟೆಲಿನೊ ಅವರಿಗೆ, ‘ಅಭಿವ್ಯಕ್ತಿ ಸ್ವಾತಂತ್ಯ್ರ ಮತ್ತು ಪ್ರತಿಭಟಿಸುವ ಹಕ್ಕು’ ಇದರ ಬಗ್ಗೆ ಮಾತನಾಡುವಂತೆ ಕೇಳಲಾಯಿತು.

ಈ ಬಗ್ಗೆ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ನಾವು ಅನೇಕ ಪ್ರತಿಭಟನೆಗಳನ್ನು ನೋಡಿದ್ದೇವೆ. ವಿಶೇಷವಾಗಿ ಮಹಿಳೆಯರು ವರ್ಷದುದ್ದಕ್ಕೂ ಸಮಾನ ಹಕ್ಕುಗಳೊಂದಿಗೆ ನಡೆಸಿದ ಪ್ರತಿಭಟನೆಗಳನ್ನು ನಾನು ಗಮನಸೆಳೆಯಲು ಬಯಸುತ್ತೇನೆ. ಇಂದಿನವರೆಗೂ ಪ್ರತಿಭಟನೆಯಲ್ಲಿ ನಮಗೆ ಮಹಿಳೆಯರ ಕೊರತೆಯಿದೆ. ಅಸಮಾನತೆಯ ವಿರುದ್ದ ಧ್ವನಿ ಎತ್ತಲು ನಮಗೆ ಪ್ರತಿಭಟನೆ ಸಹಾಯ ಮಾಡುತ್ತದೆ. ಇದು ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತರು ತಮ್ಮ ಧ್ವನಿಯನ್ನು ಎತ್ತಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿಭಟನೆ ಬಹಳ ಮುಖ್ಯ…” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಪರಿಸ್ಥಿತಿ ನಿರ್ವಹಣೆ ಕಷ್ಟವಾಗುತ್ತಿತ್ತು- ನಳೀನ್ ಕುಮಾರ್‌ ಕಟೀಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...