Homeರಾಷ್ಟ್ರೀಯಮಹಾತ್ಮ ಗಾಂಧಿಯ ಹತ್ಯೆಯನ್ನು ಸಮರ್ಥಿಸಿದ ಹಿಂದೂ ಮಹಾ ಸಭಾ ನಾಯಕ

ಮಹಾತ್ಮ ಗಾಂಧಿಯ ಹತ್ಯೆಯನ್ನು ಸಮರ್ಥಿಸಿದ ಹಿಂದೂ ಮಹಾ ಸಭಾ ನಾಯಕ

- Advertisement -
- Advertisement -

ಮಹಾತ್ಮಾ ಗಾಂಧಿಯನ್ನು ಕೊಂದ ಭಯೋತ್ಪಾದಕ ನಾಥುರಾಮ್ ಗೋಡ್ಸೆಯನ್ನು ನಾವು ಗೌರವಿಸುತ್ತೇವೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ನಾಯಕ ಮುನ್ನಾ ಕುಮಾರ್ ಶರ್ಮಾ ಕೇರಳದ ತ್ರಿಶೂರ್‌ನಲ್ಲಿ ಗುರುವಾರ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ತ್ರಿಶೂರ್‌ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುನ್ನಾಕುಮಾರ್ ಶರ್ಮಾ,“ಗೋಡ್ಸೆ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಎರಡರ ಸದಸ್ಯರಾಗಿದ್ದರು. ಆದರೆ, ಅವರು ನಮ್ಮ ಸಂಘಟನೆ ಸದಸ್ಯರಲ್ಲ ಎಂದು ಆರೆಸ್ಸೆಸ್‌ ಹೇಳುತ್ತಿದೆ. ನಾವು  ಹಾಗೆ ಹೇಳುವುದಿಲ್ಲ. ಅವರು ಹಿಂದೂ ಮಹಾಸಭಾದ ಸದಸ್ಯರಾಗಿದ್ದರು ಎಂದು ಹೇಳುತ್ತೇವೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಗೋಡ್ಸೆಯನ್ನು ನಾವು ಗೌರವಿಸುತ್ತೇವೆ. ಯಾಕೆಂದರೆ ಅವರು ಭಾರತದ ಏಕತೆ ಮತ್ತು ಸಮಗ್ರತೆಗಾಗಿ ಗಾಂಧಿಯನ್ನು ಕೊಂದರು” ಎಂದು ಗಾಂಧಿ ಕೊಲೆಯನ್ನು ಮುನ್ನಾ ಕುಮಾರ್‌ ಶರ್ಮಾ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗೋಡ್ಸೆ ಭಕ್ತರು ಪ್ರಧಾನಿ ಕಾರ್ಯಾಲಯದಲ್ಲಿದ್ದಾರೆ, ಅವರೆ ನನ್ನ ಬಂಧನಕ್ಕೆ ನೇರ ಕಾರಣ: ಜಿಗ್ನೇಶ್ ಮೇವಾನಿ

“ಗೋಡ್ಸೆ ಗಾಂಧಿ ಕೊಲೆಯನ್ನು ದೇಶವನ್ನು ಉಳಿಸಲು ಬೇಕಾಗಿ ಮಾಡಿದರು. ಗಾಂಧಿ ಮತ್ತು ನೆಹರೂ ಭಾರತವನ್ನು ಭಾರತ-ಪಾಕಿಸ್ತಾನ ಎಂಬ ಎರಡು ಭಾಗಗಳಾಗಿ ವಿಭಜಿಸಿದರು. ಒಂದು ವೇಳೆ ಗಾಂಧಿ ಬದುಕಿ ಉಳಿದಿದ್ದರೆ ದೇಶವೂ ಇನ್ನೂ ಎರಡು ಮೂರು ದೇಶಗಳಾಗಿ ವಿಭಜನೆ ಹೊಂದುತ್ತಿತ್ತು. ಈ ಪರಿಸ್ಥಿತಿಯನ್ನು ಉಳಿಸಲು ಬೇಕಾಗಿ ಅವರು ಗಾಂಧಿಯನ್ನು ಕೊಂದರು” ಎಂದು ಅವರು ತಿಳಿಸಿದ್ದಾರೆ.

ನೀವು ಗಾಂಧಿ ಕೊಲೆಯನ್ನು ಸಮರ್ಥಿಸುತ್ತಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಹೌದು ಸಮರ್ಥಿಸುತ್ತೇವೆ’ ಎಂದು ನೇರವಾಗಿ ಮುನ್ನಾ ಕುಮಾರ್‌ ಉತ್ತರಿಸಿದ್ದಾರೆ.

“ಗೋಡ್ಸೆ ಒಬ್ಬ ನಾಯಕನಾಗಿದ್ದು, ಈ ಎಲ್ಲಾ ಕೆಲಸಗಳನ್ನು ಅವರು ದೇಶವನ್ನು ಉಳಿಸಲು ಬೇಕಾಗಿ ಮಾಡಿದರು. ದೇಶದ ಸಮಗ್ರತೆ ಮತ್ತು ಏಕತೆಗಾಗಿ ಗೋಡ್ಸೆ ತನ್ನ ಜೀವವನ್ನು ತ್ಯಾಗ ಮಾಡಿದರು. ಅವರು ಗಾಂಧಿಯನ್ನು ಕೊಲ್ಲಬೇಕಿತ್ತು ಎಂದು ನಾವು ಹೇಳುತ್ತಿಲ್ಲ. ಅದು ನಮ್ಮ ನಿರ್ಧಾರವೂ ಆಗಿರಲಿಲ್ಲ, ಅದು ಗೋಡ್ಸೆಯ ನಿರ್ಧಾರವಾಗಿತ್ತು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಮತ್ತು ಗೋಡ್ಸೆ ಬಗ್ಗೆ ಟ್ವೀಟ್‌ ಮಾಡಿದ್ದಕ್ಕಾಗಿ ಗುಜರಾತ್‌ ಶಾಸಕ, ಹೋರಾಟಗಾರ ಜಿಗ್ನೇಶ್‌ ಮೇವಾನಿಯ ಬಂಧನ

ಸಾವರ್ಕರ್‌ ಅವರನ್ನು ಟೀಕಿಸುವವರು ದೇಶದ್ರೋಹಿಗಳಾಗಿದ್ದು, ಅಂತವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದೂ ಅವರು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...