Homeದಿಟನಾಗರಫ್ಯಾಕ್ಟ್‌ಚೆಕ್‌: ‘ಹಿಂದುತ್ವದ ಟೆರರಿಸ್ಟ್‌‌ಗಳು ಮುಸ್ಲಿಂ ವ್ಯಕ್ತಿಯನ್ನು ಕೊಲ್ಲುತ್ತಿದ್ದಾರೆ’ ಎಂದು ಸುಳ್ಳು ಹರಡಲಾಗುತ್ತಿದೆ!

ಫ್ಯಾಕ್ಟ್‌ಚೆಕ್‌: ‘ಹಿಂದುತ್ವದ ಟೆರರಿಸ್ಟ್‌‌ಗಳು ಮುಸ್ಲಿಂ ವ್ಯಕ್ತಿಯನ್ನು ಕೊಲ್ಲುತ್ತಿದ್ದಾರೆ’ ಎಂದು ಸುಳ್ಳು ಹರಡಲಾಗುತ್ತಿದೆ!

- Advertisement -
- Advertisement -

‘‘ರಾಮನ ಹೆಸರಿನಲ್ಲಿ ಹಿಂದುತ್ವದ ಭಯೋತ್ಪಾದಕರು ಅಮಾಯಕ ಮುಸ್ಲಿಮರನ್ನು ಕೊಲ್ಲುತ್ತಿದ್ದಾರೆ’’ ಎಂಬ ಶೀರ್ಷಿಕೆಯಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಖ್ಯವಾಗಿ ಈ ವಿಡಿಯೊ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. 11 ಸೆಕೆಂಡಿನ ವಿಡಿಯೊ ಭಯಾನಕವಾಗಿದ್ದು, ನೀಲಿ ಪ್ಯಾಂಟಿಗೆ ಬೆಲ್ಟ್‌ ಧರಿಸಿರುವ, ಅರೆ ಬೆತ್ತಲೆ ವ್ಯಕ್ತಿಯನ್ನು ಕೈ ಕಟ್ಟಿ ಹಾಕಿ, ಬಾಯಿಗೆ ಬಟ್ಟೆಯನ್ನು ತುರುಕಲಾಗಿದೆ. ಜೊತೆಗೆ ವಿಡಿಯೊದಲ್ಲಿರುವ ವ್ಯಕ್ತಿಗೆ ‘ಜೈ ಶ್ರೀರಾಮ್ ಹೇಳು’ ಎಂದು ಒತ್ತಾಯಿಸುತ್ತಾ ಹರಿತವಾದ ಕತ್ತಿಯಿಂದ ಕುತ್ತಿಗೆಯನ್ನು ಕೊಯ್ಯಲಾಗುತ್ತದೆ. ರಕ್ತಸಿಕ್ತವಾದ ವಿಡಿಯೊ ನೋಡಲಾರದಷ್ಟು ಭಯಾನಕವಾಗಿದೆ.

ಮುಖ್ಯವಾಗಿ ಈ ವಿಡಿಯೊ ವಾಟ್ಸಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಫೇಸ್‌ಬುಕ್‌ನಲ್ಲಿ ಕೂಡಾ ಹರಿದಾಡುತ್ತಿದೆ. ಅದನ್ನು ಇಲ್ಲಿ ನೋಡಬಹುದು.(ಎಚ್ಚರಿಕೆ: ವಿಡಿಯೊ ನೋಡಬಾರದಷ್ಟು ಭಯಾನಕವಾಗಿದೆ). ವೈರಲ್‌ ಸಂದೇಶವೂ, “ರಾಮನ ಹೆಸರಲ್ಲಿ ಹಿಂದುತ್ವದ ಟೆರರಿಸ್ಟ್ ಗಳು ಅಮಾಯಕ ಮುಸಲ್ಮಾನರನ್ನು ಕೊಲ್ಲುತ್ತಿರೋದು ನೋಡಿ. Hinduthva people killing Muslims in name of lord rama in India” ಎಂದು ಪ್ರತಿಪಾದಿಸಿ ವೈರಲ್‌ ಆಗಿದೆ.

ಪ್ಯಾಕ್ಟ್‌‌ಚೆಕ್‌

ಹರಿದಾಡುತ್ತಿರುವ ವಿಡಿಯೊ ಭಯಾನಕವಾಗಿದ್ದು, ಅರೆ ಬೆತ್ತಲೆಯಾಗಿರುವ, ಬಾಯಿಗೆ ಬಟ್ಟೆ ತುರುಕಲ್ಪಟ್ಟ, ನೀಲಿ ಬಣ್ಣದ ಪ್ಯಾಂಟ್‌ಗೆ ಬೆಲ್ಟ್‌ ಧರಿಸಿರುವ ಯುವಕನ್ನು ಕುತ್ತಿಗೆಯನ್ನು ಕೊಯ್ಯಲಾಗುತ್ತದೆ. ದೃಶ್ಯವಂತೂ ಅಮಾನವೀಯವಾಗಿದ್ದು, ನೋಡಲು ಸಾಧ್ಯವಿಲ್ಲದಂತಿದೆ. ಈ ಚಿತ್ರವನ್ನೂ ನಾವು ರಿವರ್ಸ್ ಸರ್ಚ್ ಮಾಡಿದ್ದೇವೆ. ಈ ವೇಳೆ ನಮಗೆ ಆಸ್ಟ್ರೇಲಿಯಾದ ಸುದ್ದಿ ವೆಬ್‌‌ ಪೋರ್ಟಲ್‌ ಆಗಿರುವ news.com.auನಲ್ಲಿ 2018ರ ಫೆಬ್ರವರಿ ತಿಂಗಳ 6 ರಂದು ಮಾಡಿರುವ ಸುದ್ದಿ ದೊರೆತಿದೆ.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್‌‌: ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿನಿಯರ ಪದವಿ ರದ್ದು ಮಾಡಲಾಗಿದೆಯೇ?

ವರದಿ ಪ್ರಕಾರ, “ಈ ಘಟನೆಯು ದಕ್ಷಿಣ ಅಮೆರಿಕಾದ ದೇಶವಾದ ವೆನೆಜುವೆಲಾದಲ್ಲಿ ನಡೆದಿದೆ. ವಿಡಿಯೋದಲ್ಲಿ, ಹದಿಹರೆಯದ ಬಾಲಕನನ್ನು ಮಾದಕ ದ್ರವ್ಯ ಮಾಫಿಯಾವು ಕತ್ತು ಕೊಯ್ದು ಕೊಂದಿದೆ. ಬಾಲಕನು ಮಾದಕ ದ್ರವ್ಯ ಮಾಫಿಯಾದ ವಿರೋಧಿ ಗುಂಪಿನವನಾಗಿದ್ದರಿಂದ, ಆತನನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಈ ವಿಡಿಯೊವನ್ನು ಆರೋಪಿ ಗುಂಪೇ ಚಿತ್ರೀಕರಿಸಿ, ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ”.

ಈ ಘಟನೆಯನ್ನು ‘ಮೈಲ್‌ ಆನ್‌ಲೈನ್‌’ ಸುದ್ದಿ ಪೋರ್ಟಲ್‌ ಕೂಡಾ ವರದಿ ಮಾಡಿದೆ. ಈ ಪತ್ರಿಕೆಯ ವರದಿಯ ಪ್ರಕಾರ, ಬಾಲಕನು 13 ವರ್ಷದವನಾಗಿದ್ದು, ಆತನ ಕತ್ತನ್ನು ಕೊಯ್ಯುವ ಮೊದಲು ಕಿವಿಯನ್ನು ಕೂಡಾ ಕತ್ತರಿಸಲಾಗಿತ್ತು.

ಅಲ್ಲದೆ ಈ ಭಯಾನಕ ವಿಡಿಯೊಗೆ ವಾಯ್ಸ್‌ ಓವರ್‌ ಮೂಲಕ ‘ಜೈ ಶ್ರೀರಾಮ್ ಹೇಳು’ ಎಂದು ಎಡಿಟ್‌ ಮಾಡಿ ಹಾಕಲಾಗಿದೆ. ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜೈ ಶ್ರೀರಾಮ್ ಎಂದು ಹೇಳುತ್ತಾ ಹೊಡೆಯುವ ಶಬ್ದವನ್ನು ಕೇಳಬಹುದು. ಈ ವಾಯ್ಸ್‌ ಪ್ರಸ್ತುತ ವೈರಲ್‌ ವಿಡಿಯೊಗೆ ಹೊಂದಿಕೆ ಆಗುವುದಿಲ್ಲ.

ಇದೇ ರೀತಿಯ ವಿಡಿಯೊಗೆ ಮತ್ತೊಂದು ವಿಡಿಯೊವನ್ನು ಸೇರಿಸಿ, ‘ಕೇರಳದ ಮುಸ್ಲಿಮರು ಆರೆಸ್ಸೆಸ್‌ ಕಾರ್ಯಕರ್ತನ ಕತ್ತನ್ನು ಕೊಯ್ಯುತ್ತಿರುವ ದೃಶ್ಯ’ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ. ಅದರ ಫ್ಯಾಕ್ಟ್‌ಚೆಕ್‌ ಸುದ್ದಿಯನ್ನು ಇಲ್ಲಿ ಓದಬಹುದು.

ಒಟ್ಟಿನಲ್ಲಿ ವೈರಲ್‌ ಆಗಿರುವ ವಿಡಿಯೊ ಭಾರತದ ದೇಶದ್ದೇ ಅಲ್ಲ. ಇದು 2018 ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಅಮೆರಿಕಾದ ವೆನೆಜುವಾಲದಲ್ಲಿ ನಡೆದಿದೆ. ಈ ವಿಡಿಯೊಗೂ, ಭಾರತಕ್ಕೂ, ಆರೆಸ್ಸೆಸ್‌ಗೂ ಯಾವುದೇ ಸಂಬಂಧವಿಲ್ಲ.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಪುನೀತ್‌ರವರ ‘ಬೊಂಬೆ ಹೇಳುತೈತೆ’ ಹಾಡನ್ನು ಪಾಕ್ ಅಭಿಮಾನಿ ಹಾಡಿದ್ದು 2018 ರಲ್ಲಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...