Homeಮುಖಪುಟ‘ನಾನು ವಿಡಿಯೋ ಮಾಡಿದ್ದರ ಬಗ್ಗೆ ಮಾತನಾಡುತ್ತಿರುವ ಮಾಧ್ಯಮಗಳು ನಿರುದ್ಯೋಗದ ಕುರಿತು ಚರ್ಚಿಸುತ್ತಿಲ್ಲ'

‘ನಾನು ವಿಡಿಯೋ ಮಾಡಿದ್ದರ ಬಗ್ಗೆ ಮಾತನಾಡುತ್ತಿರುವ ಮಾಧ್ಯಮಗಳು ನಿರುದ್ಯೋಗದ ಕುರಿತು ಚರ್ಚಿಸುತ್ತಿಲ್ಲ’

- Advertisement -
- Advertisement -

ಉಭಯ ಸದನಗಳಿಂದ ಅಮಾನತಾಗಿದ್ದ ಸಂಸದರು ಸಂಸತ್ತಿನ ಹೊರಗೆ ಕುಳಿತಿರುವುದನ್ನು ನಾನು ವಿಡಿಯೋ ರೆಕಾರ್ಡ್ ಮಾಡುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿ ಮಾತನಾಡುತ್ತಿವೆ. ಅವರು ನಿರುದ್ಯೋಗದ ಬಗ್ಗೆ ಚರ್ಚಿಸುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಸರ್ಕಾರದ ವಿರುದ್ಧ ‘ಇಂಡಿಯಾ’ ಒಕ್ಕೂಟಗಳ ನಾಯಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸದರ ಅಮಾನತು ವಿಚಾರದಲ್ಲಿ ‘ಮಾಧ್ಯಮಗಳ ಪಕ್ಷಪಾತ’ದ ವಿರುದ್ಧ ಆಕ್ರೋಶ ಹೊರಹಾಕಿದರು.

‘ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಮಾಧ್ಯಮಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಶ್ನೆ ಮಾಡಲಿಲ್ಲ. ಮೂರ್ನಾಲ್ಕು ಯುವಕರು ಹೊಗೆ ಡಬ್ಬಿಯೊಂದಿಗೆ ಸಂಸತ್ತಿಗೆ ಪ್ರವೇಶಿಸಿದಾಗ ಬಿಜೆಪಿ ಸಂಸದರು ಹೇಗೆ ಹೆದರಿ ಓಡಿಹೋದರು ಎಂಬುದನ್ನು ನಾವು ನೋಡಿದ್ದೇವೆ. ಇದು ಖಂಡಿತವಾಗಿಯೂ ಭದ್ರತಾ ಉಲ್ಲಂಘನೆಯ ಪ್ರಶ್ನೆಯಾಗಿದೆ. ಆದರೆ, ನಿರುದ್ಯೋಗವೆ ಪ್ರತಿಭಟನೆಯ ಹಿಂದಿನ ಪ್ರಮುಖ ಕಾರಣವಾಗಿದೆ’ ಎಂದು ಹೇಳಿದರು.

‘ಮಾಧ್ಯಮಗಳು ದೇಶದ ನಿರುದ್ಯೋಗದ ಬಗ್ಗೆ ಮಾತನಾಡಲಿಲ್ಲ. ಬದಲಿಗೆ, ರಾಹುಲ್ ಗಾಂಧಿ ಸಂಸತ್ತಿನ ಹೊರಗೆ ಕುಳಿತಿರುವ ಸಂಸದರ ವೀಡಿಯೋಗಳನ್ನು ರೆಕಾರ್ಡ್ ಮಾಡುವ ಬಗ್ಗೆ ಮಾತನಾಡಲು ಪ್ರಾರಂಭಿಸಿದವು. ಸದನದಲ್ಲಿ ಭದ್ರತಾ ಲೋಪದ ಬಗ್ಗೆ ಮಾಧ್ಯಮಗಳು ಅಮಿತ್ ಶಾ ಅವರನ್ನು ಪ್ರಶ್ನಿಸಲಿಲ್ಲ ಯಾಕೆ’ ಎಂದು ಹೇಳಿದರು.

‘ಉಲ್ಲಂಘನೆಯು ಸಂಸತ್ತಿನ ಭದ್ರತೆಯ ಗಂಭಿರ ಪ್ರಶ್ನೆಯಾಗಿದೆ, ಇನ್ನೊಂದು ಮುಖ್ಯವಾದ ಪ್ರಶ್ನೆ ಇದೆ. ಆ ಯುವಕರು ಇಂತಹ ಪ್ರತಿಭಟನೆಗೆ ಮುಂದಾಗಿದ್ದು ಏಕೆ? ಕಾರಣ ನಿರುದ್ಯೋಗ… ದೇಶದಲ್ಲಿ ಭಯಾನಕ ನಿರುದ್ಯೋಗವಿದೆ.  ಯುವಕರು ಉದ್ಯೋಗ ಪಡೆಯಲು ಸಾಧ್ಯವಿಲ್ಲ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಹೆಚ್ಚಿನ ಮಟ್ಟದ ನಿರುದ್ಯೋಗವು ಭಾರತದ ಯುವಜನರಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್ ಚಟಕ್ಕೆ ಕಾರಣವಾಗಿದೆ. ನಾನು ಇತ್ತೀಚೆಗೆ ಒಂದು ಸಣ್ಣ ಸಮೀಕ್ಷೆಯನ್ನು ಮಾಡಿದ್ದೇನೆ… ಭಾರತೀಯ ಯುವಕರು ಸರಾಸರಿ ಒಂದೂವರೆಯಿಂದ ಏಳು ಗಂಟೆಗಳ ಕಾಲ ಇನ್ಸ್‌ಟಾಗ್ರಾಮ್, ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಕಳೆಯುತ್ತಾರೆ. ನರೇಂದ್ರ ಮೋದಿಯವರ ಸರ್ಕಾರದಲ್ಲಿ ಒಬ್ಬ ಭಾರತೀಯ ಯುವಕ ತನ್ನ ಸೆಲ್ ಫೋನ್‌ನಲ್ಲಿ ದಿನಕ್ಕೆ ಏಳೂವರೆ ಗಂಟೆಗಳ ಕಾಲ ಕಳೆಯುತ್ತಿದ್ದಾನೆ. ಏಕೆಂದರೆ ನರೇಂದ್ರ ಮೋದಿ ಅವರು ಭಾರತದ ಯುವಕರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ’ ಎಂದು ರಾಹುಲ್ ಹೇಳಿದರು.

ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಸದನದಲ್ಲಿ ಅಮಿತ್ ಶಾ ಪ್ರತಿಕ್ರಿಯೆ ಕೇಳಿದ ನಂತರ 146 ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಇಂಡಿಯಾ ಬಣದ ಪಕ್ಷಗಳ ನಾಯಕರು ಶುಕ್ರವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟಿಸಿದರು.

ಇದನ್ನೂ ಓದಿ; ದೆಹಲಿ: ಸಂಸದರ ಅಮಾನತು ಖಂಡಿಸಿ ಇಂಡಿಯಾ ಒಕ್ಕೂಟದಿಂದ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಕಸ್ಟಡಿ ಅವಧಿ ಮೇ 31ರವರೆಗೆ ವಿಸ್ತರಿಸಿದ...

0
ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಮೇ 31 ರವರೆಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಗಳವಾರ ವಿಸ್ತರಿಸಿದೆ. ಫೆಬ್ರವರಿ 26,...