Homeಮುಖಪುಟರಂಗಾಸಕ್ತರಿಗೆ ವಿಶೇಷ ಅವಕಾಶ: ತುಮಕೂರಿನ ಡೀಪ್ ಪೋಕಸ್ ಸಂಸ್ಥೆಯಿಂದ ಅಭಿನಯ ತರಭೇತಿ ಕಾರ್ಯಗಾರ

ರಂಗಾಸಕ್ತರಿಗೆ ವಿಶೇಷ ಅವಕಾಶ: ತುಮಕೂರಿನ ಡೀಪ್ ಪೋಕಸ್ ಸಂಸ್ಥೆಯಿಂದ ಅಭಿನಯ ತರಭೇತಿ ಕಾರ್ಯಗಾರ

ಪ್ರವೇಶ ಉಚಿತವಾಗಿದ್ದು ಪ್ರತಿದಿನ ಮದ್ಯಾಹ್ನ 3.30 ರಿಂದ ಸಂಜೆ 8 ರವರೆಗೆ, ತುಮಕೂರಿನ ಅಮಾನಿಕೆರೆಯ ಎದುರುಗಡೆ ಇರುವ ಕನ್ನಡ ಭವನದಲ್ಲಿ ಶಿಬಿರ ನಡೆಯಲಿದೆ

- Advertisement -
- Advertisement -

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಕನ್ನಡ ರಂಗಭೂಮಿಯಲ್ಲಿ ತುಮಕೂರು ವಿಶೇಷ ಸ್ಥಾನವನ್ನು ಪಡೆದಿದೆ. ಕಂಪನಿ ನಾಟಕದ ದಿಗ್ಗಜರಲ್ಲೊಬ್ಬರಾದ ಗುಬ್ಬಿ ವೀರಣ್ಣನವರ ತವರು ಜಿಲ್ಲೆಯಾದ ಇಲ್ಲಿ, ಈಗಲೂ ಎಂದಿಗೂ ನಿಲ್ಲದಂತೆ ಪ್ರತಿ ಶನಿವಾರ ಮತ್ತು ಭಾನುವಾರ ಪೌರಾಣೀಕ ನಾಟಕ ನಡೆಯತ್ತಲೇ ಇವೆ. ಮುಂಗಡವಾಗಿ 6 ತಿಂಗಳವರೆಗೂ ಈ ವಾರಗಳು ಕಾಯ್ದಿರಿಸುತ್ತಾರೆ. ಇಂತಹ ರಂಗ ನೆಲೆಯ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಆಧುನಿಕ ರಂಗಭೂಮಿ ಚಟುವಟಿಕೆಗಳು ನಡೆಯುತ್ತಿವೆ. ಇದೀಗ ಹೆಸರಾಂತ ರಂಗ ನಿರ್ಧೇಶಕ ನಟರಾಜ್ ಹೊನ್ನವಳ್ಳಿ ಅವರ ನೇತೃತ್ವದ ಡೀಪ್ ಪೋಕಸ್ ಸಂಸ್ಥೆಯು ಹತ್ತು ದಿನಗಳ ಅಭಿನಯ ತರಭೇತಿ ಶಿಬಿರ ಹಮ್ಮಿಕೊಂಡಿದೆ. ಜೂನ್ 23 ರಿಂದ ಜುಲೈ 2ರವರೆಗೆ ಶಿಬಿರ ನಡೆಯಲಿದ್ದು, ಜೂನ್ 23ರ ಭಾನುವಾರ ಸಂಜೆ 5.30ಕ್ಕೆ ಶಿಬಿರ ಉದ್ಘಾಟನೆಗೊಳ್ಳಲಿದೆ. ಈ ಶಿಬಿರವನ್ನು ಉದ್ಘಾಟಿಸಲು ರಂಗಭೂಮಿ ಮತ್ತು ಸಿನೆಮಾ ನಟರಾದ ಅಚ್ಯುತ್, ನೀನಾಸಂ ಸತೀಶ್, ಧರ್ಮೇಂದ್ರ ಮುಂತಾದವರು ಭಾಗವಹಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‍ನ ತುಮಕೂರು ಜಿಲ್ಲಾ ಘಟಕ, ಝೆನ್ ಟೀಮ್ ಮತ್ತು ಸಮ್ಮತ ಥೀಯೇಟರ್ ತುಮಕೂರು ಇವರ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು ಪ್ರತಿದಿನ ಮದ್ಯಾಹ್ನ 3.30 ರಿಂದ ಸಂಜೆ 8 ರವರೆಗೆ, ತುಮಕೂರಿನ ಅಮಾನಿಕೆರೆಯ ಎದುರುಗಡೆ ಇರುವ ಕನ್ನಡ ಭವನದಲ್ಲಿ ಶಿಬಿರ ನಡೆಯಲಿದೆ. ಈ ಶಿಬಿರಕ್ಕೆ ರಂಗನಿರ್ಧೇಕರಾದ ಚನ್ನಕೇಶವ ಜಿ, ಶಿವಮೊಗ್ಗ ರಂಗಾಯಣ ನಿರ್ದೇಶಕರಾದ ಎಂ.ಗಣೇಶ್, ನಟರಾದ ಅಚ್ಯುತ್, ನೀನಾಸಂ ಸತೀಶ್, ಹನುಮಂತೇಗೌಡ ,ನಟಿ ಅಂಜಾನಾ ಶೆಟ್ಟಿ ತುಮಕೂರಿನ ರಂಗಕರ್ಮಿಗಳಾದ ಗೋಮಾರದಹಳ್ಳಿ ಮಂಜುನಾಥ್, ಉಗಮ ಶ್ರೀನಿವಾಸ್, ತಿಪಟೂರು ಚಂದ್ರು, ರಂಗಾಯಣ ರವಿಶಂಕರ್ , ಚೇತನ್ ನೀನಾಸಂ ಮುಂತಾದ ಪ್ರತಿಭೆಗಳು ಜೊತೆಯಾಗಲಿದ್ದಾರೆ.

ಶಿಬಿರದ ನಿರ್ದೇಶಕರಾಗಿ ನಟರಾಜ್ ಹೊನ್ನವಳ್ಳಿ

ನಟರಾಜ್ ಹೊನ್ನವಳ್ಳಿಯವರು ಮೂಲತಹ ತಿಟೂರಿನ ಹೊನ್ನವಳ್ಳಿಯವರಾಗಿದ್ದಾರೆ. ನೀನಾಸಂ ಸಂಸ್ಥೆಯಲ್ಲಿ ರಂಗಶಿಕ್ಷಣದ ಕೋರ್ಸ್ ಮಾಡಿರುವ ಇವರು ಪಾಶ್ಚತ್ಯ ರಂಗಭೂಮಿನ ಕುರಿತು ವಿಶೇಷ ಆಧ್ಯಯನವನ್ನು ಮಾಡಿದ್ದಾರೆ. ತಿಪಟೂರಿನಲ್ಲಿ ಪ್ರೋಥಿಯೋ ಎಂಬ ತಂಡವನ್ನು ಕಟ್ಟಿದ್ದರು. ನಾಡಿನ ಖ್ಯಾತ ರಂಗ ನೀರ್ದೇಶಕರಾಗಿ ಗುರುತಿಸಿಕೊಂಡಿರುವ ಇವರು ಕ್ರೀಯಾಶೀಲ ರಂಗಕರ್ಮಿಯಾಗಿದ್ದಾರೆ.

ನಟರಾಜ್ ಹೊನ್ನವಳ್ಳಿ

ಲಂಕೇಶರ ಬದುಕು, ಶಂಕರ ಮೊಕಾಶಿ ಪುಣೇಕರ್ ಅವರ ನಟ ನಾರಾಯಣಿ , ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್, ಮಾಸ್ತಿಯವರ ಸುಬ್ಬಣ್ಣ ಕಾದಂಬರಿ, ಗುಣಮುಖ, ಮುದುಕನ ಮದುವೆ, ಶೇಕ್ಸಫೀಯರ್ ಮನೆಗೆ ಬಂದ ಮುಂತಾದ 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ಇವರ ರಂಗಸಾಧನೆಗಾಗಿ ತಿಪಟೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕ.ಸಾ.ಪ ಗೌರವಿಸಿತ್ತು.

ಡೀಪ್ ಪೋಕಸ್ ಸಂಸ್ಥೆಯ ಕುರಿತು

ಡೀಪ್ ಪೋಕಸ್ ಸಂಸ್ಥೆ ರಂಗ ನಿರ್ಧೇಶಕ ನಟರಾಜ್ ಹೊನ್ನವಳ್ಳಿಯವರ ಕನಸಿನ ಅಭಿನಯ ತರಬೇತಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ರಂಗಭೂಮಿ ಮತ್ತು ಸಿನೆಮಾ ನಟನೆಯ ಮತ್ತು ಅಭಿನಯ ತಂತ್ರಗಳ ಬಗ್ಗೆ ಅಧ್ಯಯನ ಸಂಸ್ಥೆಯಾಗಿ ಮುಂದಿನ ದಿನಗಳಲ್ಲಿ ರೂಪುಗೊಳ್ಳಲಿದೆ. ಸದ್ಯ ಹತ್ತು ದಿನಗಳ ಕಾರ್ಯಗಾರ ನಡೆಯುತ್ತಿದ್ದು ನಂತರ ಶಿಬಿರದ ನಿರ್ದೇಶಕರಾದ ನಟರಾಜ್ ಹೊನ್ನವಳ್ಳಿಯವರ ನಿರ್ದೇಶನದಲ್ಲಿ ದ.ರಾ.ಬೇಂದ್ರೆ ರಚಿಸಿರುವಂತಹ ಕಾಳಿದಾಸರ ಮೇಘದೂತ ನಾಟಕ ನಿರ್ಮಾಣವಾಗಲಿದೆ. ಹೀಗೆ ಸಿನೆಮಾ ಮತ್ತು ರಂಗಭೂಮಿಯ ಅಭಿನಯಕ್ಕಾಗಿ ದೇಹ ಮತ್ತು ಮನಸ್ಸನ್ನು ಸಿದ್ಧಪಡಿಸಿಕೊಳ್ಳುವುದು ಹೇಗೆ ಮತ್ತು ನಿರ್ದೇಶನವನ್ನೂ ಒಳಗೊಂಡೊಂತೆ ಬೇರೆ ಬೇರೆ ವಿಭಾಗಗಳನ್ನು ಕಲಿಸುವ ನಿಟ್ಟಿನಲ್ಲಿ ಡೀಪ್ ಫೋಕಸ್ ಅಭಿನಯ ಸ್ಟೋಡಿಯೋ ರೂಪುಗೊಳ್ಳಲಿದೆ. ತುಮಕೂರು ಭಾಗದಲ್ಲಿ ಒಂದು ರಂಗಭೂಮಿ ಮತ್ತು ಸಿನೆಮಾಕ್ಕೆ ಸಂಬಂಧಿಸಿದ ಶಾಲೆಯಾಗಿ ರೂಪುಗೊಳ್ಳೂವ ಸಿದ್ದತೆಯಲ್ಲಿರುವುದ ಸಂತಸದ ವಿಷಯ.

ತರಭೇತಿ ಶಿಬಿರದಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗೆ ಈ ಈ ಮೊಬೈಲ್ ನಂಬರ್ ಗಳಿಗೆ ಸಂಪರ್ಕಿಸಬಹುದಾಗಿದೆ. 9606546903, 7676360812, 9901848170, 8105515256.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಮಾರಾಟವಾಗಲು ನಿರಾಕರಿಸಿದ್ದಕ್ಕೆ ಜೈಲಿನಲ್ಲಿ ಹೊಡೆದು, ಚಿತ್ರಹಿಂಸೆ ನೀಡಿದ್ದರು: ಟಿಎಂಸಿ ನಾಯಕ ಸಾಕೇತ್ ಗೋಖಲೆ

0
ಬಿಜೆಪಿಗೆ ಸೇರಲು ಅಥವಾ ಮಾರಾಟವಾಗಲು ನಿರಾಕರಿಸಿದ್ದಕ್ಕಾಗಿ ಜೈಲಿನಲ್ಲಿ ನನಗೆ ಹೊಡೆದು ಚಿತ್ರಹಿಂಸೆ ನೀಡಲಾಗಿತ್ತು ಎಂದು ರಾಜ್ಯಸಭಾ ಸದಸ್ಯ, ಟಿಎಂಸಿ ನಾಯಕ ಸಾಕೇತ್ ಗೋಖಲೆ ಹೇಳಿದ್ದಾರೆ. ದಿ ವೈರ್‌ ಪ್ರಕಟಿಸಿದ ಹಿರಿಯ ವಕೀಲ ಕಪಿಲ್ ಸಿಬಲ್...