ಕಾಮನ್‌ವೆಲ್ತ್ ಕ್ರೀಡಾಕೂಟದ ಮೂರನೇ ದಿನ ಭಾರತಕ್ಕೆ ಮೂರನೇ ಚಿನ್ನದ ಪದಕ ಲಭಿಸಿದೆ. ವೇಟ್ ಲಿಫ್ಟರ್ ಅಚಿಂತ್ ಶಿಯುಲಿ 73ಕೆಜಿ ವಿಭಾಗದಲ್ಲಿ 313 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಜಯಿಸಿದ್ದು ಅಲ್ಲದೆ ಕಾಮನ್‌ವೆಲ್ತ್‌ನಲ್ಲಿ ದಾಖಲೆ ಬರೆದಿದ್ದಾರೆ.
20 ವರ್ಷದ ಅಚಿಂತ್ ಶಿಯುಲಿ ಸ್ನಾಚ್ ಸ್ಪರ್ಧೆಯಲ್ಲಿ 140 ಮತ್ತು 143ಕೆಜಿ ಭಾರ ಎತ್ತಿ ದಾಖಲೆ ನಿರ್ಮಿಸಿದರು. ನಂತರ ಕ್ಲೀನ್ ಅಂಡ್ ಜರ್ಕ್ ಸ್ಪರ್ಧೆಯಲ್ಲಿ 166 ಮತ್ತು 170 ಕೆಜಿ ಭಾರ ಎತ್ತಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಕೋಲ್ಕತ್ತಾದವರಾದ ಶಿಯುಲಿ 143 ಮತ್ತು 170 ಕೆಜಿ (ಒಟ್ಟು 313ಕೆಜಿ) ಭಾರ ಎತ್ತುವ ಮೂಲಕ ದಾಖಲೆ ಮಾಡಿದ್ದಲ್ಲದೆ ತಮ್ಮ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿಯೇ ಚಿನ್ನ ಗೆದ್ದರು.
ಮಲೇಷ್ಯಾದ ಎರ್ರಿ ಹಿದಾಯತ್ ಮುಹಮ್ಮದ್ 303 ಕೆಜಿ (138 ಕೆಜಿ 165 ಕೆಜಿ) ಭಾರ ಎತ್ತಿ ಬೆಳ್ಳಿ ಪದಕ ಗಳಿಸಿದರೆ, ಕೆನಡಾದ ಶಾದ್ ಡಾರ್ಸಿಗ್ನಿ ಒಟ್ಟು 298 ಕೆಜಿ (135 ಕೆಜಿ 163 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.
ಭಾರತಕ್ಕೆ ವೇಟ್ ಲಿಫ್ಟಿಂಗ್‌ನಲ್ಲಿ 6 ಪದಕ
ಮೂರು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು ಸೇರಿ ಇದುವರೆಗೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 6 ಪದಕ ಗೆದ್ದಿದೆ. ವಿಶೇಷವೆಂದರೆ ಆ ಎಲ್ಲಾ ಪದಕಗಳು ವೇಟ್ ಲಿಫ್ಟಿಂಗ್ ವಿಭಾಗದಲ್ಲಿಯೇ ದೊರಕಿವೆ. ವಿವರ ಕೆಳಗಿನಂತಿದೆ.
ಸಂಕೇತ್ ಸರ್ಗರ್: ಬೆಳ್ಳಿ
ಮೀರಾಬಾಯಿ ಚಾನು: ಚಿನ್ನ
ಬಿಂದ್ಯಾರಾಣಿ ದೇವಿ: ಬೆಳ್ಳಿ
ಜೆರೆಮಿ ಲಾಲ್ರಿನ್ನುಂಗಾ: ಚಿನ್ನ
ಗುರುರಾಜ ಪೂಜಾರಿ: ಕಂಚು
ಅಚಿಂತ್ ಶಿಯುಲಿ: ಚಿನ್ನ
ಈ ಬಾರಿಯ ಒಟ್ಟಾರೆ ಪದಕ ಗಳಿಸಿದ ದೇಶಗಳ ಪಟ್ಟಿಯಲ್ಲಿಯೂ ಭಾರತ 6ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: $1=₹80 ಕಾರಣವೇನು ಮತ್ತು ಪರಿಣಾಮವೇನು?