Homeಮುಖಪುಟ$1=₹80 ಕಾರಣವೇನು ಮತ್ತು ಪರಿಣಾಮವೇನು?

$1=₹80 ಕಾರಣವೇನು ಮತ್ತು ಪರಿಣಾಮವೇನು?

- Advertisement -
- Advertisement -

ಈ ವರ್ಷದ ಜನವರಿಯಲ್ಲಿ (2022) ಒಂದು ಡಾಲರಿಗೆ, ರೂಪಾಯಿ ಮೌಲ್ಯ 74.50 ಇದ್ದದ್ದು ಆರು ತಿಂಗಳಲ್ಲಿ ನಿರಂತರ ಕುಸಿತ ಕಂಡು ಈಗ ಕೆಲವು ದಿನಗಳ ಹಿಂದೆ ಒಂದು ಡಾಲರಿಗೆ 80 ರೂಪಾಯಿ ದಾಟಿದೆ.

ನಮ್ಮ ದೇಶ ಹೊರದೇಶಗಳೊಂದಿಗೆ ಮಾಡುವ ಒಟ್ಟು ಆಮದು ರಫ್ತಿನಲ್ಲಿ ಶೇ.85.6ರಷ್ಟು ವ್ಯವಹಾರವನ್ನು ಡಾಲರಿನಲ್ಲಿ ಮಾಡುತ್ತದೆ. ಹಾಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಡಾಲರಿಗೆ ಬೇಡಿಕೆ ಜಾಸ್ತಿಯಾದಷ್ಟೂ ರೂಪಾಯಿಯ ಬೆಲೆ ಕುಸಿಯತೊಡಗುತ್ತದೆ. ಹಾಗೆಯೇ ಭಾರತ ತಾನು ಮಾಡುವ ರಫ್ತಿಗಿಂತ ಆಮದು ಜಾಸ್ತಿಯಾಗುತ್ತಾ ಹೋದಂತೆ ವ್ಯಾಪಾರದ ಕೊರತೆ ಜಾಸ್ತಿಯಾಗುವ ಜೊತೆಗೆ ಡಾಲರಿನ ಮುಂದೆ ರೂಪಾಯಿ ಬೆಲೆಯೂ ಕುಸಿಯುತ್ತಾ ಹೋಗುತ್ತದೆ.

2021ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌ನಿಂದ ಜೂನ್) 31 ಬಿಲಿಯನ್ ಡಾಲರುಗಳಷ್ಟಿದ್ದ ವ್ಯಾಪಾರದ ಕೊರತೆಯು (Trade deficit) ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 71 ಬಿಲಿಯನ್ ಡಾಲರುಗಳಷ್ಟಾಗಿದೆ. (ರಪ್ತು $119 ಬಿಲಿಯನ್ ಮತ್ತು ಆಮದು $190 ಬಿಲಿಯನ್). ಇದು ದಾಖಲೆ ಮಟ್ಟದ ವ್ಯಾಪಾರದ ಕೊರತೆಯಾಗಿದ್ದು ಡಾಲರಿನ ಮುಂದೆ ರೂಪಾಯಿ ಕುಸಿಯಲು ಒಂದು ಮುಖ್ಯ ಕಾರಣವಾದಂತಿದೆ.

ಹಾಗೆಯೇ ಕಡೆಯ ಎಂಟು ತಿಂಗಳುಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Institutional Investors, FII) ಭಾರತದ ಮಾರುಕಟ್ಟೆಯಿಂದ 2.65 ಲಕ್ಷ ಕೋಟಿಯಷ್ಟು ಭಾರೀ ಮೊತ್ತದ ಹಣವನ್ನು ಹಿಂತೆಗೆದುಕೊಂಡಿದ್ದಾರೆ. ಅವರುಗಳು ಈ ಹಿಂತೆಗೆದಿರುವ ಹಣವನ್ನು ಡಾಲರಿಗೆ ಬದಲಾಯಿಸಿಕೊಳ್ಳುತ್ತಿರುವುದರಿಂದ ಡಾಲರಿಗೆ ಬೇಡಿಕೆ ಹೆಚ್ಚಾಗಿ, ಇದರಿಂದಲೂ ರೂಪಾಯಿ ಬೆಲೆ ಕುಸಿಯುತ್ತಾ ಬಂದಿದೆ.

ಒಂದು ಪಕ್ಷದಲ್ಲಿ ಇದೇ ಪರಿಸ್ಥಿತಿ ಉಲ್ಟಾ ಆಗಿದ್ದು, ಹೆಚ್ಚು ಡಾಲರು ಭಾರತದ ಮಾರುಕಟ್ಟಯಲ್ಲಿ ಹೂಡಿಕೆಯಾಗಿದ್ದರೆ ಆಗ ರೂಪಾಯಿಗೆ ಬೇಡಿಕೆ ಜಾಸ್ತಿಯಾಗಿರುತ್ತಿತ್ತು.

ಹೀಗೆ ಡಾಲರಿನ ಮುಂದೆ ರೂಪಾಯಿ ಬೆಲೆ ಕುಸಿಯುತ್ತಿರುವುದರಿಂದ ನಮ್ಮ ಮೇಲೆ ಏನು ಪರಿಣಾಮ ಬೀರುತ್ತಿದೆ?

2021-22ರಲ್ಲಿ ನಮಗೆ ಬೇಕಾದ ಒಟ್ಟು ಕಚ್ಚಾತೈಲದಲ್ಲಿ ಶೇ.85.6ರಷ್ಟನ್ನು ಆಮದು ಮಾಡಿಕೊಂಡಿದ್ದೇವೆ. ಈ ಕಚ್ಚಾತೈಲಕ್ಕೆ ನಾವು ಡಾಲರಿನಲ್ಲಿಯೆ ಪಾವತಿಸುತ್ತಿದ್ದೇವೆ. (ರಷ್ಯಾದಿಂದ ಶೇ.10ರಷ್ಟು ತೈಲ ಮಾತ್ರ ಖರೀದಿಸುತ್ತಿದ್ದೇವೆ, ಅದೂ ಕೇವಲ ಶೇ.6ರಷ್ಟು ಮಾತ್ರ ಕಡಿಮೆ ಬೆಲೆಗೆ).

ಡಾಲರಿನ ಎದುರು ರೂಪಾಯಿ ಕುಸಿದಷ್ಟೂ ಕಚ್ಚಾತೈಲಕ್ಕೆ ನಾವು ಕೊಡಬೇಕಾಗಿರುವ ಬೆಲೆ ಜಾಸ್ತಿಯಾಗುತ್ತಲೇ ಹೋಗುತ್ತದೆ. ಇದರಿಂದಾಗಿ ದೇಶದೊಳಗೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಗ್ಯಾಸ್‌ನ ಬೆಲೆ ಜಾಸ್ತಿಯಾಗುತ್ತಲೇ ಹೋಗುತ್ತದೆ (ಎಕ್ಸೈಸ್ ಡ್ಯೂಟಿ ಕಡಿಮೆ ಮಾಡಿದಾಗ್ಯೂ ಕೂಡ).

ಈ ಕಾರಣಕ್ಕೇ ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ಪೆಟ್ರೋಲ್ ಬೆಲೆ ಶೇ.14ರಷ್ಟು ಮತ್ತು ಡೀಸೆಲ್ ಬೆಲೆ ಶೇ.9.3ರಷ್ಟು ಜಾಸ್ತಿಯಾಗಿದೆ. ನಮಗೆಲ್ಲಾ ತಿಳಿದಿರುವಂತೆ ಇದು ಎಲ್ಲಾ ದೈನಂದಿನ ಅಗತ್ಯ ವಸ್ತುಗಳ ಬೆಲೆಯೇರಿಕೆಗೂ ಕಾರಣವಾಗುತ್ತದೆ.

ಹಾಗೆಯೇ ಭಾರತ ದೇಶವು ರಸಗೊಬ್ಬರವನ್ನೂ ಹೆಚ್ಚು ಆಮದು ಮಾಡಿಕೊಳ್ಳುತ್ತಿದ್ದು ರೂಪಾಯಿ ಕುಸಿತದಿಂದಾಗಿ ರಸಗೊಬ್ಬರಕ್ಕೆ ಹೆಚ್ಚಿನ ಬೆಲೆ ತೆರಬೇಕಾಗಿ ಬರುತ್ತಿದೆ. ಇದು ಸರ್ಕಾರದ ಒಟ್ಟಾರೆ ವೆಚ್ಚವನ್ನು ಜಾಸ್ತಿ ಮಾಡುತ್ತಿದ್ದು, ಸರ್ಕಾರ ಸಾರ್ವಜನಿಕ ಸೇವೆಗಳಿಗೆ (ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ ಇತ್ಯಾದಿ) ಅಗತ್ಯವಾಗಿ ಮಾಡಬೇಕಾದ ವೆಚ್ಚಕ್ಕೆ ಕಡಿವಾಣ ಹಾಕಬೇಕಾದ ಪರಿಸ್ಥಿತಿ ಬರುತ್ತದೆ. ಇದು ಇಡೀ ಸಮಾಜದ ಅಭಿವೃದ್ದಿಯ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ತಪ್ಪಿಸಿಕೊಳ್ಳಲು ಕಷ್ಟವಾಗುವಂತ ಆರ್ಥಿಕ ವಿಷವರ್ತುಲದಲ್ಲಿ ಇಡೀ ದೇಶವನ್ನು ಸಿಲುಕಿಸುತ್ತದೆ.

ರೂಪಾಯಿ ಕುಸಿತದಿಂದ ಲಾಭವೇನಾದರೂ ಇದೆಯೆ?

ಡಾಲರಿನ ಮುಂದೆ ರೂಪಾಯಿಯ ಬೆಲೆ ಕಡಿಮೆಯಾದಷ್ಟೂ ನಾವು ರಫ್ತು ಮಾಡುವ ಸರಕು ಸೇವೆಗಳ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಾಗುತ್ತದೆ. ಇದರಿಂದ ಸ್ಪರ್ಧಾತ್ಮಕ ಬೆಲೆಗೆ ನಮ್ಮಿಂದ ರಫ್ತಾಗುವ ಸರಕು ಸೇವೆಗಳು ಲಭ್ಯವಾಗಿ ಅದರಿಂದ ರಫ್ತು ಹೆಚ್ಚಾಗುತ್ತಾ ವ್ಯಾಪಾರದ ಕೊರತೆ ಕಡಿಮೆಯಾಗಿ ನಮ್ಮ
ಅರ್ಥವ್ಯವಸ್ಥೆಗೆ ಅನುಕೂಲವಾಗುತ್ತದೆ ಎಂಬ ವಾದವಿದೆ (ಈ ವಾದ ಚೈನಾ, ಜಪಾನುಗಳ ವಿಷಯದಲ್ಲಿ ನಿಜವೂ ಆಗಿದೆ).

ಆದರೆ, ಚೈನಾ ಅಥವಾ ಜಪಾನ್‌ಗಳ ಮಟ್ಟಕ್ಕೆ ರಫ್ತು ವ್ಯವಹಾರದಲ್ಲಿ ಭಾರತ ತಲುಪುವ ಲಕ್ಷಣಗಳು ಹತ್ತಿರದಲ್ಲೆಲ್ಲೂ ಕಾಣಿಸುತ್ತಿಲ್ಲ.

ಹಾಗಿದ್ದರೆ, ಸದ್ಯದಲ್ಲಿ ರೂಪಾಯಿ ಕುಸಿತ ತಡೆಯುವ ದಾರಿಗಳು ಇವೆಯೆ?

ಡಾಲರಿನ ಮುಂದೆ ರೂಪಾಯಿ ಶಕ್ತವಾಗಲು ಸದ್ಯ ಎರಡು ದಾರಿಗಳು ಕಾಣಿಸುತ್ತಿದ್ದರೂ ಅವು ಕ್ಷೀಣವಾದ ಸಾಧ್ಯತೆಗಳಾಗಿವೆ.

ಒಂದು, ಭಾರತದಿಂದ ಹೆಚ್ಚಿನ ಮಟ್ಟದಲ್ಲಿ ರಫ್ತಾಗುತ್ತಿರುವ ಐ.ಟಿ ಸೇವೆಗಳಿಂದ ರೂಪಾಯಿ ಬೆಲೆ ಹೆಚ್ಚಿಸಲು ಸಾಧ್ಯವಿದೆ. ಆದರೆ, ಯೂರೋಪ್ ಮತ್ತು ಅಮೆರಿಕದಲ್ಲಿ ಆರ್ಥಿಕ ಕುಸಿತದ/ ಹಿಂಜರಿತದ ನಿರೀಕ್ಷೆಯಿರುವುದರಿಂದ ಭಾರತದ ಐ.ಟಿ ಸೇವೆಗಳು ನಿರೀಕ್ಷೆಯ ಮಟ್ಟಕ್ಕೆ ರಫ್ತಾಗುವ ಸಾಧ್ಯತೆ ಕ್ಷೀಣವಾಗಿದೆ.

ಹಾಗಾಗಿ, ಐ.ಟಿ ಸೇವೆಗಳ ಹೆಚ್ಚಿನ ರಫ್ತಿನಿಂದ ರೂಪಾಯಿ ಕುಸಿತ ತಡೆಯಬಹುದೆನ್ನುವ ಸಾಧ್ಯತೆಯೂ ಫಲ ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ್ತೊಂದು, ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಡಾಲರಿನ ಮುಂದೆ ರೂಪಾಯಿ ಬೇಡಿಕೆ ಹೆಚ್ಚಿಸಬಹುದು. ಅದರೆ, ಆರ್ಥಿಕ ಸದೃಢತೆಯ ಕೊರತೆಯಿಂದ ವಿದೇಶಿ ನೇರ ಬಂಡವಾಳವೂ ನಿರೀಕ್ಷಿತ ಮಟ್ಟಕ್ಕೆ ಬರುವುದು ಅಸಾಧ್ಯವಾಗಿದೆ.

ಜೊತೆಗೆ, ನಿರೀಕ್ಷಿತ ಜಾಗತಿಕ ಆರ್ಥಿಕ ಹಿಂಜರಿಕೆಯಿಂದಾಗಿ ಎನ್‌ಆರ್‌ಐಗಳಿಂದ (ವಿದೇಶದಲ್ಲಿ ನೆಲೆಸಿರುವ ಭಾರತೀಯರು) ಭಾರತಕ್ಕೆ ಬರುವ ಹಣವೂ ಕಡಿಮೆಯಾಗುವ ಸಾಧ್ಯತೆಯೇ ಹೆಚ್ಚಿದೆ.

ಹೀಗೆ ಈ ಎಲ್ಲ ವಾಸ್ತವದ ಹಿನ್ನೆಲೆಯಲ್ಲಿ ಸದ್ಯಕ್ಕೆ ರೂಪಾಯಿಯ ಕುಸಿತ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಗಳೇ ಕಾಣಿಸುತ್ತಿವೆ ಮತ್ತು ಇದರಿಂದ ಜನಸಾಮಾನ್ಯರ ಬದುಕು ಮತ್ತಷ್ಟು ದುಸ್ತರವಾಗುವ ಸಾಧ್ಯತೆಗಳೂ ನಿಚ್ಚಳವಾಗಿ ಗೋಚರಿಸುತ್ತಿವೆ.

ಡಾ. ಬಿ.ಸಿ. ಬಸವರಾಜು

ಡಾ. ಬಿ.ಸಿ. ಬಸವರಾಜು 
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ.


ಇದನ್ನೂ ಓದಿ: ಅಮೆರಿಕನ್ ಡಾಲರ್‌‌ ಮುಂದೆ 80ರೂ. ತಲುಪಲಿರುವ ಭಾರತೀಯ ರುಪಾಯಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...