Homeಕರ್ನಾಟಕಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ ಇದು: ಸಿದ್ದರಾಮಯ್ಯ ಪ್ರತಿಕ್ರಿಯೆ

ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ ಇದು: ಸಿದ್ದರಾಮಯ್ಯ ಪ್ರತಿಕ್ರಿಯೆ

- Advertisement -
- Advertisement -

2023-24 ನೇ ಸಾಲಿನ ಬಜೆಟ್‌ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದರು. ಪ್ರತಿಪಕ್ಷದ ನಾಯಕರು, ‘ಇದು ಜನರ ಕಿವಿಗೆ ಹೂ ಇಡುವ ಬಜೆಟ್’ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯ ಬಜೆಟ್ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಅವರು, ಬಜೆಟ್‌ಅನ್ನು ಮೂರು ಕನ್ನಡ ಪದಗಳಲ್ಲಿ ಬಣ್ಣಿಸಿದ್ದಾರೆ- ”ಕಿವಿ-ಮೇಲೆ-ಹೂ!”. “ಈ ಬಜೆಟ್ ಒಂದು ಸುಳ್ಳು ಭರವಸೆಗಳ ಕಂತೆ, ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ಸುಳ್ಳು ಹೇಳುವುದನ್ನು ಚೆನ್ನಾಗೇ ಕಲಿತಿದ್ದಾರೆ” ಎಂದು ಸುರ್ಜೆವಾಲಾ ಕುಟುಕಿದ್ದಾರೆ. 2022-23 ಸಾಲಿನ ಬಜೆಟ್‌ನಲ್ಲಿ 349 ಹೊಸ ಯೋಜನೆಗಳ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಅವುಗಳಲ್ಲಿ ಯಾವುದನ್ನೂ ನೆರವೇರಿಸಲಿಲ್ಲ ಎಂದು ಅವರು ದೂರಿದ್ದಾರೆ.

ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, “ಇದನ್ನು ‘ಬಿಜೆಪಿ ಸರ್ಕಾರದ ನಿರ್ಗಮನ’ದ ಬಜೆಟ್” ಎಂದು ಕರೆದಿದ್ದಾರೆ. “ಈ ಬಾರಿಯ ಬಜೆಟ್ ಗಾತ್ರ ರೂ. 3,09,187ಕೋಟಿಯಷ್ಟಿದೆ. ಇನ್ನೆರಡು ತಿಂಗಳಲ್ಲಿ ಚುನಾವಣೆ ಇರುವುದರಿಂದ ಅದನ್ನು ಗುರಿಯಾಗಿಸಿಕೊಂಡು ಈ ಬಜೆಟ್ ಮಂಡನೆ ಮಾಡಿದ್ದಾರೆ. ಕಳೆದ ಬಜೆಟ್‌ನಲ್ಲಿ ಘೋಷಿಸಿರುವುದರಲ್ಲಿ 57 ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿಲ್ಲ. 2018ರ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ 90% ಜಾರಿಯಾಗಿಲ್ಲ. ಅನುಷ್ಠಾನ ಮಾಡುವ ಜವಾಬ್ದಾರಿ ಇಲ್ಲದೇ ಹೋದರೆ, ಎಷ್ಟು ಬೇಕಾದರೂ ಭರವಸೆ ಕೊಡಬಹುದು” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ವಿಭಿನ್ನ ಪ್ರತಿಭಟನೆ: ಬಜೆಟ್ ಅಧಿವೇಶಕ್ಕೆ ಕಿವಿಗೆ ಹೂ ಇಟ್ಟುಕೊಂಡು ಬಂದ ಸಿದ್ದರಾಮಯ್ಯ

”ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ಅನುದಾನ ಬರದೇ ಇರೋದಕ್ಕೆ ಇಷ್ಟೊಂದು ಸಾಲ ಮಾಡಬೇಕಾಗಿದೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಾಗ ಬಂಜಾರ ಸಮುದಾಯದ ಜನಕ್ಕೆ ಹಕ್ಕುಪತ್ರ ನೀಡಿದ್ದಕ್ಕೆ ಇವರು ಈಗ ಮೋದಿಯವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಆದರೆ ಅದು ಇವರು ಮಾಡಿರುವ ಸಾಧನೆ ಅಲ್ಲ. ಕಾಗೋಡು ತಿಮ್ಮಪ್ಪನವರು ರೆವಿನ್ಯೂ ಮಿನಿಸ್ಟರ್ ಇದ್ದಾಗ ಕಾನೂನು ತಿದ್ದುಪಡಿ ಮಾಡಿದ್ದರು. ಬಂಜಾರ ಸಮುದಾಯದವರಿಗೆಲ್ಲ ‘ವಾಸಿಸುವವನೇ ಮನೆಯ ಒಡೆಯ’ ಎನ್ನುವ ಕಾರ್ಯಕ್ರಮ ಜಾರಿಗೆ ತಂದು, ಹಕ್ಕುಪತ್ರ ಬರುವವರೆಗೂ ಕೆಲಸ ಮಾಡಿದ್ದು ನಾವು. ಆದರೆ ಇವರು ತಮ್ಮ ಸಾಧನೆ ಎಂದು ಹೇಳುವ ಮೂಲಕ ಹೈಜಾಕ್ ಮಾಡಿದ್ದಾರೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಜೆಟ್ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, “ಇದು ದಕ್ಷಿಣ ಭಾರತದಲ್ಲಿ ಬಿಜೆಪಿಯ ಕೊನೆಯ ಬಜೆಟ್‌ ಆಗಿದ್ದು, ಬರೀ ಸುಳ್ಳಗಳನ್ನೇ ಒಳಗೊಂಡಿದೆ. ಡಬಲ್ ಎಂಜಿನ್ ಸರ್ಕಾರ ಇದೆ, ರಾಜ್ಯವನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅವರು ಘೋಷಣೆಗಳನ್ನು ಮಾತ್ರ ನೀಡುತ್ತಾರೆ. ಅವು ಎಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಜೆಟ್‌ನಲ್ಲೂ ಚುನಾವಣಾ ದೃಷ್ಟಿಕೋನದಿಂದ ಸಾಕಷ್ಟು ಘೋ‍ಷಣೆಗಳನ್ನು ಮಾಡಿದ್ದಾರೆ. ಆದರೆ ಅವು ವಾಸ್ತವಕ್ಕೆ ದೂರವಾಗಿವೆ. ಇದು ಕೇವಲ ಅಂಕಿ ಅಂಶಗಳ ಪುಸ್ತಕ ಅಷ್ಟೇ.., ಬಿಜೆಪಿ ಬಜೆಟ್‌ನಿಂದ ರೈತರು, ಕಾರ್ಮಿಕರು, ಯುವಕರು, ವರ್ತಕರು ಯಾರಿಗೂ ಲಾಭವಿಲ್ಲ. ಈ ಬಜೆಟ್‌ನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆಯೂ ಮಾತನಾಡಿಲ್ಲ. ಸ್ವಯಂ ಉದ್ಯೋಗ ಯೋಜನೆಗಳೂ ಇಲ್ಲ. ಹೀಗಾಗಿ ಈ ಬಜೆಟ್‌ನಿಂದ ಯಾವುದೇ ವರ್ಗಕ್ಕೂ ಪ್ರಯೋಜನ ಆಗುವುದಿಲ್ಲ” ಎಂದು ಭವಿಷ್ಯ ನುಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...