Homeಮುಖಪುಟ'ನಾಚಿಕೆಗೇಡು': ತನ್ನ ಅಣಕಿಸಿದ ಟಿಎಂಸಿ ಸಂಸದನ ವಿರುದ್ಧ ರಾಜ್ಯಸಭೆ ಅಧ್ಯಕ್ಷ ಕಿಡಿ

‘ನಾಚಿಕೆಗೇಡು’: ತನ್ನ ಅಣಕಿಸಿದ ಟಿಎಂಸಿ ಸಂಸದನ ವಿರುದ್ಧ ರಾಜ್ಯಸಭೆ ಅಧ್ಯಕ್ಷ ಕಿಡಿ

- Advertisement -
- Advertisement -

ಸಂಸತ್‌ನಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಪ್ರತಿಭಟಿಸುವ ವೇಳೆ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ)ದ ಸಂಸದರೊಬ್ಬರು ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಅಣಕಿಸಿದ ಆರೋಪ ಕೇಳಿ ಬಂದಿದೆ.

ಇಂದು (ಡಿ.19) ಸಂಸತ್‌ನಿಂದ ಅಮಾನತುಗೊಂಡಿರುವ 49 ಸಂಸದರು ಹೊಸ ಸಂಸತ್‌ ಕಟ್ಟಡದ ‘ಮಕರ ದ್ವಾರ’ದ ಬಳಿ ಕುಳಿತು ಪ್ರತಿಭಟಿಸುತ್ತಿದ್ದರು. ಈ ವೇಳೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಅಣಕಿಸಿದ್ದಾರೆ ಎನ್ನಲಾಗಿದೆ.

ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಕಲ್ಯಾಣ್ ಬ್ಯಾನರ್ಜಿ ಜಗದೀಪ್ ಧನ್ಕರ್‌ ಅವರನ್ನುಅಣುಕರಣೆ ಮಾಡಿರುವುದು ಮತ್ತು ಇತರ ಸಂಸದರು ನಕ್ಕಿರುವುದನ್ನು ನೋಡಬಹುದು. ಗಮನಾರ್ಹ ಸಂಗತಿಯೆಂದರೆ, ಕಲ್ಯಾಣ್ ಬ್ಯಾನರ್ಜಿ ಅಣುಕರಣೆ ಮಾಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ್ದಾರೆ. “ನನ್ನ ಬೆನ್ನುಮೂಳೆ ನೇರವಾಗಿದೆ. ನಾನು ತುಂಬಾ ಉದ್ದ ಇದ್ದೀನಿ” ಎಂದು ಕಲ್ಯಾಣ್ ಬ್ಯಾನರ್ಜಿ ಹೇಳಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.

ಅಪರಾಹ್ನ ರಾಜ್ಯಸಭೆ ಕಲಾಪ ಮತ್ತೆ ಆರಂಭವಾದಾಗ ಈ ಸಂಬಂಧ ರಾಹುಲ್‌ ಗಾಂಧಿಯವರನ್ನು ಗುರಿಯಾಗಿಸಿ ಮಾತನಾಡಿದ ಜಗದೀಪ್ ಧನ್ಕರ್, ” ಒಬ್ಬರು ಸಂಸದರು ಸಭಾಧ್ಯಕ್ಷರನ್ನು ಅಣಕಿಸಿರುವುದು ಮತ್ತು ಪಕ್ಷದ ನಾಯಕರೊಬ್ಬರು ಅದನ್ನು ಚಿತ್ರೀಕರಿಸಿರುವುದು ಹಾಸ್ಯಾಸ್ಪದ, ನಾಚಿಕೆಗೇಡಿನ ಸಂಗತಿ. ದೇವರು ಅವರಿಗೆ ಸದ್ಬುದ್ದಿ ಕೊಡಲಿ” ಎಂದಿದ್ದಾರೆ.

ವೈರಲ್ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ, “ವಿರೋಧ ಪಕ್ಷದ ಸಂಸದರನ್ನು ಯಾಕೆ ಅಮಾನತು ಮಾಡಲಾಗ್ತಿದೆ? ಎಂದು ದೇಶ ಆಶ್ಚರ್ಯ ಪಡುತ್ತಿದೆ. ಅದಕ್ಕೆ ಕಾರಣ ಇಲ್ಲಿದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದೆ.

ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಗೌರವಾನ್ವಿತ ಉಪ ರಾಷ್ಟ್ರಪತಿಗಳನ್ನು ಅಪಹಾಸ್ಯ ಮಾಡಿದರೆ, ರಾಹುಲ್ ಗಾಂಧಿ ಅವರನ್ನು ಹುರಿದುಂಬಿಸಿದ್ದಾರೆ. ಹಾಗಾದರೆ, ಅವರು ಸದನದಲ್ಲಿ ಎಷ್ಟು ಅಜಾಗರೂಕರಾಗಿರಬಹುದು ಮತ್ತು ನಿಯಮ ಉಲ್ಲಂಘಿಸಿರಬಹುದು ಎಂದು ಯಾರು ಬೇಕಾದರು ಊಹಿಸಬಹುದು ಎಂದು ಬಿಜೆಪಿ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.

ಇದನ್ನೂ ಓದಿ: ಸಂಸತ್‌ನಿಂದ ಮತ್ತೆ 49 ಸಂಸದರ ಅಮಾನತು: ಒಟ್ಟು ಸಂಖ್ಯೆ 141ಕ್ಕೆ ಏರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read