Homeಮುಖಪುಟರೈಲು ದುರಂತ: ಗಾಯಾಳುಗಳ ಚಿಕಿತ್ಸೆಗೆ ರಕ್ತದಾನ ಮಾಡಲು ಸಾಲುಗಟ್ಟಿ ನಿಂತ ಜನ

ರೈಲು ದುರಂತ: ಗಾಯಾಳುಗಳ ಚಿಕಿತ್ಸೆಗೆ ರಕ್ತದಾನ ಮಾಡಲು ಸಾಲುಗಟ್ಟಿ ನಿಂತ ಜನ

- Advertisement -
- Advertisement -

ಇತ್ತೀಚಿನ ವರ್ಷಗಳಲ್ಲಿ ಕಂಡರಿಯದಂತಹ ಮಹಾ ರೈಲು ದುರಂತವೊಂದು ಘಟಿಸಿಹೋಗಿದೆ. ಎರಡು ರೈಲುಗಳು ಹಳಿ ತಪ್ಪಿ ಗೂಡ್ಸ್‌ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 238 ಜನರು ಅಸು ನೀಗಿದ್ದಾರೆ. 900ಕ್ಕೂ ಹೆಚ್ಚು ಮಂದಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ಚಿಕಿತ್ಸೆಗೆ ರಕ್ತದಾನ ಮಾಡಲು ನೂರಾರು ನಾಗರೀಕರು ಆಸ್ಪತ್ರೆಗಳ ಮುಂದೆ ಸಾಲು ಗಟ್ಟಿ ನಿಂತಿರುವ ದೃಶ್ಯಗಳು ಕಂಡುಬರುತ್ತಿವೆ.

ಭದ್ರಕ್‌ನ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ರಕ್ತದಾನ ಮಾಡಲು ರಕ್ತದಾನಿಗಳು ಮುಂದಾಗಿದ್ದಾರೆ. ಈಗಾಗಲೇ ಹಲವಾರು ಜನ ರಕ್ತದಾನ ಮಾಡಿದ್ದು, ಇನ್ನು ಉದ್ದನೆಯ ಸರತಿ ಸಾಲು ಕಂಡುಬಂದಿದೆ. ದುರಂತದ ಸಂದರ್ಭದಲ್ಲಿ ಮಾನವೀಯತೆ ಮೆರೆದಿದ್ದಾರೆ.

ಅತ್ಯಂತ ದುರಂತ ರೈಲು ಅಪಘಾತ… ಅನಾಹುತದಿಂದ ಜನರನ್ನು ರಕ್ಷಿಸಲು ರಾತ್ರಿಯಿಡೀ ಶ್ರಮಿಸಿದ ಸ್ಥಳೀಯ ತಂಡಗಳು, ಸ್ಥಳೀಯ ಜನರು ಮತ್ತು ಇತರರಿಗೆ ನಾನು ಧನ್ಯವಾದ ಹೇಳಬೇಕು… ರೈಲ್ವೆ ಸುರಕ್ಷತೆಗೆ ಯಾವಾಗಲೂ ಮೊದಲ ಆದ್ಯತೆ ನೀಡಬೇಕು… ಗಾಯಗೊಂಡ ಜನರನ್ನು ಬಾಲಸೋರ್ ಮತ್ತು ಕಟಕ್‌ನ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಅವರು ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ಒಡಿಸ್ಸಾ ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಾರೆ.

ಇನ್ನು ರೈಲು ಹಳಿ ತಪ್ಪಿದ ಕಾರಣಕ್ಕಾಗಿ ಮಾರ್ಗ ಬಂದ್ ಆದ ಕಾರಣ ಹತ್ತಾರು ರೈಲುಗಳನ್ನು ರದ್ದುಗೊಳಿಸಲಾಗಿದೆ. ನೂರಾರು ರೈಲುಗಳ ಮಾರ್ಗ ಬದಲಿಸಲಾಗಿದೆ. ಆಗ್ನೇಯ ರೈಲ್ವೆಯು ಬಾಲಸೋರ್ ಅಪಘಾತದ ನಂತರ ರದ್ದುಗೊಳಿಸಲಾದ ರೈಲುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ

ದೇಶ-ವಿದೇಶಗಳಿಂದ ಹರಿದು ಬಂದ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಒಡಿಸ್ಸಾ ರೈಲು ದುರಂತದ ಪರಿಸ್ಥಿತಿ ಅವಲೋಕನ ನಡೆಸಲು ಸಭೆ ಕರೆದಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ತಮ್ಮ ರಾಜ್ಯದ ಗಾಯಾಳುಗಳ ಚಿಕಿತ್ಸೆಗೆ ಶ್ರಮಿಸುತ್ತಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ. ಎನ್‌ಸಿಪಿ ಪಕ್ಷವು ದುರಂತದ ಸಂಪೂರ್ಣ ತನಿಖೆಗೆ ಒತ್ತಾಯಿಸಿದೆ.

ಓಡಿಸ್ಸಾ ರೈಲು ದುರಂತಕ್ಕೆ ದೇಶ-ವಿದೇಶದ ನಾಯಕರು ಸಂತಾಪ ಸೂಚಿಸಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡು, ತೈವಾನ್ ಪ್ರಧಾನಿ ತ್ಸೈ ಇಂಗ್-ವೆನ್, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿದೇಶಾಂಗ ಸಚಿವರು ರೈಲು ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಡಿಸ್ಸಾ ಭೀಕರ ರೈಲು ದುರಂತಕ್ಕೆ 233 ಮಂದಿ ಸಾವು, 900ಕ್ಕೂ ಅಧಿಕ ಮಂದಿಗೆ ಗಾಯ: ಮೂರು ರೈಲುಗಳು ಹಳಿತಪ್ಪಿದ್ದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...