Homeಮುಖಪುಟಟ್ರಾನ್ಸ್‌ಜೆಂಡರ್‌‌‌ಗಳು ವಿಶೇಷ ಮೀಸಲಾತಿಗೆ ಅರ್ಹರಾಗಿದ್ದಾರೆ: ಮದ್ರಾಸ್ ಹೈಕೋರ್ಟ್

ಟ್ರಾನ್ಸ್‌ಜೆಂಡರ್‌‌‌ಗಳು ವಿಶೇಷ ಮೀಸಲಾತಿಗೆ ಅರ್ಹರಾಗಿದ್ದಾರೆ: ಮದ್ರಾಸ್ ಹೈಕೋರ್ಟ್

- Advertisement -
- Advertisement -

ಪೋಸ್ಟ್‌ ಬೇಸಿಕ್‌(ನರ್ಸಿಂಗ್‌) ಮತ್ತು ಮನೋವೈದ್ಯಶಾಸ್ತ್ರದ ನರ್ಸಿಂಗ್ ಕೋರ್ಸ್‌ಗಳ ಪೋಸ್ಟ್‌ ಬೇಸಿಕ್ ಡಿಪ್ಲೊಮಾಗೆ ಟ್ರಾನ್ಸ್‌‌ಜೆಂಡರ್‌ಗಳು ಯಾವುದೆ ಸಂಕೋಚವಿಲ್ಲದೆ ‘ತೃತೀಯಲಿಂಗ ವಿಶೇಷ ಮೀಸಲಾತಿ’ಗೆ ಅರ್ಹರಾಗಿರುತ್ತಾರೆ ಎಂದು ಮದ್ರಾಸ್ ಹೈಕೋರ್ಟ್‌‌ ಹೇಳಿದೆ.

ಅರ್ಜಿದಾರರಾದ ಎಸ್. ತಮಿಳ್‌ ಸೆಲ್ವಿ ಅವರನ್ನು ತೃತೀಯಲಿಂಗಿ/ ಟ್ರಾನ್ಸ್‌ಜೆಂಡರ್‌‌ ಎಂದು ಪರಿಗಣಿಸಿ ಮತ್ತು ಅದರ ಪ್ರಕಾರ ಅವರನ್ನು ವಿಶೇಷ ವರ್ಗಕ್ಕೆ ಸೇರಿಸಬೇಕು ಎಂದು ನ್ಯಾಯಾಲಯವು ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಚೆನ್ನೈನ ವೈದ್ಯಕೀಯ ಶಿಕ್ಷಣ ನಿರ್ದೇಶಕರು (DME), ಮತ್ತು ಆಯ್ಕೆ ಸಮಿತಿ ಕಾರ್ಯದರ್ಶಿ, DME ಅವರಿಗೆ ಆದೇಶಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2022-23ರ ಶೈಕ್ಷಣಿಕ ವರ್ಷದ ಕೋರ್ಸ್‌ಗೆ ಪ್ರವೇಶಕ್ಕಾಗಿ ಮೆರಿಟ್ ಪಟ್ಟಿಯನ್ನು ಆಯ್ಕೆ ಸಮಿತಿಯ ಕಾರ್ಯದರ್ಶಿಯು ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಮಾತ್ರ ನೀಡಿತ್ತು. ಕೋರ್ಟ್ ಆದೇಶವು ವಿಶೇಷವರ್ಗವಾಗಿ ತೃತೀಯ ಲಿಂಗವನ್ನು ಸೇರಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯವನ್ನು ತಪ್ಪುದಾರಿಗೆಳೆಯುತ್ತಿದೆ: ಸಿದ್ದರಾಮಯ್ಯ

ತಮಿಳ್‌ ಸೆಲ್ವಿ ಅವರನ್ನು ಹೊರತುಪಡಿಸಿ, ಯಾವುದೇ ಇತರ ಟ್ರಾನ್ಸ್‌‌ಜೆಂಡರ್‌‌ ಅಭ್ಯರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಿದರೆ, ಕೇವಲ ಟ್ರಾನ್ಸ್‌ಜೆಂಡರ್‌ ಅಭ್ಯರ್ಥಿಗಳನ್ನು ಒಳಗೊಂಡಿರುವ ಮತ್ತು ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳ ನಡುವಿನ ಇಂಟರ್‌ ಮೆರಿಟ್ ಸೆ ಆಧರಿಸಿ ಪ್ರತ್ಯೇಕ ವರ್ಗದ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ನ್ಯಾಯಮೂರ್ತಿ ಆರ್ ಸುರೇಶ್ ಕುಮಾರ್ ಹೇಳಿದ್ದಾರೆ.

2022-2023ರ ಶೈಕ್ಷಣಿಕ ವರ್ಷದ ಪೋಸ್ಟ್ ಬೇಸಿಕ್ (ನರ್ಸಿಂಗ್) ಕೋರ್ಸ್ ಮತ್ತು ಪೋಸ್ಟ್ ಬೇಸಿಕ್ ಡಿಪ್ಲೊಮಾ ಇನ್ ಸೈಕಿಯಾಟ್ರಿ ನರ್ಸಿಂಗ್ ಕೋರ್ಸ್‌ಗೆ ನೀಡಲಾದ ಪ್ರಾಸ್ಪೆಕ್ಟಸ್ ಅನ್ನು ವಿಶೇಷ ವರ್ಗದ ಅಡಿಯಲ್ಲಿ ಟ್ರಾನ್ಸ್‌ಜೆಂಡರ್‌ಗಳನ್ನು ವರ್ಗೀಕರಿಸದಿರುವುದು ಕಾನೂನುಬಾಹಿರ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ತಮಿಳ್‌ ಸೆಲ್ವಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

2022-2023ರ ಶೈಕ್ಷಣಿಕ ವರ್ಷದ ಪೋಸ್ಟ್ ಬೇಸಿಕ್ B.Sc.(ನರ್ಸಿಂಗ್) ಕೋರ್ಸ್‌ಗೆ ಟ್ರಾನ್ಸ್‌ಜೆಂಡರ್ ಎಂಬ ವಿಶೇಷ ವರ್ಗದ ಅಡಿಯಲ್ಲಿ ತನ್ನನ್ನು ಸೇರಿಸಿಕೊಳ್ಳಲು ಆಯ್ಕೆ ಸಮಿತಿಯ ಕಾರ್ಯದರ್ಶಿಗೆ ನಿರ್ದೇಶನ ನೀಡುವಂತೆ ತಮಿಳ್‌ ಸೆಲ್ವಿ ಕೋರಿದ್ದರು.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಪಹಾರಿ ಭಾಷಾ ಸಮುದಾಯಕ್ಕೆ ಮೀಸಲಾತಿ ಭರವಸೆ ನೀಡಿದ ಅಮಿತ್ ಶಾ

ಈ ಕೋರ್ಸ್‌ಗಳಿಗೆ ಕೋಮು ಮೀಸಲಾತಿಯನ್ನು ಒದಗಿಸಲಾಗಿದ್ದರೂ, ತೃತೀಯಲಿಂಗಿ/ಟ್ರಾನ್ಸ್‌‌ಜೆಂಡರ್‌ಗಳಿಗೆ ಯಾವುದೇ ಪ್ರತ್ಯೇಕ ಮೀಸಲಾತಿಗಳನ್ನು ಒದಗಿಸಲಾಗಿಲ್ಲ. ಹೀಗಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ತಮಿಳ್ ಸೆಲ್ವಿ ಅವರ ವಕೀಲೆ ರೇಶ್ಮಿ ಕ್ರಿಸ್ಟಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...