Homeಮುಖಪುಟರೈತರ ಮೇಲೆ ಕಾರು ಹರಿಸುತ್ತಿರುವ ಎರಡು ವಿಡಿಯೋ ವೈರಲ್: ಜಾಲತಾಣಗಳಲ್ಲಿ ಭುಗಿಲೆದ್ದ ಆಕ್ರೋಶ

ರೈತರ ಮೇಲೆ ಕಾರು ಹರಿಸುತ್ತಿರುವ ಎರಡು ವಿಡಿಯೋ ವೈರಲ್: ಜಾಲತಾಣಗಳಲ್ಲಿ ಭುಗಿಲೆದ್ದ ಆಕ್ರೋಶ

- Advertisement -
- Advertisement -

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕೇಂದ್ರ ಸಚಿವನ ಮಗ ರೈತರ ಮೇಲೆ ಕಾರು ಹರಿಸಿ ನಾಲ್ವರನ್ನು ಕೊಂದ ಘಟನೆ ದೇಶಾದ್ಯಂತ ಆಕ್ರೋಶ ಹುಟ್ಟಿಸಿದೆ. ಅದು ವಿಡಿಯೋದಲ್ಲಿ ದಾಖಲಾಗಿದೆ ಎಂದು ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ..

ವಿಡಿಯೋದಲ್ಲಿ ಘೋಷಣೆ ಕೂಗುತ್ತಾ ಹೊರಟಿದ್ದ ರೈತರ ಗುಂಪಿನ ಮೇಲೆ ಹಿಂದಿನಿಂದ ಎಸ್‌ಯುವಿಯೊಂದು ಉದ್ದೇಶಪೂರ್ವಕವಾಗಿ ನುಗ್ಗುತ್ತಿದೆ.  ರೈತರು ಚಲ್ಲಾಪಿಲ್ಲಿಯಾಗುತ್ತಾರೆ. ಕೆಲ ರೈತರ ಮೇಲೆ ನೇರವಾಗಿ ಕಾರು ಹರಿದಿದೆ. ನಾನುಗೌರಿ.ಕಾಂ ಈ ವಿಡಿಯೋವನ್ನು ಪರಿಶೀಲಿಸಲು ಯತ್ನಿಸುತ್ತಿದೆ..

ಮತ್ತೊಂದು ವೈರಲ್ ವಿಡಿಯೋದಲ್ಲಿ ರೈತರ ಮೇಲೆ ಹರಿಸಿದ ನಂತರ ಅದೇ ಕಾರಿನಿಂದ ಇಬ್ಬರು ಇಳಿದು ಓಡಿ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಕಾರಿನ ಚಕ್ರಕ್ಕೆ ರೈತನೊಬ್ಬ ಸಿಕ್ಕಿ ನರಳುತ್ತಿರುವ ಹೃದಯ ವಿದ್ರಾವಕ ದೃಶ್ಯ ಕಂಡುಬಂದಿದೆ. ಕಾರು ಯಾರು ಚಲಾಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ನಿನ್ನೆ ರೈತರು ಆರೋಪಿಸಿದಂತೆ ಕಾರಿನ ಬಣ್ಣಕ್ಕೂ ಇಂದು ವೈರಲ್ ಆಗಿರುವ ಕಾರಿನ ಬಣ್ಣಕ್ಕೂ ಹೊಂದಾಣಿಕೆಯಾಗಿದೆ. ಅದೇ ರೀತಿ ಹಿಂದಿನಿಂದ ಬಂದು ಗುದ್ದಿದ್ದು ಸಹ ದಾಖಲಾಗಿದೆ. ವಿಡಿಯೋದಲ್ಲಿ ದಾಖಲಾಗಿರುವ ರೈತರೇ ಮೃತಪಟ್ಟಿರುವುದರಿಂದ ಈ ವಿಡಿಯೋಗೆ ಸಾಕಷ್ಟು ಮಾನ್ಯತೆ ಸಿಕ್ಕಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿ “ನರೇಂದ್ರ ಮೋದಿಯವರೆ ಈ ವಿಡಿಯೋ ನೋಡಿದ್ದೀರಾ? ನಿಮ್ಮ ಸರ್ಕಾರ ನನ್ನನ್ನು ಯಾವುದೇ ಎಫ್‌ಐಆರ್ ಅಥವಾ ಯಾವುದೇ ಆದೇಶವಿಲ್ಲದೆ ಕಳೆದ 28 ಗಂಟೆಗಳಿಂದ ಬಂಧನದಲ್ಲಿಟ್ಟಿದೆ. ಆದರೆ ಅನ್ನದಾತರ ಮೇಲೆ ಕಾರು ಹರಿಸಿದ ಈ ವ್ಯಕ್ತಿಯನ್ನುಇದುವರೆಗೂ ಬಂಧಿಸಿಲ್ಲ ಏಕೆ” ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಎರಡು ವಿಡಿಯೋಗಳು ವೈರಲ್ ಆಗಿದ್ದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಲಾಗಿದೆ. ಮುಖ್ಯವಾಹಿನಿ ಮಾಧ್ಯಮಗಳು ಏಕೆ ಪ್ರಸಾರ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಭಾನುವಾರ ಲಖಿಂಪುರ್‌ ಖೇರಿಯಲ್ಲಿ ರೈತರ ಮೇಲಿನ ಹತ್ಯಾಕಾಂಡದಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಸಚಿವ ಪಟ್ಟಿ ಮಾಡಿದ್ದವರಲ್ಲಿ ಒಬ್ಬ ಪತ್ರಕರ್ತ ಎಂದು ಮೃತನ ಕುಟುಂಬ ಸ್ಪಷ್ಟಪಡಿಸಿದೆ. ಮೃತ ಪತ್ರಕರ್ತನನ್ನು ಬಿಜೆಪಿ ಕಾರ್ಯಕರ್ತ ಎಂದು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಮೃತನ ಕುಟುಂಬ ಆರೋಪಿಸಿದೆ.

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಭಾನುವಾರ ರೈತರ ಪ್ರತಿಭಟನೆಯನ್ನು ವರದಿ ಮಾಡಲು ಮುಂಜಾನೆಯೇ ಮನೆಯಿಂದ ಹೊರಟಿದ್ದ ರಮಣ್ ಕಶ್ಯಪ್ ನಾಪತ್ತೆಯಾಗಿದ್ದರು. ರಾತ್ರಿ 10 ರ ಸುಮಾರಿಗೆ ಲಖಿಂಪುರ್ ಖೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರದಿಂದ ಅವರು ಮೃತಪಟ್ಟಿರುವ ಸುದ್ದಿ ಮನೆಯವರಿಗೆ ತಲುಪಿತ್ತು.

ಮೃತ ರಮಣ್ ಕಶ್ಯಪ್ ಅವರ ಕುಟುಂಬವು, “ಕಶ್ಯಪ್ ವರದಿಗಾರರಾಗಿ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಅವರು ಬಿಜೆಪಿ ಕಾರ್ಯಕರ್ತರಾಗಿರಲಿಲ್ಲ. ನನ್ನ ಮಗ ಪತ್ರಕರ್ತರಾಗಿದ್ದರು. ಮಿಶ್ರಾ ಅವರ ಮಗ ಆಶೀಶ್ ಮತ್ತು ಅವರ ಸಹಾಯಕರನ್ನು ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಲಖಿಂಪುರ್‌ ಖೇರಿ: ರೈತರ ಬೇಡಿಕೆಗಳಿಗೆ ಮಣಿದ ಯುಪಿ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...