ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಕೋವಿಡ್‌ಕೇರ್ ಸೆಂಟರ್‌ನಲ್ಲಿ ಸೋಂಕಿತರು ಯಾವುದೇ ಮೂಲಸೌಕರ್ಯ  ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಒಂದು ವಾರ ಕಳೆದರು ಕೇಂದ್ರವನ್ನು ಸ್ವಚ್ಛಗೊಳಿಸುವುದಿಲ್ಲ ಸ್ವಾನಿಟೈಜ್ ಮಾಡುತ್ತಿಲ್ಲ ಎಂದು ಆರೋಪಿಸಿರುವ ವಿಡಿಯೋವೊಂದು ವೈರಲ್ ಆಗಿದೆ.

ಕೋವಿಡ್‌ಕೇರ್ ಕೇಂದ್ರದಲ್ಲಿ 40 ಮಂದಿ ರೋಗಲಕ್ಷಣವಿಲ್ಲದ ಕೊರೊನ ಸೋಂಕಿತರು ಇದ್ದಾರೆ. ಇಷ್ಟು ಜನರಿಗೆ ಒಂದೇ ಶೌಚಾಲಯ ಇದೆ. ಒಂದೇ ಒಂದು ಸ್ನಾನ ಗೃಹ ಇದೆ. ಇವುಗಳು ಕೂಡ ಸ್ವಚ್ಛವಾಗಿಲ್ಲ. ನಮ್ಮನ್ನು ಇಲ್ಲಿಗೆ ತಂದಿಟ್ಟಿದ್ದು ಯಾರೂ ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ದೂರಿದ್ದಾರೆ.

ಶೌಚಾಲಯ ಒಂದೇ ಇದ್ದು ತುಂಬಾ ಸಮಸ್ಯೆಯಾಗುತ್ತಿದೆ. 40 ಜನರು ಒಂದೇ ಕಡೆ ಶೌಚಕ್ಕೆ ಹೋಗುವುದೆಂದರೆ ಎಂತಹ ಸಂಕಟದ ಸನ್ನಿವೇಶ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮುಂಜಾನೆಯೇ ಎದ್ದು ಸರದಿ ಸಾಲಿನಲ್ಲಿ ನಿಲ್ಲಬೇಕು. ಅದನ್ನು ತಡೆದುಹಿಡಿಯುವುದು ಕಷ್ಟದ, ನೋವಿನ ಕೆಲಸ. ಉಸ್ತುವಾರಿ ವಹಿಸಿರುವವರು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ತುಮಕೂರಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಮೂಲಸೌಕರ್ಯ ಕೊರತೆ ಇದೆ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ #NaanuGauri #COVID19

Posted by Naanu Gauri on Friday, August 14, 2020

ಕೇಂದ್ರದ ಉಸ್ತುವಾರಿ ವಹಿಸಿರುವವರಿಗೆ ಸಮಸ್ಯೆಗಳನ್ನು ಹೇಳಿದರೆ ಕೇಳುವುದಿಲ್ಲ. ಎಲ್ಲದಕ್ಕೂ ಪೊಲೀಸರಿಗೆ ಹೇಳುತ್ತೇವೆ ಎಂದು ಭಯ ಹುಟ್ಟಿಸುತ್ತಾರೆ. ನಾವು ಬಂದು ಏಳು ದಿನವಾಯ್ತು. ಐಸೋಲೇನ್ ಅವಧಿ ಏಳು ದಿನ ನಿಗದಿ ಮಾಡಿತ್ತು. ಆದರೂ ನಮ್ಮನ್ನು ಬಿಡುಗಡೆಗೊಳಿಸುತ್ತಿಲ್ಲ. ಈಗ ಹತ್ತು ದಿನ ಇರಬೇಕು ಎಂದು ಹೇಳುತ್ತಿದ್ದಾರೆ. ಯಾವುದೇ ಸೌಲಭ್ಯಗಳು ಇಲ್ಲ. ಇಂತಹ ಕೇಂದ್ರದಲ್ಲಿ ಇರುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲೂ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಇದೆಯೆಂಬ ಬಗ್ಗೆ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಅದೂ ಕೂಡ ವೈರಲ್ ಆಗಿತ್ತು. ಈಗ ಕೋವಿಡ್ ಕೇರ್ ಕೇಂದ್ರದಲ್ಲೂ ಅದೇ ಪರಿಸ್ಥಿತಿ ಇದ್ದು ಸಮಸ್ಯೆಗಳಿಗೆ ಕೂಡಲೇ ಅಧಿಕಾರಿಗಳು ಸ್ಪಂಸಿದಬೇಕು ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

ಕರ್ನಾಕಟ ರಾಷ್ಟ್ರ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಜೇಂದ್ರ ಕುಮಾರ್ ಗೌಡ ಹೇಳಿಕೆ ನೀಡಿ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಮಾಡದೆ ಇದ್ದ ಮೇಲೆ ಕೊರೊನ ಸೋಂಕಿತರನ್ನು ಸೇರಿಸಿ ಹಿಂಸೆ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಸೂಕ್ತ ಕ್ರಮ ಕೈಗೊಂಡು ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಮನೆಯಲ್ಲೇ ಚಿಕಿತ್ಸೆ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.


ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ?


 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts