ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ ಜೊತೆಗಿನ ಮೈತ್ರಿ ಆಹ್ವಾನವನ್ನು ರಾಷ್ಟ್ರೀಯ ಲೊಕ ದಳದ (RLD) ಮುಖ್ಯಸ್ಥ ಜಯಂತ್ ಚೌಧರಿ ತಿರಸ್ಕರಿಸಿದ್ದಾರೆ. ಮೈತ್ರಿಗೆ ನನ್ನನ್ನು ಆಹ್ವಾನಿಸುವ ಬದಲು ನಿಮ್ಮಿಂದ ಛಿದ್ರಗೊಂಡ ಹುತಾತ್ಮ 700 ರೈತರ ಕುಟುಂಬಗಳನ್ನು ಆಹ್ವಾನಿಸಿಯೆಂದು ಅವರ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ನವೆಂಬರ್‌ನಲ್ಲೆ ಸಮಾಜವಾದಿ ಪಕ್ಷದ ಜೊತೆ RLD ಮೈತ್ರಿ ಮಾಡಿಕೊಂಡಿದೆ. ಫೆಬ್ರವರಿ 10 ರಿಂದ ನಡೆಯಲ್ಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಸ್‌ಪಿ ಜೊತೆಗೂಡಿ ಸ್ಪರ್ಧಿಸುವುದ್ದಾಗಿ RLD ಮುಖ್ಯಸ್ಥ ಜಯಂತ್ ಚೌಧರಿ ಘೊಷಿಸಿದ್ದರು. RLD ಮತ್ತು ಸಮಾಜವಾದಿ ಪಕ್ಷದ ನಡುವೆ ಟಿಕೆಟ್ ಹಂಚಿಕೆ ಕಾರಣ ಭಿನಾಭಿಪ್ರಾಯಗಳು ಕಂಡಬಂದ ಕಾರಣ ಬಿಜೆಪಿಯು ಜಯಂತ್ ಚೌಧರಿಯವರಿಗೆ ಮೈತ್ರಿಗೆ ಆಹ್ವಾನಿಸಿತ್ತು.
न्योता मुझे नहीं, उन +700 किसान परिवारों को दो जिनके घर आपने उजाड़ दिए!!
— Jayant Singh (@jayantrld) January 26, 2022
ಬಿಜೆಪಿ ಸಂಸದ ಪರ್ವೇಶ್ ವರ್ಮಾ ‘ನಮ್ಮ ಪಕ್ಷದ ಬಾಗಿಲು ಚೌಧರಿಯವರಿಗಾಗಿ ಯಾವಗಲೂ ತೆರೆದಿದ್ದೆ’ ಎಂದು ಹೇಳಿದ್ದರು. ನಂತರ “ನಾವು ಜಯಂತ್ ಚೌಧರಿಯವರನ್ನು ಬಿಜೆಪಿಗೆ ಸ್ವಾಗತಿಸಲು ತಯಾರಿದ್ದೆವು ಆದರೆ ಅವರು ತಪ್ಪು ದಾರಿಯನ್ನು ಆಯ್ಕೆ ಮಾಡಿದ್ದಾರೆ” ಹಾಗೆ “ಜಾಟ್ ಸಮುದಾಯದ ಜನರು ಅವರೊಂದಿಗೆ ಮಾತನಾಡಬೇಕು” ಎಂದು ಪರ್ವೇಶ್ ವರ್ಮಾ ಹೇಳಿಕೆ ನೀಡಿರುವದ್ದಾಗಿ ANI ವರದಿ ಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ RLD ಮುಖ್ಯಸ್ಥ ಜಯಂತ್ ಚೌಧರಿ ತಪ್ಪು ದಾರಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಜಯಂತ್ ಚೌಧರಿ “ಮೈತ್ರಿಗೆ ನನ್ನನ್ನು ಆಹ್ವಾನಿಸುವ ಬದಲು ನಿಮ್ಮಿಂದ ಛಿದ್ರಗೊಂಡ ಹುತಾತ್ಮ 700 ರೈತರ ಕುಟುಂಬಗಳನ್ನು ಆಹ್ವಾನಿಸಿ” ಎಂದು ಕಿಡಿಕಾರಿದ್ದಾರೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಕೃಷಿ ಕಾಯ್ದೆಗಳ ವಿರುದ್ಧ ಮತ್ತು ಎಂಎಸ್‌ಪಿ ಜಾರಿಗಾಗಿ ದಿಟ್ಟ ಹೋರಾಟ ನಡೆಸಿದ ರೈತ ಹೋರಾಟವನ್ನು ಉಲ್ಲೇಖಿಸಿರುವ ಅವರು ಈ ವೇಳೆ ಸಾವನಪ್ಪಿದ ರೈತ ಕುಟುಂಬಗಳ ಆಕ್ರೋಶವನ್ನು ನೆನಪಿಸಿದ್ದಾರೆ.
ರೈತ ಹೋರಾಟದ ಪರಿಣಾಮವಾಗಿ ಜಾಟ್ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಭಯದಲ್ಲಿರುವ ಬಿಜೆಪಿ RLDಯೊಡನೆ ಮೈತ್ರಿ ಮಾಡಿ ಜಾಟ್ ಸಮುದಾಯದ ಮತಗಳನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ ಆರ್‌ಎಲ್‌ಡಿ ಅದಕ್ಕೆ ಅವಕಾಶ ನೀಡುತ್ತಿಲ್ಲ. ಅವರು ಸಮಾಜವಾದಿ ಪಕ್ಷದ ಜೊತೆಗೆ ಮೈತ್ರಿ ಮುಂದುವರೆಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ರವರು ಹಲವಾರು ಪ್ರಾದೇಶಕ ಪಕ್ಷಗಳೊಡನೆ ಮೈತ್ರಿ ಮಾಡಿಕೊಳ್ಳುವುದಾಗಿ ಕೆಲವು ತಿಂಗಳ ಹಿಂದೆಯೇ ಹೇಳಿದ್ದರು. ಇದರಲ್ಲಿ ಓಂ ಪ್ರಕಾಶ್ ರಾಜಬಾರ್ ನಾಯಕತ್ವದ ಭಾರತೀಯ ಸಮಾಜ ಪಾರ್ಟಿ, ಜಯಂತ್ ಚೌಧರಿಯವರ RLD, ಮೋಹನ್ ದಳ ಮತ್ತು ಜನವಾದಿ ಪಾರ್ಟಿಗಳು ಸೇರಿವೆ.