HomeಮುಖಪುಟUAPA ಪ್ರಕರಣದ ಆರೋಪಿ ಅಲನ್ ಶುಹೈಬ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

UAPA ಪ್ರಕರಣದ ಆರೋಪಿ ಅಲನ್ ಶುಹೈಬ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

- Advertisement -
- Advertisement -

2019ರ ಪಂತೀರಂಕಾವಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಯುಎಪಿಎಯಡಿ ಬಂಧಿತ ಆರೋಪಿ ಅಲನ್ ಶುಹೈಬ್ ಕೊಚ್ಚಿಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೊಂದು ಆತ್ಮಹತ್ಯೆಯ ಯತ್ನ ಎಂದು ಪೊಲೀಸರು ಶಂಕಿಸಿದ್ದು, ಈತ ಗೆಳೆಯರಿಗೆ ವಾಟ್ಸಾಪ್‌ ಮೂಲಕ ಕಳುಹಿಸಿದ ಸಂದೇಶದ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

2019ರಲ್ಲಿ ಮಾವೋವಾದಿ ಕಾರ್ಯಕರ್ತರೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಆರೋಪಿಸಿ ತಾಹಾ ಫಸಲ್ ಮತ್ತು ಅಲನ್ ಅವರನ್ನು ಬಂಧಿಸಲಾಗಿತ್ತು.

ಪೋಲೀಸರ ಪ್ರಕಾರ, ಅಲನ್ ಕಾಕ್ಕನಾಡ್‌ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದಕ್ಕೂ ಮೊದಲು ಅಲನ್‌ ವ್ಯವಸ್ಥೆ ಬಗ್ಗೆ ದುಃಖ ವ್ಯಕ್ತಪಡಿಸುವ ರಹಸ್ಯ ಸಂದೇಶವನ್ನು  ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ ಎಂದು ವರದಿಯಾಗಿದೆ.

2019ರಲ್ಲಿ ಅಲನ್ ಅವರ ಬಂಧನವು ಅವರ ಬಳಿಯಿರುವ ಸಾಹಿತ್ಯ ಮತ್ತು ಕರಪತ್ರಗಳನ್ನು ಆಧರಿಸಿತ್ತು. ನಂತರ ಅಲನ್‌ ಮತ್ತು ತಾಹಾಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಜಾಮೀನು ನೀಡಿತ್ತು. ಹಿಂಸಾಚಾರ ಮತ್ತು ಪ್ರಚೋದನೆಯ ಬಹಿರಂಗ ಕೃತ್ಯಗಳನ್ನು ಸಾಬೀತುಪಡಿಸದ ಹೊರತು ಕೇವಲ ಪುಸ್ತಕಗಳು, ಘೋಷಣೆಗಳು ಮತ್ತು ಡೈರಿ ನಮೂದುಗಳನ್ನು ಯುಎಪಿಎ ಆರೋಪಗಳಿಗೆ ಸಾಕ್ಷಿಯಾಗಿ ಪರಿಗಣಿಸಬಾರದು ಎಂದು ಪ್ರತಿಪಾದಿಸಿತ್ತು.

ಅಲನ್ ಅವರು ಬಂಧಿಸಲ್ಪಟ್ಟಾಗ ಕಾನೂನು ವಿದ್ಯಾರ್ಥಿಯಾಗಿದ್ದರು ಮತ್ತು ಜಾಮೀನಿನ ಮೇಲೆ ಹೊರಬಂದಿದ್ದರು ಬಳಿಕ ಅವರು ಕೆಲವು ರಾಜಕೀಯ ಗುಂಪುಗಳು ನನ್ನನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನು ಓದಿ: ಸಾಹಿತಿಗಳಿಗೆ ಬೆದರಿಕೆ ಪತ್ರ: ಸಾವರ್ಕರ್ ಕುರಿತ ಪುಸ್ತಕ ಓದುತ್ತಿದ್ದ ಆರೋಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...