Homeಮುಖಪುಟಸಾಹಿತಿಗಳಿಗೆ ಬೆದರಿಕೆ ಪತ್ರ: ಸಾವರ್ಕರ್ ಕುರಿತ ಪುಸ್ತಕ ಓದುತ್ತಿದ್ದ ಆರೋಪಿ

ಸಾಹಿತಿಗಳಿಗೆ ಬೆದರಿಕೆ ಪತ್ರ: ಸಾವರ್ಕರ್ ಕುರಿತ ಪುಸ್ತಕ ಓದುತ್ತಿದ್ದ ಆರೋಪಿ

- Advertisement -
- Advertisement -

61 ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದಕ್ಕಾಗಿ ಬೆಂಗಳೂರು ಪೊಲೀಸರಿಂದ ಬಂಧಿಸಲ್ಪಟ್ಟಿರುವ ಶಿವಾಜಿ ರಾವ್ ಜಾಧವ್ ವಿಡಿ ಸಾವರ್ಕರ್ ಬಗೆಗಿನ ಪುಸ್ತಕ ಸೇರಿದಂತೆ ಬಲಪಂಥೀಯ ರಾಷ್ಟ್ರೀಯವಾದದ ಬಗ್ಗೆ ಓದುತ್ತಿದ್ದ ಎನ್ನವುದು ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿರುವ ಬಗ್ಗೆ ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.

ಸಹಿಷ್ಣ ಹಿಂದೂ ಎಂಬ ಹೆಸರಿನಲ್ಲಿ ಅನಾಮಧೇಯ ಪತ್ರಗಳನ್ನು ಬರೆಯುತ್ತಿದ್ದ ಜಾಧವ್‌ನ ನಿಕಟ ಜಾಲವನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಪೊಲೀಸರು ಆತನ ಸಂಪರ್ಕದಲ್ಲಿದ್ದ ಜನರ ಬಗ್ಗೆ ತನಿಖೆ ಮಾಡುತ್ತಿದ್ದು ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ.

ಜಾಧವ್ 8ನೇ ತರಗತಿಗೆ ಶಾಲೆಯನ್ನು ಬಿಟ್ಟಿದ್ದು, ದಾವಣಗೆರೆಯಲ್ಲಿ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಮುದ್ರಣಾಲಯದಲ್ಲಿ ಮುದ್ರಿಸಲ್ಪಟ್ಟ ಸಾಹಿತ್ಯವನ್ನು ಓದುವ ಮೂಲಕ ಬಲಪಂಥೀಯ ಸಿದ್ಧಾಂತದಿಂದ ಪ್ರಭಾವಿತನಾಗಿದ್ದ.

ಸೆ.30ರಂದು ಜಾಧವ್‌ನನ್ನು ಬಂಧಿಸಿದ ನಂತರ ಪೊಲೀಸರು ದಾವಣಗೆರೆಯ ಆತನ ನಿವಾಸದಲ್ಲಿ ಶೋಧ ನಡೆಸಿದ್ದು, ಕರಪತ್ರಗಳು ಮತ್ತು ಆತ ಓದುತ್ತಿದ್ದ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ಆತ ಯಾರ ಜೊತೆ ಸಂಪರ್ಕ ಹೊಂದಿದ್ದ? ಏನು ಮಾತನಾಡುತ್ತಿದ್ದ ಬಗ್ಗೆ ಪೊಲೀಸರು ತನಿಖೆ ನಡೆಸಲು ಮೊಬೈಲ್‌ನ್ನು ವಶಪಡಿಸಿಕೊಂಡಿದ್ದರು.

ಈ ವೇಳೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 13ನೇ ಆರೋಪಿಯಾಗಿರುವ ಸುಜಿತ್ ಕುಮಾರ್ ನಡುವೆ ಈತನಿಗೆ ಸಂಪರ್ಕ ಇರುವುದು ಬಯಲಾಗಿದೆ. ಸುಜಿತ್ ಸನಾತನ ಸಂಸ್ಥೆ ಮತ್ತು ಇತರ ಹಿಂದುತ್ವದ ಗುಂಪುಗಳಿಗೆ ಹಿಂದುತ್ವದ ಬಗ್ಗೆ ಒಲವು ಇರುವ ಮತ್ತು ಅಪರಾಧಗಳನ್ನು ಮಾಡುವ ಸಾಮರ್ಥ್ಯವಿರುವ ಯುವಕರನ್ನು ಗುರುತಿಸುತ್ತಿದ್ದ. ಬಳಿಕ  ಅವರನ್ನು ಬ್ರೈನ್‌ ವಾಶ್‌ ಮಾಡಿ ಗ್ಯಾಂಗ್‌ಗೆ ಸೇರಿಸಿಕೊಳ್ಳುತ್ತಿದ್ದ.

ಸುಜಿತ್ ಕುಮಾರ್ ಜಾದವ್‌ಗೆ ಪರಿಚಿತನಾಗಿದ್ದ. ಜಾದವ್‌ನನ್ನು ಸುಜಿತ್‌ ಬೇರೆ ಬೇರೆ ಸಂದರ್ಭಗಳಲ್ಲಿ ಭೇಟಿಯಾಗಿದ್ದ. ಸುಜಿತ್‌ಗೆ ಭೇಟಿಯಾಗುವ ಮುನ್ನ ಜಾದವ್ ಎರಡು ಮೂರು ಬೆದರಿಕೆ ಪತ್ರಗಳನ್ನು ಬರೆದಿದ್ದ. ಆದರೆ ಅದು ಕಠೋರವಾಗಿರಲಿಲ್ಲ. ಆದರೆ ಸುಜಿತ್‌ಗೆ ಭೇಟಿ ಬಳಿಕ ಜಾಧವ್ ಬರೆದ ಪತ್ರಗಳು ಕಠೋರವಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಧವ್ ದಾವಣಗೆರೆಯ ತನ್ನ ಮನೆಯ ಸಮೀಪದಲ್ಲಿರುವ ಲೈಬ್ರರಿಯಲ್ಲಿ ಎಲ್ಲಾ ದಿನಪತ್ರಿಕೆಗಳನ್ನು ಓದುತ್ತಿದ್ದ. ನಂತರ ಅವನು ಹಿಂದುತ್ವವನ್ನು ವಿರೋಧಿಸುವ ಬರಹಗಾರರು ಮತ್ತು ಬುದ್ಧಿಜೀವಿಗಳ ಪಟ್ಟಿಯನ್ನು ಮಾಡಿದ್ದ. ಬಳಿಕ ಅವರು ಬರೆದ ಪುಸ್ತಕಗಳನ್ನು ಸಂಗ್ರಹಿಸಿ ಪುಸ್ತಕದಿಂದ ಅವರ ವಿಳಾಸವನ್ನು ಸಂಗ್ರಹಿಸಿದ್ದಾನೆ. ಪತ್ರ ಬರೆದ ಬಳಿಕ ಪತ್ರಿಕೆಯಲ್ಲಿ ವರದಿಯಾಗಿದೆಯಾ ಎಂದು ಕೂಡ ಪರಿಶೀಲಿಸಿ ತನ್ನ ಬೆದರಿಕೆ ಪತ್ರಗಳ ಬಗ್ಗೆ ಬರೆದ ಕಟ್ಟಿಂಗ್‌ಗಳನ್ನು ತೆಗೆದಿಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಜಾಧವ್ ದಾವಣಗೆರೆಯ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಯಾಗಿದ್ದಾನೆ. ಶಿವಮೊಗ್ಗದಲ್ಲಿ ಹತ್ಯೆಯಾದ ಭಜರಂಗದಳದ ಕಾರ್ಯಕರ್ತ ಹರ್ಷನ ಬಗ್ಗೆ ಹಲವು ಪ್ರತಿಭಟನೆ ಸಭೆ ಆಯೋಜಿಸಿದ್ದ. ಕರ್ನಾಟಕದಲ್ಲಿ ಹಿಜಾಬ್ ಮತ್ತು ಹಲಾಲ್ ವಿವಾದದ ವೇಳೆ ಮಾತನಾಡಿದ್ದ. ಈ ವೇಳೆ ದಾವಣಗೆರೆ ಪೊಲೀಸರು ಜಾಧವ್ ವಿರುದ್ಧ ಐಪಿಸಿ ಸೆಕ್ಷನ್ 107ರ ಅಡಿಯಲ್ಲಿ ಶಾಂತಿ ಭಂಗ ಅಥವಾ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಸಿದ್ದರು.

ಏ.2022ರಿಂದ ಹಿಂದುತ್ವದ ವಿರುದ್ಧ ಮಾತನಾಡಿದ ಸುಮಾರು 6 ಪ್ರಗತಿಪರ ಬರಹಗಾರರು ಮತ್ತು ಚಿಂತಕರಿಗೆ ಜಾಧವ್ ನಿಯಮಿತವಾಗಿ ಪತ್ರವನ್ನು ಬರೆದಿದ್ದಾನೆ. ಖ್ಯಾತ ಸಾಹಿತಿಗಳಾದ ಕೆ ಮರುಳಸಿದ್ದಪ್ಪ, ಲೇಖಕ ಕುಂ ವೀರಭದ್ರಪ್ಪ, ಬಿಎಲ್ ವೇಣು, ಬರಗೂರು ರಾಮಚಂದ್ರಪ್ಪ, ಬಂಜಗೆರೆ ಜಯಪ್ರಕಾಶ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಸೇರಿದಂತೆ 61 ಮಂದಿಗೆ ಪತ್ರ ಬರೆದಿದ್ದಾನೆ.

ಪತ್ರದಲ್ಲಿ ಜಾಧವ್, ಸಾಹಿತಿಗಳಿಗೆ ದೇಶದ್ರೋಹಿ, ರಾಷ್ಟ್ರವಿರೋಧಿ ಮತ್ತು ಹಿಂದೂ ವಿರೋಧಿ ಎಂದು ಕರೆದಿದ್ದಾನೆ. ಪತ್ರಗಳು ಸಾಮಾನ್ಯವಾಗಿ ಸಾರ್ವಜನಿಕ ಕ್ಷಮೆಯಾಚನೆಯೊಂದಿಗೆ ಕೊನೆಗೊಳ್ಳುತ್ತವೆ. ಬರಹಗಾರರು ತಮ್ಮ ನಿಲುವನ್ನು ಬದಲಾಯಿಸದಿದ್ದರೆ ಅವರು ಯಾವುದೇ ರೂಪದಲ್ಲಿ ಸಾವಿಗೆ ಸಿದ್ಧರಾಗಬೇಕು, ಅದು ಶೀಘ್ರದಲ್ಲೇ ಬರಲಿದೆ ಎಂದು ಪತ್ರದಲ್ಲಿ ಕೊನೆಗೆ ಉಲ್ಲೇಖಿಸಲಾಗುತ್ತಿತ್ತು.

ಪತ್ರಗಳನ್ನು ಸ್ವೀಕರಿಸಿದವರು ಒಟ್ಟು 7 ದೂರುಗಳನ್ನು ಸಲ್ಲಿಸಿದ್ದರು. ಆದರೆ ಸಿಎಂ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವು ಪತ್ರ ಬರೆದವರನ್ನು ಪತ್ತೆ ಹಚ್ಚಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದರು.

ಆ.22, 2023ರಂದು, ಬರಹಗಾರರ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕ್ರಮಕ್ಕೆ ಆಗ್ರಹಿಸಿದೆ. ನಂತರ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಪೋಸ್ಟಲ್‌ ಸ್ಟಾಂಪ್‌ನ ಆಧಾರದಲ್ಲಿ ಮತ್ತು ಅಂಚೆ ಕಚೇರಿ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಜಾದವ್‌ ಬಂಧನ ನಡೆದಿದೆ.

ಇದನ್ನು ಓದಿ: ಕೇರಳ: ಇಡಿಯಿಂದ ಕಾಂಗ್ರೆಸ್‌ ನಾಯಕ ಕೆ.ಕೆ.ಅಬ್ರಹಾಂ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ಬಂಧನದ ವಿರುದ್ಧ ಎಎಪಿಯಿಂದ ಸಹಿ ಅಭಿಯಾನ

0
ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಆಮ್ ಆದ್ಮಿ ಪಕ್ಷ ಗುರುವಾರ ಸಹಿ ಅಭಿಯಾನವನ್ನು ಪ್ರಾರಂಭಿಸಿದೆ. ಮಾರ್ಚ್ 21ರಂದು ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ...