Homeರಾಷ್ಟ್ರೀಯ‘ಸುಳ್ಳು ಸುದ್ದಿ’ಗಳನ್ನು ಹರಡುತ್ತಿರುವ ಆರು ಯೂಟ್ಯೂಬ್ ಚಾನೆಲ್‌ಗಳನ್ನು ಪತ್ತೆ ಹಚ್ಚಿದ ಒಕ್ಕೂಟ ಸರ್ಕಾರ

‘ಸುಳ್ಳು ಸುದ್ದಿ’ಗಳನ್ನು ಹರಡುತ್ತಿರುವ ಆರು ಯೂಟ್ಯೂಬ್ ಚಾನೆಲ್‌ಗಳನ್ನು ಪತ್ತೆ ಹಚ್ಚಿದ ಒಕ್ಕೂಟ ಸರ್ಕಾರ

- Advertisement -
- Advertisement -

ಒಕ್ಕೂಟ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಗುರುವಾರ “ಭಾರತದಲ್ಲಿ ಸುಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಸುಳ್ಳು ಮಾಹಿತಿಯನ್ನು ಹರಡುವ” ಆರು ಯೂಟ್ಯೂಬ್ ಚಾನೆಲ್‌ಗಳನ್ನು ಪತ್ತೆ ಹಚ್ಚಿದೆ.

ಸಚಿವಾಲಯದ PIB (ಪ್ರೆಸ್ ಇನ್ಫರ್ಮೇಷನ್ ಬ್ಯೂರೋ) ಫ್ಯಾಕ್ಟ್‌ಚೆಕ್ ಘಟಕವು ಟ್ವಿಟರ್‌ನಲ್ಲಿ ಆರು ಪ್ರತ್ಯೇಕ ಟ್ವಿಟರ್ ಥ್ರೆಡ್‌ಗಳನ್ನು ಪೋಸ್ಟ್‌ ಮಾಡಿದ್ದು, ಈ ಚಾನೆಲ್‌ಗಳು ನಕಲಿ ಸುದ್ದಿಗಳನ್ನು ಹರಡುತ್ತಿವೆ ಎಂಬುವನ್ನು ಸಾಬೀತುಪಡಿಸಲು ಹಲವಾರು ಪುರಾವೆಗಳನ್ನು ಬಿಡುಗಡೆ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಆರು ಯೂಟ್ಯೂಬ್ ಚಾನೆಲ್‌ಗಳು ಸಂಘಟಿತ ತಪ್ಪು ಮಾಹಿತಿ ನೆಟ್‌ವರ್ಕ್‌ನ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದ್ದು, ಸುಮಾರು 20 ಲಕ್ಷ ಚಂದಾದಾರರನ್ನು ಹೊಂದಿದೆ. ಅಲ್ಲದೆ ಈ ಚಾನೆಲ್‌ಗಳ ವೀಡಿಯೊಗಳನ್ನು 51 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ” ಎಂದು ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

PIB ಪತ್ತೆ ಹಚ್ಚಿದ ಚಾನಲ್‌ಗಳ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ:

ಚಾನಲ್‌‌                  ಚಂದಾದಾರರು
Nation TV                   5.57 ಲಕ್ಷ
Samvaad TV              10.9 ಲಕ್ಷ
Sarokar Bharat          21.1 ಸಾವಿರ
Nation 24                  25.4 ಸಾವಿರ
Swarnim Bharat        6.07 ಸಾವಿರ
Samvaad Samachar   3.48 ಲಕ್ಷ

ಫ್ಯಾಕ್ಟ್‌‌ಚೆಕ್ ಟ್ವೀಟ್ ಪೋಸ್ಟ್‌ ಆಗುತ್ತಿದ್ದಂತೆ ಕೆಲವು ಚಾನೆಲ್‌ಗಳು ತಮ್ಮ ಹೆಸರುಗಳನ್ನು ಬದಲಾಯಿಸಿದೆ. ಸಂವಾದ್ ಸಮಾಚಾರ್, ಸಂವಾದ್ ಟಿವಿ ಮತ್ತು ನೇಷನ್ ಟಿವಿ ಚಾನೆಲ್‌ಗಳು, ತಮ್ಮ ಹೆಸರನ್ನು ಕ್ರಮವಾಗಿ ಇನ್‌ಸೈಡ್ ಇಂಡಿಯಾ, ಇನ್‌ಸೈಡ್ ಭಾರತ್ ಮತ್ತು ನೇಷನ್ ವೀಕ್ಲಿ ಎಂದು ಬದಲಾಯಿಸಿಕೊಂಡಿವೆ. ಆದರೆ ಎಲ್ಲಾ ಚಾನೆಲ್‌ಗಳು ಇನ್ನೂ ಕೂಡಾ ಕಾರ್ಯನಿರ್ವಹಿಸುತ್ತಿವೆ.

ಸಚಿವಾಲಯದ ಪ್ರಕಾರ, ಈ ಚಾನೆಲ್‌ಗಳು ಸುಪ್ರೀಂಕೋರ್ಟ್, ಸಂಸತ್ತಿನ ಕಲಾಪಗಳು, ಚುನಾವಣೆಗಳು ಮತ್ತು ಒಕ್ಕೂಟ ಸರ್ಕಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಿವೆ.

“ಈ ಚಾನೆಲ್‌ಗಳು ನಕಲಿ ಸುದ್ದಿ ಮತ್ತು ಕ್ಲಿಕ್‌ಬೈಟ್, ಸಂವೇದನಾಶೀಲ ಥಂಬ್‌ನೇಲ್‌ಗಳು ಮತ್ತು ಟಿವಿ ಚಾನೆಲ್‌ಗಳ ನ್ಯೂಸ್ ಆಂಕರ್‌ಗಳ ಚಿತ್ರಗಳನ್ನು ಬಳಸಿಕೊಂಡು ವೀಕ್ಷಕರನ್ನು ತಪ್ಪುದಾರಿಗೆಳೆಯುವ ಸುದ್ದಿಗಳನ್ನು ಪ್ರಕಟಿಸುತ್ತಿವೆ” ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಭೀಮಾ ಕೋರೆಂಗಾವ್‌ ಪ್ರಕರಣ: ಸ್ಟಾನ್ ಸ್ವಾಮಿಯವರ ಕಂಪ್ಯೂಟರ್‌ಗೆ ನಕಲಿ ದಾಖಲೆ ತುರುಕಿದ್ದ ಹ್ಯಾಕರ್‌- ಬೆಚ್ಚಿಬೀಳಿಸುವ ವರದಿ ಬಹಿರಂಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಭರವಸೆ ನೀಡಿದೆ...

0
ಮೇ 2,2024ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ " ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ" ಎಂದಿದ್ದಾರೆ. "ಕಾಂಗ್ರೆಸ್‌ನ ಪ್ರಣಾಳಿಕೆ...