Homeಮುಖಪುಟಬಿಹಾರದಲ್ಲಿ 'ಹಲಾಲ್' ಉತ್ಪನ್ನ ನಿಷೇಧಿಸಿ: ಸಿಎಂ ನಿತೀಶ್ ಕುಮಾರ್‌ಗೆ ಗಿರಿರಾಜ್ ಸಿಂಗ್ ಪತ್ರ

ಬಿಹಾರದಲ್ಲಿ ‘ಹಲಾಲ್’ ಉತ್ಪನ್ನ ನಿಷೇಧಿಸಿ: ಸಿಎಂ ನಿತೀಶ್ ಕುಮಾರ್‌ಗೆ ಗಿರಿರಾಜ್ ಸಿಂಗ್ ಪತ್ರ

- Advertisement -
- Advertisement -

ಉತ್ತರ ಪ್ರದೇಶದ ಬಳಿಕ ಬಿಹಾರದಲ್ಲಿ ಹಲಾಲ್ ಪ್ರಮಾಣಪತ್ರ ಹೊಂದಿರುವ ಉತ್ಪನ್ನಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಿಎಂ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಹಲಾಲ್ ಉತ್ಪನ್ನ ‘ಜಿಹಾದ್’ ಎಂದಿರುವ ಗಿರಿರಾಜ್ ಸಿಂಗ್, ಇದರಿಂದ ಇಸ್ಲಾಮಿಕ್ ವ್ಯವಹಾರದ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.

ಬಿಹಾರದ ಬೇಗುಸರಾಯ್‌ನ ಸಂಸದರಾಗಿರುವ ಗಿರಿರಾಜ್‌ ಸಿಂಗ್‌, ಸಿಎಂಗೆ ಬರೆದಿರುವ ಪತ್ರದ ಪ್ರತಿಯನ್ನು ಎಕ್ಸ್‌ (ಟ್ವಿಟ್ಟರ್‌) ನಲ್ಲಿ ಹಂಚಿಕೊಂಡಿದ್ದು, ಯಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರ ನಿರ್ಧಾರವನ್ನು ಅಕ್ಕಪಕ್ಕದ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ.

ವಿಡಿಯೋ ಮೂಲಕ ಮಾತನಾಡಿರುವ ಗಿರಿರಾಜ್‌ ಸಿಂಗ್, ಹಲಾಲ್ ಪ್ರಾಮಾಣಿಕೃತ ಉತ್ಪನ್ನಗಳ ಮಾರಾಟ ಮಧ್ಯಕಾಲೀನ ಯುಗದಲ್ಲಿ ಮುಸ್ಲಿಂ ರಾಜರು ಇತರ ಧರ್ಮೀಯರಿಗೆ ವಿಧಿಸುತ್ತಿದ್ದ ‘ಜಿಝ್ಯಾ’ ತೆರಿಗೆಯಂತಿದೆ. ಕಾಂಗ್ರೆಸ್‌ ಸೇರಿದಂತೆ ಹಿಂದಿನ ಸರ್ಕಾರಗಳು ಮತ ರಾಜಕಾರಣಕ್ಕೋಸ್ಕರ ಹಲಾಲ್‌ ಉತ್ಪನ್ನವನ್ನು ಬೆಂಬಲಿಸಿದೆ ಎಂದಿದ್ದಾರೆ.

ತುಕ್ಡೇ ತುಕ್ಡೇ ಗ್ಯಾಂಗ್‌ಗಳು ಬಿಹಾರದ ಎಲ್ಲಾ ಮೂಲೆ ಮೂಲೆಗಳಲ್ಲಿ ಹಲಾಲ್ ಪ್ರಾಮಾಣಿಕೃತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಹಲಾಲ್‌ ಉತ್ಪನ್ನಗಳನ್ನು ಹಿಂದೂ ಮಂತ್ರಗಳಂತೆ ಕುರಾನ್‌ ಮೂಲಕ ಪವಿತ್ರೀಕರಣಗೊಳಿಸಲಾಗುತ್ತದೆ. ಇದರಿಂದ ಸನಾತನ ಧರ್ಮ ಅಪಾಯದಲ್ಲಿದೆ. ಹಲಾಲ್‌ ಉತ್ಪನ್ನಗಳ ಮೂಲಕ ಶರಿಯಾ ಕಾನೂನು ಹೇರಲಾಗ್ತಿದೆ. ಅಲ್ಲದೆ, ಇದು ಉಗ್ರವಾದಿಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಗಿರಿರಾಜ್‌ ಸಿಂಗ್ ಆರೋಪಿಸಿದ್ದಾರೆ.

ಗಿರಿರಾಜ್‌ ಸಿಂಗ್‌ ಆರೋಪಕ್ಕೆ ಜೆಡಿ(ಯು) ನಾಯಕ ನೀರಜ್‌ ಕುಮಾರ್‌ ತಿರುಗೇಟು ಕೊಟ್ಟಿದ್ದು, ಬಿಜೆಪಿ ನಾಯಕರು ಹಿಂದೂ ಧರ್ಮದ ಪಾಲಕರಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಾರೆ. ಆದರೆ, ಅವರದ್ದೇ ಆಡಳಿತದ ಉತ್ತರ ಪ್ರದೇಶದಂತಹ ರಾಜ್ಯಗಳು ಗೋಮಾಂಸ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ಇವೆಲ್ಲವೂ ಅವರ ಬೂಟಾಟಿಕೆ ಎಂದಿದ್ದಾರೆ.

ಇದನ್ನೂ ಓದಿ: ಮಹುವಾ ವಿರುದ್ಧದ ಪ್ರಶ್ನೆಗಾಗಿ ನಗದು ಆರೋಪ: ಮೌನ ಮುರಿದ ಮಮತಾ ಬ್ಯಾನರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...