Homeಮುಖಪುಟಮೋದಿಯವರ ಸುಳ್ಳು, ದ್ವೇಷಪೂರಿತ ಹೇಳಿಕೆಗಳಿಗೆ ಜನರು ಮರುಳಾಗುವುದಿಲ್ಲ: ಖರ್ಗೆ ವಾಗ್ದಾಳಿ

ಮೋದಿಯವರ ಸುಳ್ಳು, ದ್ವೇಷಪೂರಿತ ಹೇಳಿಕೆಗಳಿಗೆ ಜನರು ಮರುಳಾಗುವುದಿಲ್ಲ: ಖರ್ಗೆ ವಾಗ್ದಾಳಿ

- Advertisement -
- Advertisement -

”ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸುಳ್ಳು, ದ್ವೇಷಪೂರಿತ ಹೇಳಿಕೆಗಳಿಗೆ ಜನರು ಮರುಳಾಗುವುದಿಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ”ಇಂದು ರಾಜಸ್ಥಾನ ಚುನಾವಣಾ ಪ್ರಚಾರದ ಕೊನೆಯ ದಿನ. ಯೋಧರು ಹಾಗೂ ನಾಯಕರು ಜನ್ಮತಾಳಿದ ಪವಿತ್ರ ಭೂಮಿ ರಾಜಸ್ಥಾನದಲ್ಲಿ ಜನರು ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ” ಎಂದಿದ್ದಾರೆ.

”ಪ್ರಧಾನಿ ಮೋದಿ ಅವರು ಟೊಳ್ಳು ಹಾಗೂ ಸಮಾಜವನ್ನು ಒಡೆಯುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜಸ್ಥಾನದ ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪೂರಕ ವಾತವರಣವಿದೆ” ಎಂದು ಖರ್ಗೆ ತಿಳಿಸಿದ್ದಾರೆ.

”ಕಾಂಗ್ರೆಸ್ ಪಕ್ಷದ 7 ಭರವಸೆಗಳಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಒಂದು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಧನ್ಯವಾದಗಳು” ಎಂದಿದ್ದಾರೆ.

”ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ವಾತಾವರಣವಿದೆ. ನಮ್ಮ ಸಾಮಾಜಿಕ ನ್ಯಾಯ, ಆರ್ಥಿಕ ಸಬಲೀಕರಣ ಮತ್ತು ಉಳಿತಾಯ ಮತ್ತು ಪರಿಹಾರ ಯೋಜನೆಗಳಿಗೆ ಬಿಜೆಪಿ ಹೆದರುತ್ತಿದೆ.” ಎಂದು ಹೇಳಿದ್ದಾರೆ.

”ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪೊಳ್ಳು, ಅಸಂಬದ್ಧ ಮತ್ತು ವಿಭಜನೆಯ ಮಾತುಕತೆಗಳಲ್ಲಿ ನಿರತರಾಗಿದ್ದಾರೆ, ಅವರಿಗೆ ಕಾಂಗ್ರೆಸ್ ಪಕ್ಷದ 7 ಭರವಸೆಗಳು ಇಷ್ಟವಾಗುತ್ತಿಲ್ಲ. ಈ ಬಾರಿ ಸಾರ್ವಜನಿಕರು ಅವರ ಸುಳ್ಳು, ನೆಪ, ದ್ವೇಷದ ಮಾತುಗಳಿಗೆ ಮರುಳಾಗುವುದಿಲ್ಲ” ಎಂದು ಹೇಳಿದ್ದಾರೆ.

”ಈ ಬಾರಿ ಸಂಪ್ರದಾಯ ಬದಲಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಅವಕಾಶ ನೀಡುವುದಾಗಿ ರಾಜಸ್ಥಾನದ ಜನತೆ ನಿರ್ಧರಿಸಿದ್ದಾರೆ” ಎಂದರು.

ರಾಜಸ್ಥಾನದಲ್ಲಿ ಇಂದು ಬಹಿರಂಗ ಪ್ರಚಾರ ತೆರೆ ಕಾಣಲಿದೆ. ನವೆಂಬರ್ 25ರಂದು ಚುನಾವಣೆ ನಡೆಯಲಿದ್ದು,
ಡಿಸೆಂಬರ್ 3ರಂದು ಮತ ಎಣಿಕೆ ಜರುಗಲಿದೆ.

ಇದನ್ನೂ ಓದಿ: ಮೋದಿ ‘ಕೆಟ್ಟ ಶಕುನ’ ಎಂದ ರಾಹುಲ್: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...