Homeಪುಸ್ತಕ ವಿಮರ್ಶೆಗಾಂಧೀಜಿಗೆ ಪ್ರಭಾವ ಬೀರಿದ ಪುಸ್ತಕ ಜಾನ್ ರಸ್ಕಿನ್‌ರ ’ಅನ್‍ಟು ದಿಸ್ ಲಾಸ್ಟ್’ ಬಗ್ಗೆ

ಗಾಂಧೀಜಿಗೆ ಪ್ರಭಾವ ಬೀರಿದ ಪುಸ್ತಕ ಜಾನ್ ರಸ್ಕಿನ್‌ರ ’ಅನ್‍ಟು ದಿಸ್ ಲಾಸ್ಟ್’ ಬಗ್ಗೆ

- Advertisement -
- Advertisement -

ಗಾಂಧೀಜಿಗೆ ಸರ್ವೋದಯವಾಗಿ ಕಂಡ ಜಾನ್ ರಸ್ಕಿನ್ ಅವರ ಅನ್ಟು ದಿಸ್ ಲಾಸ್ಟ್ ಶಿರೋಬರಹದ ಬೇರು ಬೈಬಲ್ಲಿನ ಒಬ್ಬ ಉದಾರ ಮನದ ಮಾಲಿಕನ ದೃಷ್ಟಾಂತದಲ್ಲಿದೆ. ಸ್ವರ್ಗ ಸಾಮ್ರಾಜ್ಯದ ರೂಪಕವನ್ನು ಅರ್ಥೈಸಲು ಯೇಸು ಹೇಳುವ ಕತೆ.

ದ್ರಾಕ್ಷಿತೋಟದ ಯಜಮಾನ ಕೂಲಿಯಾಳುಗಳಿಗೆ ದಿನಕ್ಕೆ ಒಂದು ಬೆಳ್ಳಿ ನಾಣ್ಯದಂತೆ ಗೊತ್ತು ಮಾಡಿ ಕೆಲಸಕ್ಕೆ ಕಳುಹಿಸುತ್ತಾನೆ. ತೋಟದೊಡೆಯ ಕೆಲಸವಿಲ್ಲದೇ ಇರುವ ಇತರರನ್ನೂ ಕಂಡು ತಡವಾಗಿದ್ದರೂ ಅವರನ್ನೂ ಕೂಲಿಗೆ ಕಳುಹಿಸುತ್ತಾನೆ. ಅದೇ ರೀತಿಯಲ್ಲಿ ಇನ್ನೂ ದಿನದ ಕೊನೆಯ ಭಾಗದಲ್ಲಿ ಬಂದು ಸೇರಿಕೊಂಡವರಿಗೆಲ್ಲಾ ಕೆಲಸಕ್ಕೆ ಸೇರಿಸಿಕೊಳ್ಳುತ್ತಾನೆ. ಸಂಜೆ ಎಲ್ಲರೂ ಹೊರಡುವಾಗ ಎಲ್ಲರಿಗೂ ಸಮನಾಗಿ ಒಂದು ಬೆಳ್ಳಿ ನಾಣ್ಯದ ಕೂಲಿಯೇ ಸಿಗುತ್ತದೆ. ಮೊದಲು ಕೆಲಸಕ್ಕೆ ಬಂದವರು ಮೊದಲು, ನಡುವೆ ಮತ್ತು ಕೊನೆಗೆ ಬಂದವರೆಲ್ಲರಿಗೂ ಒಂದೇ ಸರಿಸಮ ಕೂಲಿ ಎಂದು ಗೊಣಗಿದಾಗ ತೋಟದೊಡೆಯ ಹೇಳುತ್ತಾನೆ.

“ನಿನಗೆ ಅನ್ಯಾಯ ಮಾಡಲಿಲ್ಲ. ಒಪ್ಪಂದದ ಪ್ರಕಾರ ನಿನಗೆ ನಿನ್ನ ಬೆಳ್ಳಿನಾಣ್ಯ ಸಿಕ್ಕಿದೆ. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ. ನನ್ನ ಔದಾರ್ಯ ಕಂಡು ನಿನಗೇಕೆ ಅಸೂಯೆ?”

ಈ ಕಟ್ಟ ಕಡೆಯವನಿಗೆ ಎನ್ನುವುದೇ “ಅನ್ ಟು ದಿಸ್ ಲಾಸ್ಟ್.”

ನ್ಯಾಯ ಮತ್ತು ಪ್ರಾಮಾಣಿಕತೆಗಳೆಂಬ ಮೌಲ್ಯಾಧಾರದಲ್ಲಿ ಸಂಪತ್ತನ್ನು ವ್ಯಾಖ್ಯಾನಿಸುವ ರಸ್ಕಿನ್ ಗಾಂಧಿ ಮತ್ತು ಟಾಲ್‌ ಸ್ಟಾಯ್‌ ಒಳಗೊಂಡಂತೆ ಅನೇಕಾನೇಕರನ್ನು ತಮ್ಮ ಬರಹದ ಮೂಲಕ ಪ್ರಭಾವಿಸಿದ್ದರು. ಹಾಗೆಯೇ ಅವರನ್ನು ಬಂಡವಾಳಶಾಹಿಯನ್ನು ಪ್ರತಿನಿಧಿಸುವವರು ವಿರೋಧಿಸುತ್ತಿದ್ದರು. ಸೃಷ್ಟಿಯ ಸಂರಚನೆಯಲ್ಲಿ ಕೈಗಾರಿಕೆಗಳ ಆಡಳಿತಯಂತ್ರಗಳು ಮತ್ತು ಬಂಡವಾಳಶಾಹಿಯು ಹೇಗೆ ಅಮಾನ್ಯವಾಗುತ್ತದೆ ಎಂಬ ಅರಿವನ್ನೂ ಈ ಕೃತಿಯಲ್ಲಿ ಉಸುರಿದ್ದರು.

ಎಲ್ಲಾ ಕೆಲಸಗಳನ್ನೂ ಗೌರವಿಸುತ್ತಾ ಕೊಟ್ಟೆಲ್ಲಾ ಕೆಲಸಗಳಿಗೆ ಸಮವಾಗಿ ಸಂದಾಯ ಮಾಡಬೇಕೆನ್ನುವ ರಸ್ಕಿನ್ ಪ್ರತಿಯೊಬ್ಬರನ್ನೂ ಕುಶಲಿಗಳನ್ನಾಗಿ, ವಿದ್ಯಾವಂತರನ್ನಾಗಿ ರೂಪಿಸುವುದು ಸರಕಾರದ ಕೆಲಸವೆನ್ನುತ್ತಾರೆ. ಅವರ ಆದರ್ಶವೆಂದರೆ; ಯಜಮಾನನು ತನ್ನ ಮಗನನ್ನು ವಿದ್ಯಾವಂತನನ್ನಾಗಿ, ಹಣವಂತನನ್ನಾಗಿ ಆಸ್ಥೆಯಿಂದ ರೂಪಿಸುವಂತೆ ತನ್ನ ಕೆಲಸಗಾರರನ್ನೂ ರೂಪಿಸಬೇಕು.

ಮತ್ತೊಬ್ಬರನ್ನು ಬಳಸಿಕೊಳ್ಳುತ್ತಾ ತಾನು ಸಿರಿವಂತನಾಗುವುದು ಪಾಪದ ಕೆಲಸ. ಅದು ಸರಕಾರದ ಆರ್ಥಿಕತೆಗೂ ಅನ್ಯಾಯ. ತನ್ನ ನೆರೆಯವನನ್ನು ಬಡತನಕ್ಕೆ ದೂಡುತ್ತಾ ತನ್ನನ್ನು ಶ್ರೀಮಂತಗೊಳಿಸಿಕೊಳ್ಳುವ ಯಾವುದೇ ವಿಧಾನ ಅನ್ಯಾಯ. ತಾನೊಬ್ಬ ಸಿರಿವಂತನಾಗಿ ಬಡ ಸಮಾಜದಲ್ಲಿರುವುದು ಮೌಲ್ಯಹೀನ. ಹಾಗಾಗಿ ಸಂಪತ್ತು ಎಂಬುದು ನ್ಯಾಯದ ಆಧಾರದಲ್ಲಿರಬೇಕು. ಇತರರ ದುಡಿಮೆಯಿಂದ ತಾನು ಶ್ರೀಮಂತನಾಗುವುದು ಶೀಲವಲ್ಲ.

ರಾಷ್ಟ್ರೀಯ ಸಂಪತ್ತೆನ್ನುವುದು ಕೆಲವು ಜನರ ಒಟ್ಟುಗೂಡಿಸಿದ ಸಂಪತ್ತಾಗಬಾರದು. ರಾಷ್ಟ್ರದ ಎಲ್ಲಾ ಜನರ ವಿದ್ಯಾರ್ಹತೆ, ಪ್ರತಿಭೆ, ದುಡಿಮೆಗಳಿಂದ ಕ್ರೋಢೀಕರಿಸಿರುವಂತಹ ಸಂಪತ್ತಾಗಬೇಕು. ವ್ಯಕ್ತಿಗತವಾಗಿ ಶ್ರೀಮಂತರಾಗಿರುವವರಿಂದ ಸಮಾಜಕ್ಕೆ ಎಂತಹ ಕೊಡುಗೆ ದೊರಕುತ್ತದೆ!

ವಾಣಿಜ್ಯ ವ್ಯವಹಾರವು ನ್ಯಾಯಸಮ್ಮತವಾಗಿಯೇ ನಡೆಯಬೇಕು. ಏಕೆಂದರೆ ಸೃಷ್ಟಿಯ ವ್ಯವಹಾರಗಳಲ್ಲಿ ತಾರತಮ್ಯವಿಲ್ಲ. ಅದೇರೀತಿ ನ್ಯಾಯದ ಪ್ರಜ್ಞೆಯಿಂದ ಆರ್ಥಿಕ ವ್ಯವಹಾರಗಳೂ ನಡೆಯಬೇಕು. ಆರ್ಥಿಕತೆಯೂ ಕೆಲವು ಜನರ ಕೈಯೊಡೆತನದಲ್ಲಿರದೇ ಸಹಜೀವಿಗಳೆಲ್ಲ ಸರಣಿಯಲ್ಲಿ ವ್ಯಾಪ್ತವಾಗಿ ಪ್ರಾಪ್ತಿಯಲ್ಲಿರಬೇಕು. ರಸ್ಕಿನ್ ಹೇಳುವಂತೆ ಯಾರುಯಾರನ್ನೂ ಕಡೆಯಾಗಿ ನೋಡಬಾರದು, ಯಾರು ಯಾರಿಗೂ ಗುಲಾಮರಾಗಿರಕೂಡದು. ಕೆಲವು ಜನರ ಕೈಯೊಡೆತನದಲ್ಲಿರುವ ಸಂಪತ್ತು ಹಲವು ಜನರನ್ನು ಬಡತನಕ್ಕೆ ದೂಡುತ್ತದೆ.

ರಸ್ಕಿನ್ ಧ್ವನಿಸುವುದಿಷ್ಟೇ, ಜೀವನಕ್ಕೆ ಆಧಾರವಾಗುವುದೋ ಅದೇ ಮೌಲ್ಯ. ಹಣ, ಬೆಲೆ, ಉತ್ಪಾದನೆ ಯಾವುದಾದರೂ ಜೀವಿಗಳ ಜೀವನಕ್ಕೆ ಆಧಾರವಾಗುವುದಾದರೆ ಮಾತ್ರವೇ ಅವು ಮೌಲ್ಯ. ಉಪಯೋಗಿಸದ ಸಂಪತ್ತನ್ನು ಶೇಖರಿಸಿಟ್ಟುಕೊಳ್ಳುವುದು ಸಿರಿವಂತಿಕೆಯ ರೋಗ. ಉತ್ಪಾದನೆಗಳು ಹಣವನ್ನು ಸೃಷ್ಟಿಸುವ ಆಧಾರದಲ್ಲಾಗದೇ ಬಳಕೆಯ ಆಧಾರದಲ್ಲಾದರೆ ಅದು ಉಪಯುಕ್ತ ಮತ್ತು ಮೌಲ್ಯಾಧಾರಿತವಾದ ಪ್ರಗತಿ.

ರಸ್ಕಿನ್‍ರವರ ಆರ್ಥಿಕ ತತ್ವ, ಜೀವನಕ್ಕೆ ಹೊರತಾದ ಸಂಪತ್ತಿಲ್ಲ. ಪ್ರೀತಿ, ಆನಂದ, ಅಭಿಮಾನ ಎಲ್ಲವನ್ನೂ ಒಳಗೊಳ್ಳುವ ಶಕ್ತಿಯೇ ಜೀವನವಾಗಿರುವಾಗ ದೇಶದ ಸರ್ಕಾರವೂ ಕೂಡಾ ಘನತೆಯ ಮತ್ತು ಸಂತೋಷದ ಮನುಷ್ಯರನ್ನು ತನ್ನ ನೆಲದಲ್ಲಿ ರೂಪಿಸಬೇಕು. ಇತರರ ಮರ್ಜಿಯಲ್ಲಿ ದೈನೇಸಿಯಿಂದ ಬದುಕುವಂತಹ ಪರಾವಲಂಬಿಗಳನ್ನಾಗಿ ಮಾಡುವುದಲ್ಲ.

ಇದೇ ರಸ್ಕಿನ್ನನ್ನಿಂದ ಗಾಂಧೀಜಿ ಗ್ರಹಿಸಿದ ಸರ್ವೋದಯ ತತ್ವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...