Homeಮುಖಪುಟಯುಪಿ: ಯೋಗಿ ಸಿಎಂ ಆದ ನಂತರ ಪ್ರತಿ 15 ದಿನಕ್ಕೊಂದು ಪೊಲೀಸ್ ಎನ್‌ಕೌಂಟರ್‌ ಕೊಲೆ

ಯುಪಿ: ಯೋಗಿ ಸಿಎಂ ಆದ ನಂತರ ಪ್ರತಿ 15 ದಿನಕ್ಕೊಂದು ಪೊಲೀಸ್ ಎನ್‌ಕೌಂಟರ್‌ ಕೊಲೆ

- Advertisement -
- Advertisement -

ಉತ್ತರ ಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ್‌ರವರು ನೇಮಕಗೊಂಡ ನಂತರ ಪ್ರತಿ 15 ದಿನಕ್ಕೊಬ್ಬರು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲೆಯಾಗಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿ ಪ್ರಕಟಿಸಿದೆ.

2017ರ ಮಾರ್ಚ್ ನಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೆ, ಉತ್ತರ ಪ್ರದೇಶ ರಾಜ್ಯವು 186 ಎನ್‌ಕೌಂಟರ್‌ಗಳಿಗೆ ಸಾಕ್ಷಿಯಾಗಿದೆ. ಅಂದರೆ ಪ್ರತಿ 15 ದಿನಗಳಿಗೊಮ್ಮೆ ಪೊಲೀಸ್ ಎನ್‌ಕೌಂಟರ್ ನಡೆದಿದೆ ಎಂದು ವರದಿ ಹೇಳಿದೆ.

ಈ ಆರು ವರ್ಷಗಳಲ್ಲಿ ಪೊಲೀಸರು 5,046 ಆರೋಪಿಗಳಿಗೆ ಗುಂಡು (ಸಾಮಾನ್ಯವಾಗಿ ಕಾಲಿಗೆ) ಹಾರಿಸಿದ್ದಾರೆ.  ಅಂದರೆ ಪ್ರತಿ ದಿನ ಎರಡು ಕಡೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ತಿಳಿಸಿದೆ.

ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟ 186 ಜನರ ಪಟ್ಟಿಯಲ್ಲಿ, 96 ಆರೋಪಿಗಳು ಕೊಲೆ ಪ್ರಕರಣಗಳನ್ನು ಎದುರಿಸಿದ್ದಾರೆ. ಅವರಲ್ಲಿ ಇಬ್ಬರು ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳನ್ನು ಎದುರಿಸಿದ್ದಾರೆ.

ಯಾವುದೇ ಎನ್‌ಕೌಂಟರ್ ನಂತರ ನಡೆಯಬೇಕಿರುವ ಕಡ್ಡಾಯ ಪ್ರಕ್ರಿಯೆಯಾದ ಸಾವಿಗೆ ಕಾರಣವಾಗುವ ಮ್ಯಾಜಿಸ್ಟ್ರೇಟ್ ತನಿಖೆಯಲ್ಲಿ 161 ಎನ್‌ಕೌಂಟರ್‌ಗಳಲ್ಲಿ ದಾಖಲೆಗಳ ಪ್ರಕಾರ ಯಾವುದೇ ಆಕ್ಷೇಪಣೆಗಳಿಲ್ಲದೇ ತನಿಖೆ ಪೂರ್ಣಗೊಂಡಿದೆ ಮತ್ತು ವಿಲೇವಾರಿ ಮಾಡಲಾಗಿದೆ ಎನ್ನಲಾಗಿದೆ.

2016 ಮತ್ತು 2022 ರ ನಡುವೆ, ಅಪರಾಧ ಸಂಖ್ಯೆಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಅಧಿಕೃತ ದಾಖಲೆಗಳ ಪ್ರಕಾರ ದರೋಡೆ, ಕಳ್ಳತನದ 82% ಮತ್ತು ಕೊಲೆಯಂತಹ ಪ್ರಕರಣಗಳಲ್ಲಿ 37% ಇಳಿಕೆ ಕಂಡುಬಂದಿದೆ ಎಂದು ಹೇಳುತ್ತಾರೆ.

ಆದರೆ ಉತ್ತರ ಪ್ರದೇಶದ ಅಪರಾಧ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಜೊತೆ ಮಾತಾನಾಡಿ “ಘೋರ ಅಪರಾಧಗಳನ್ನು ನಿಯಂತ್ರಿಸುವ ಅಥವಾ ಕಠಿಣ ಅಪರಾಧಿಗಳ ಮೇಲೆ ನಿಗಾ ಇರಿಸಲು ಎಂದಿಗೂ ಪೊಲೀಸ್ ಎನ್‌ಕೌಂಟರ್‌ಗಳು ಪರಿಹಾರವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ; ಬಾಗಲಕೋಟೆ: ವಿವಾದಿತ ಸಿನಿಮಾ ‘ದಿ ಕೇರಳ ಸ್ಟೋರಿ’ ವೀಕ್ಷಿಸಲು ಕಾಲೇಜಿಗೆ ಅರ್ಧದಿನ ರಜೆ; ಬಿಜೆಪಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. Today UP people’s are leaving with out any fear. Just because of the criminals and underworld gang people’s were encountered. That’s why BJP wined second time. UP government is taking action irrespective of community, which is very good action.

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...