Homeಕರ್ನಾಟಕಬಾಗಲಕೋಟೆ: ವಿವಾದಿತ ಸಿನಿಮಾ 'ದಿ ಕೇರಳ ಸ್ಟೋರಿ' ವೀಕ್ಷಿಸಲು ಕಾಲೇಜಿಗೆ ಅರ್ಧದಿನ ರಜೆ; ಬಿಜೆಪಿ ಮಾಜಿ...

ಬಾಗಲಕೋಟೆ: ವಿವಾದಿತ ಸಿನಿಮಾ ‘ದಿ ಕೇರಳ ಸ್ಟೋರಿ’ ವೀಕ್ಷಿಸಲು ಕಾಲೇಜಿಗೆ ಅರ್ಧದಿನ ರಜೆ; ಬಿಜೆಪಿ ಮಾಜಿ ಶಾಸಕನಿಂದ ಫ್ರೀ ಶೋ

- Advertisement -
- Advertisement -

ದೇಶಾದ್ಯಂತ ಭಾರೀ ಸಂಚಲನ ಎಬ್ಬಿಸಿರುವ ಬಾಲಿವುಡ್​ನ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಲು ಕಾಲೇಜು ಆಡಳಿತ ಮಂಡಲಿ ವಿದ್ಯಾರ್ಥಿಗಳಿಗೆ ಅರ್ಧ ದಿನದ ರಜೆ ನೀಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಇಳಕಲ್‌ನ ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಬುಧವಾರ ಮಧ್ಯಾಹ್ನ ತನ್ನ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಿ, ವಿವಾದಾತ್ಮಕ ಚಲನಚಿತ್ರ ‘ದಿ ಕೇರಳ ಸ್ಟೋರಿ’ ವೀಕ್ಷಿಸಬೇಕು ಎಂದು ಸೂಚನೆ ನೀಡಿದೆ.

”ಎಲ್ಲಾ ಪದವಿ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ (ಬಿಎಎಂಎಸ್) ವಿದ್ಯಾರ್ಥಿಗಳಿಗೆ ನಾಳೆ ಅಂದರೆ 24.05.2023 ರಂದು 12.00 ರಿಂದ ಕೇರಳ ಚಲನಚಿತ್ರವನ್ನು ನೋಡಲು ನೀವೆಲ್ಲರೂ “ಶ್ರೀನಿವಾಸ್ ಟಾಕೀಸ್” ಗೆ ಹೋಗಿ ಎಂದು ಇಲ್ಲಿ ತಿಳಿಸಲಾಗಿದೆ. ಮಧ್ಯಾಹ್ನ 3.00 ರವರೆಗೆ. ನೀವು 9.00 ರಿಂದ 11.00 ರವರೆಗೆ ಬೆಳಿಗ್ಗೆ ತರಗತಿಗೆ ಮಾತ್ರ ಹಾಜರಾಗಬೇಕು. ನೀವು ಚಲನಚಿತ್ರವನ್ನು ಉಚಿತವಾಗಿ ನೋಡಬಹುದು. ನಾಳೆ ಮಧ್ಯಾಹ್ನದ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ನೀವೆಲ್ಲರೂ ಸಿನಿಮಾ ನೋಡಲೇಬೇಕು” ಎಂದು ಪ್ರಾಂಶುಪಾಲರು ಕಾಲೇಜಿನಲ್ಲಿ ನೋಟಿಸ್ ಅಂಟಿಸಿದ್ದಾರೆ. ಸಿನಿಮಾಗಾಗಿ ತರಗತಿಗಳನ್ನು ಸ್ಥಗಿತಗೊಳಿಸಿದ್ದಾರೆ.

ಸಾರ್ವಜನಿರಿಂದ ಆಕ್ಷೇಪ

ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿ ಇಳಕಲ್‌ನ ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸಿಬ್ಬಂದಿಯೊಂದಿಗೆ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದ್ದು, ಆ ಆಡಿಯೋದಲ್ಲಿ ಕಾಲೇಜು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.

”ಸಿನಿಮಾ ನೋಡಲು ಆದೇಶ ಹೊರಡಿಸಲು ನೀವು ಕಾಲೇಜು ನಡೆಸುತ್ತಿರೋ ಅಥವಾ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತೀರಾ? ಇದೇ ಸಿನಿಮಾ ನೋಡಲು ನೀವು ಆದೇಶ ಹೊರಡಿಸಿರುವ ಹಿಂದಿನ ಉದ್ದೇಶವಾದರೂ ಏನು? ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಸಿನಿಮಾಗಳನ್ನು ತೋರಿಸುವು ಉದ್ದೇಶವಿದೆ. ಆದರೆ ಈ ವಿವಾದಿತ ಸಿನಿಮಾ ತೋರಿಸಲು ಹೊರಟ್ಟಿದ್ದಿರಿ, ಆ ಸಿನಿಮಾದಲ್ಲಿ ಅಂತಹ ಒಳ್ಳೆಯ ಸಂದೇಶ ನೀಡುವಂತಹದ್ದೇನಿದೆ? ನಿಮ್ಮ ಪ್ರಿನ್ಸಿಪಾಲರು ಆ ಸಿನಿಮಾ ನೋಡಿದ್ದಾರಾ? ಎಂದು ಸರಣಿ ಪ್ರಶ್ನೆ ಕೇಳಿದಾಗ ಸಿಬ್ಬಂದಿ ತಡಬಡಾಯಿಸಿ, ನಮ್ಮ ಆದೇಶವನ್ನು ರದ್ದು ಮಾಡಿದ್ದೇವೆ, ತರಗತಿಗಳನ್ನು ನಡೆಸುತ್ತೇವೆ” ಎಂದು ಸಿಬ್ಬಂದಿ ಉತ್ತರಿಸಿದ್ದಾರೆ.

ಇದನ್ನೂ ಓದಿ: ಸಿನಿಮಾ ವಿಮರ್ಶೆ: ಮತ್ತೊಂದು ಇಸ್ಲಮಾಫೋಬಿಕ್ ಸಿನಿಮಾ ’ದ ಕೇರಳ ಸ್ಟೋರಿ’

ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠನಿಂದ ಫ್ರೀ ಶೋ

ಬಾಗಲಕೋಟೆ ನಗರದ ಚಂದನ ಥಿಯೇಟರ್ ‌ನಲ್ಲಿ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಂದ ‘ದಿ ಕೇರಳ ಸ್ಟೋರಿ’ ಸಿನಿಮಾ ಫ್ರೀ ಶೋ ಆಯೋಜನೆ ಮಾಡಲಾಗಿದೆ. ಮೇ 23ರಿಂದ ಮೇ 25ರ ವರೆಗೆ ಮೂರು ದಿನ ಫ್ರೀ ಶೋ ಆಯೋಜಿಸಲಾಗಿದೆ. ಪ್ರತಿದಿನ 3 ಗಂಟೆಯಿಂದ ಸಂಜೆ 6 ರ ಶೋವನ್ನು ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಎಲ್ಲ ಹಿಂದೂ ವಿದ್ಯಾರ್ಥಿಗಳು ಒಟ್ಟಾಗಿ ನೋಡಿ ಎಂದು ಮಾಜಿ ಶಾಸಕ, ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮನವಿ ಮಾಡಿದ್ದಾರೆ.

‘ದಿ ಕೇರಳ ಸ್ಟೋರಿ’ ಸಿನಿಮಾ ಮೇ 5 ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. ಇದಕ್ಕೆ ಅನೇಕ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ನಿಂದ ಮಹಿಳೆಯರನ್ನು ಬಲವಂತವಾಗಿ ಮತಾಂತರಿಸಲಾಗುತ್ತದೆ ಎನ್ನುವ ಕಾಲ್ಪಣಿಕ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕಾಲ್ಪಣಿಕ ಚಿತ್ರದ ಬಗ್ಗೆ ಮಾತನಾಡಿದ್ದು ಖೇದಕರ ಸಂಗತಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...