Homeಮುಖಪುಟಅಮೆರಿಕದ ವೈಟ್​ಹೌಸ್​ ತಡೆಗೋಡೆಗೆ ಟ್ರಕ್​ ಡಿಕ್ಕಿ; ಭಾರತೀಯ ಮೂಲದ ವ್ಯಕ್ತಿಯಿಂದ ಜೋ ಬೈಡನ್ ​ಹತ್ಯೆಗೆ ಯತ್ನ:...

ಅಮೆರಿಕದ ವೈಟ್​ಹೌಸ್​ ತಡೆಗೋಡೆಗೆ ಟ್ರಕ್​ ಡಿಕ್ಕಿ; ಭಾರತೀಯ ಮೂಲದ ವ್ಯಕ್ತಿಯಿಂದ ಜೋ ಬೈಡನ್ ​ಹತ್ಯೆಗೆ ಯತ್ನ: ಆರೋಪ

- Advertisement -
- Advertisement -

ಭಾರತೀಯ ಮೂಲದ ಸಾಯಿ ವರ್ಷಿತ್ ಕಂದುಲಾ ಎನ್ನುವ ವ್ಯಕ್ತಿ ಸೋಮವಾರ ಅಮೆರಿಕದ ಶ್ವೇತಭವನದ ಬಳಿ ಭದ್ರತಾ ತಡೆಗೋಡೆಗಳಿಗೆ ಟ್ರಕ್‌ನಿಂದ ಡಿಕ್ಕಿ ಹೊಡೆದಿದ್ದಾನೆ. ಆತನನ್ನು ವಾಷಿಂಗ್ಟನ್‌ನಲ್ಲಿ ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಟ್ರಕ್​ನಲ್ಲಿ ಸ್ವಸ್ತಿಕ್ ಚಿಹ್ನೆಯ ಬಾವುಟವೊಂದು ಪತ್ತೆಯಾಗಿದೆ, ಎರಡು ಬಾರಿ ತಡೆಗೋಡೆಗೆ ಚಾಲಕ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿಯೇ ತಡೆಗೋಡೆಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ​ನನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಅಪಘಾತದ ಬಳಿಕ ಸಾಯಿ ವರ್ಷಿತ್ ಕಂದುಲಾ, ನಾಜಿ ಧ್ವಜವನ್ನು ಬೆನ್ನಹಿಂದಿನಿಂದ ಹೊರತಗೆದು, ಅಮೆರಿಕಾ ಅಧ್ಯಕ್ಷರನ್ನು ಕೊಲ್ಲಲು ಬಯಸಿದ್ದೇನೆ. ನಾನು ಅಡಾಲ್ಫ್ ಹಿಟ್ಲರ್‌ನನ್ನು ಇಷ್ಟಪಡುತ್ತೇನೆ ಎಂದು ಹೇಳಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಸಾಯಿ ವರ್ಷಿತ್ ಕಂದುಲಾ ಯಾರು?

19ವರ್ಷದ ಸಾಯಿ ವರ್ಷ್ ಕಂದುಲಾ ಭಾರತೀಯ ಮೂಲದ ವ್ಯಕ್ತಿಯಾಗಿದ್ದು, ಶ್ವೇತಭವನದ ಉದ್ಯಾನವನದಲ್ಲಿ ಅಡ್ಡಲಾಗಿರುವ ಭದ್ರತಾ ತಡೆಗೋಡೆಗೆ ಉದ್ದೇಶಪೂರ್ವಕವಾಗಿ ಟ್ರಕ್‌ನ್ನು ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನಾಜಿ, ಹಿಟ್ಲರ್ ಅಭಿಮಾನಿಯಾಗಿರುವ ಕಂದುಲಾ, ಅಮೆರಿಕಾ ಸರ್ಕಾರದಿಂದ “ಅಧಿಕಾರವನ್ನು ವಶಪಡಿಸಿಕೊಳ್ಳುವ” ಯೋಜನೆ ಹಾಕಿಕೊಂಡಿದ್ದೇನೆ ಎಂದು ನಾಜಿ ಧ್ವಜವನ್ನು ಸುತ್ತಲೂ ಬೀಸಿದನು ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಅಧ್ಯಕ್ಷರು, ಉಪಾಧ್ಯಕ್ಷರು ಅಥವಾ ಕುಟುಂಬದ ಸದಸ್ಯರನ್ನು ಕೊಲ್ಲುವ ಅಥವಾ ಅಪಹರಿಸುವ ಅಥವಾ ಹಾನಿ ಮಾಡುವ ಬೆದರಿಕೆ ಹಾಕುವ ಆರೋಪವನ್ನು ಕುಂದುಲಾ ವಿರುದ್ಧ ಹೊರಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಮಿಸೌರಿಯ ನಿವಾಸಿ ಕಂದುಲಾ ಅವರು ಸೋಮವಾರ ಸಂಜೆ ವಾಷಿಂಗ್ಟನ್‌ಗೆ ತಲುಪಿದರು. ಅಲ್ಲಿ ವಿಮಾನ ನಿಲ್ದಾಣದ ಬಳಿಯಿಂದ ಟ್ರಕ್ ಅನ್ನು ಬಾಡಿಗೆಗೆ ಪಡೆದರು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ರಾತ್ರಿ 9.35 ರ ಸುಮಾರಿಗೆ, ಅವರು ಶ್ವೇತಭವನದ ಮುಂಭಾಗದ ಉದ್ಯಾನವನವಾದ ಲಫಯೆಟ್ಟೆ ಸ್ಕ್ವೇರ್ ಬಳಿಯ ಪಾದಚಾರಿ ಮಾರ್ಗದಲ್ಲಿ ಭದ್ರತಾ ತಡೆಗೋಡೆಗಳಿಗೆ ಡಿಕ್ಕಿ ಹೊಡೆದು, ಆ ನಂತರ ಟ್ರಕ್ ಅನ್ನು ಹಿಮ್ಮುಖವಾಗಿ ಚಲಿಸಿ ತಡೆಗೋಡೆಗೆ ಪದೇ ಪದೇ ಡಿಕ್ಕಿ ಹೊಡೆದಿದ್ದಾರೆ.

ಇದನ್ನೂ ಓದಿ: ಪುಲ್ವಾಮಾ ದಾಳಿ: ಸೈನಿಕರ ಶವಗಳ ಮೇಲೆ 2019ರ ಚುನಾವಣೆ ನಡೆಯಿತು; ಮೋದಿ ವಿರುದ್ಧ ಸತ್ಯಪಾಲ್ ಮಲಿಕ್ ವಾಗ್ದಾಳಿ

ಕುಂದುಲಾನನ್ನು ಬಂಧಿಸಿದ ನಂತರ, ಅವರು ನಾಜಿಗಳ “ಮಹಾ ಇತಿಹಾಸ” ಮತ್ತು ಅವರ “ಸರ್ವಾಧಿಕಾರಿ ಸ್ವಭಾವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅವರ ಆಡಳಿತಾತ್ಮಕ ಕ್ರಮ ಇಷ್ಟವಾಗಿ ನಾನು ಆನ್ಲೈನ್‌ನಲ್ಲಿ ನಾಜಿಯಾದ ಧ್ವಜ ಖರಿಸಿದ್ದೇನೆ ಎಂದು ಭದ್ರತಾ ಅಧಿಕಾರಿಗಳಿಗೆ ತಿಳಿಸಿದರು. ಹಿಟ್ಲರ್ ಪ್ರಬಲ ನಾಯಕರಾಗಿದ್ದರು, ಅಫಿಡವಿಟ್‌ನಲ್ಲಿ ಕುಂದುಲಾ ಹೇಳಿಕೊಂಡಿದ್ದಾನೆ.

ಟ್ರಕ್‌ನಲ್ಲಿ ಯಾವುದೇ ಸ್ಫೋಟಕಗಳು ಅಥವಾ ಶಸ್ತ್ರಾಸ್ತ್ರಗಳು ಕಂಡುಬಂದಿಲ್ಲ. ಕಂದುಲಾ ಅವರೊಂದಿಗೆ ವರ್ಜೀನಿಯಾದ ಹೆರ್ಂಡನ್‌ನಲ್ಲಿ ಯು-ಹಾಲ್ ಟ್ರಕ್‌ಅನ್ನು ಬಾಡಿಗೆಗೆ ಪಡೆದಿದ್ದರ ಬಗ್ಗೆ ಕಂಪನಿ ದಾಖಲೆ ನೀಡಿದೆ.

ಅಧಿಕಾರಿಗಳು ಕಂದುಲಾ ವಿರುದ್ಧ ಹೆಚ್ಚಿನ ಆರೋಪಗಳನ್ನು ಹೊರಿಸುವ ನಿರೀಕ್ಷೆಯಿದೆ ಮತ್ತು ಅವರು ಬುಧವಾರ ಫೆಡರಲ್ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳದಲ್ಲಿ ತೀವ್ರಗೊಳ್ಳಲಿರುವ ಮಳೆ; ಆರೇಂಜ್-ಯೆಲ್ಲೋ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

0
ಮುಂದಿನ ಕೆಲವು ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಗುರುವಾರ ಕೇರಳದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ 18 ರಂದು ಪಾಲಕ್ಕಾಡ್ ಮತ್ತು ಮಲಪ್ಪುರಂ, ಮೇ 19 ರಂದು...