Homeಮುಖಪುಟಭ್ರಷ್ಟಾಚಾರ ಶಂಕೆ: ಅದಾನಿ ಗ್ರೂಪ್‌ ವಿರುದ್ಧ ಯುಎಸ್‌ನಲ್ಲಿ ತನಿಖೆ

ಭ್ರಷ್ಟಾಚಾರ ಶಂಕೆ: ಅದಾನಿ ಗ್ರೂಪ್‌ ವಿರುದ್ಧ ಯುಎಸ್‌ನಲ್ಲಿ ತನಿಖೆ

- Advertisement -
- Advertisement -

ಅದಾನಿ ಉದ್ಯಮ ಸಮೂಹ ಲಂಚ ನೀಡಿಕೆಯಲ್ಲಿ ತೊಡಗಿಸಿಕೊಂಡಿದೆಯೇ? ಎಂಬ ಬಗ್ಗೆ ತನಿಖೆಯನ್ನು ಮತ್ತಷ್ಟು ವಿಸ್ತೃತಗೊಳಿಸಲು ಅಮೆರಿಕ ನಿರ್ಧರಿಸಿದೆ. ಜೊತೆಗೆ ಕಂಪನಿಯ ಕೋಟ್ಯಧಿಪತಿ ಸಂಸ್ಥಾಪಕರ ನಡತೆ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯಲ್ಲಿರುವ ಯುಎಸ್‌ನ ಅಟಾರ್ನಿ ಕಛೇರಿ ಮತ್ತು ವಾಷಿಂಗ್ಟನ್‌ನಲ್ಲಿರುವ ನ್ಯಾಯಾಂಗ ಇಲಾಖೆಯ ವಂಚನೆ ತಡೆ ಘಟಕದ ನೇತೃತ್ವದ ತನಿಖೆ ನಡೆಯುತ್ತಿದೆ.

ಅದಾನಿ ಕಂಪನಿ ಅಥವಾ ಅದರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳು ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ತಮ್ಮ ಪರವಾದ ನಿರ್ಧಾರ ಕೈಗೊಳ್ಳಲು ಭಾರತದ ಅಧಿಕಾರಿಗಳಿಗೆ ಲಂಚ ನೀಡುವುದರಲ್ಲಿ ನಿರತರಾಗಿದ್ದಾರೆಯೇ? ಎಂಬ ಬಗ್ಗೆ ಮಾಹಿತಿಗಳನ್ನು ಶೋಧಿಸಲಾಗುತ್ತಿದೆ. ಈ ತನಿಖೆಯು ಭಾರತದ ನವೀಕರಿಸಬಹುದಾದ ಇಂಧನ ಕಂಪನಿ ಅಝೂರ್‌ ಪವರ್ ಗ್ಲೋಬಲ್ ಲಿಮಿಟೆಡ್‌ಗೆ ಸಂಬಂಧಿಸಿದೆ ಎಂದು ವರದಿಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಅದಾನಿ ಸಮೂಹ, “ನಮ್ಮ ಅಧ್ಯಕ್ಷರ ವಿರುದ್ಧ ತನಿಖೆ ನಡೆಯುತ್ತಿದೆ ಎಂಬುವುದರ ಬಗ್ಗೆ ನಮಗೆ ಮಾಹಿತಿಯಿಲ್ಲ. ನಮ್ಮದು ಅತ್ಯುನ್ನತ ಗುಣಮಟ್ಟದೊಂದಿಗೆ ಕಾರ್ಯನಿರ್ವಹಿಸುವ ವ್ಯಾಪಾರ ಸಮೂಹವಾಗಿದೆ. ನಾವು ಭಾರತ ಮತ್ತು ಇತರ ದೇಶಗಳಲ್ಲಿ ಭ್ರಷ್ಟಾಚಾರ ವಿರೋಧಿ ಮತ್ತು ಲಂಚ ವಿರೋಧಿ ಕಾನೂನುಗಳನ್ನು ಸಂಪೂರ್ಣವಾಗಿ ಅನುಸರಿಸುವವರಾಗಿದ್ದೇವೆ” ಎಂದಿದೆ.

ಬ್ರೂಕ್ಲಿನ್ ಮತ್ತು ವಾಷಿಂಗ್ಟನ್‌ನಲ್ಲಿರುವ ನ್ಯಾಯಾಂಗ ಇಲಾಖೆಯ ಪ್ರತಿನಿಧಿಗಳು ಅದಾನಿ ಸಮೂಹದ ತನಿಖೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ತನಿಖೆಯಲ್ಲಿ ಹೆಸರು ಕೇಳಿ ಬಂದಿರುವ ಅಝೂರ್ ಪವರ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ತನಿಖೆಯು ಅದಾನಿ ಸಮೂಹದ ವಿರುದ್ದದ ಷೇರು ಬೆಲೆ ದುರ್ಬಳಕೆ ಆರೋಪಗಳ ಕುರಿತ ಹಿಂಡೆನ್‌ಬರ್ಗ್‌ ವರದಿಗೆ ಸಂಬಂಧಿಸಿದೆ. ಈ ಕುರಿತು ಭಾರತದಲ್ಲಿ ತನಿಖೆ ನಡೆಯುತ್ತಿದೆ.

ಹಿಂಡೆನ್‌ಬರ್ಗ್‌ ವರದಿಯಲ್ಲಿ ಉಲ್ಲೇಖಿಸಲಾದ ಆರೋಪಗಳ ಹೊರತಾಗಿಯೂ ಯುಎಸ್ ಅದಾನಿ ಸಮೂಹದ ಜೊತೆ ವ್ಯವಹಾರ ಮುಂದುವರೆಸಿದೆ. ಕಳೆದ ವರ್ಷ, ಯುಎಸ್‌ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಶ್ರೀಲಂಕಾದ ರಾಜಧಾನಿಯಲ್ಲಿ ಬಂದರು ನಿರ್ಮಾಣಕ್ಕಾಗಿ ಅದಾನಿ ಘಟಕಕ್ಕೆ 553 ಮಿಲಿಯನ್ ಡಾಲರ್ ಹಣಕಾಸಿನ ನೆರವು ಒದಗಿಸಿದೆ. ಈ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಎದುರಿಸುವ ಗುರಿಯನ್ನು ಯುಎಸ್ ಹೊಂದಿದೆ.

ಅದಾನಿ ವಿರುದ್ಧ ಯುಎಸ್‌ನಲ್ಲಿ ನಡೆಯುತ್ತಿರುವ ತನಿಖೆ ಮುಂದುವರಿದ ಹಂತದಲ್ಲಿದೆ. ನ್ಯಾಯಾಂಗ ಇಲಾಖೆಯು ಅದಾನಿ ಮತ್ತು ಅಝೂರ್ ಕಂಪನಿಗಳಿಗೆ ತಿಳಿಸದೆ ತನಿಖೆ ಮುಂದುವರೆಸಬಹುದು. ನ್ಯಾಯಾಂಗ ಇಲಾಖೆಯು ಅದಾನಿ ವಿರುದ್ದ ಪ್ರಸ್ತುತ ತಪ್ಪು ಆರೋಪ ಹೊರಿಸಿಲ್ಲ. ತನಿಖೆ ನಡೆದರೂ ಎಲ್ಲಾ ಪ್ರಕರಣಗಳಲ್ಲಿ ತಪ್ಪು ಆರೋಪ ಹೊರಿಸುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.

ವಿದೇಶಿ ಭ್ರಷ್ಟಾಚಾರ ತಡೆ ಕಾಯ್ದೆ (ಎಫ್‌ಸಿಪಿಎ) ಅಡಿ ಅದಾನಿ ಸಮೂಹದ ವಿರುದ್ದ ಯುಎಸ್‌ನಲ್ಲಿ ತನಿಖೆ ನಡೆಯುತ್ತಿದೆ. ಅದಾನಿ ಸಮೂಹ ಯುಎಸ್‌ನಲ್ಲಿ ವ್ಯವಹಾರ ಹೊಂದಿಲ್ಲ. ಆದರೆ, ಅಮೆರಿಕನ್ ಹೂಡಿಕೆದಾರರನ್ನು ಹೊಂದಿದೆ.

ಇದನ್ನೂ ಓದಿ : ಆಹಾರಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ದಾಳಿ: 21 ಜನರು ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read