Homeಕರೋನಾ ತಲ್ಲಣಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಸೋರಿಯಾಸಿಸ್ ಇಂಜೆಕ್ಷನ್!

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಸೋರಿಯಾಸಿಸ್ ಇಂಜೆಕ್ಷನ್!

ಭಾರತದ ಔಷಧ ನಿಯಂತ್ರಕ ಜನರಲ್ ಡಾ. ವಿ ಜಿ ಸೋಮಾನಿ, ಬಯೋಕಾನ್ ನ ಈಗಾಗಲೇ ಅನುಮೋದಿಸಲ್ಪಟ್ಟಿರುವ monoclonal antibody injection Itolizumab ಅನ್ನು ಕೊರೊನಾ ರೋಗಿಗಳಿಗೆ ತುರ್ತು ಪರಿಸ್ಥಿಯಲ್ಲಿ ನಿಯಮಿತವಾಗಿ ಬಳಸಬಹುದು ಎಂದಿದ್ದಾರೆ. 

- Advertisement -
- Advertisement -

ತೀವ್ರ ಉಸಿರಾಟದ ತೊಂದರೆಗೆ ಸಿಲುಕಿರುವ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಚರ್ಮದ ಕಾಯಿಲೆ ಸೋರಿಯಾಸಿಸ್ ಅನ್ನು ಗುಣಪಡಿಸಲು ಬಳಸುವ Itolizumab ಇಂಜೆಕ್ಷನ್ ಅನ್ನು “ನಿರ್ಬಂಧಿತ ತುರ್ತು ಬಳಕೆ” ಗಾಗಿ ಉಪಯೋಗಿಸಬಹುದು ಎಂದು ಭಾರತದ ಔಷಧ ನಿಯಂತ್ರಕ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕೊರೊನಾಗೆ ಚಿಕಿತ್ಸೆ ನೀಡಲು ಅನಿಯಮಿತ ವೈದ್ಯಕೀಯ ಅಗತ್ಯಗಳನ್ನು ಪರಿಗಣಿಸಿ, ಭಾರತದ ಔಷಧ ನಿಯಂತ್ರಕ ಜನರಲ್ ಡಾ. ವಿ ಜಿ ಸೋಮಾನಿ, ಬಯೋಕಾನ್ ನ ಈಗಾಗಲೇ ಅನುಮೋದಿಸಲ್ಪಟ್ಟಿರುವ monoclonal antibody injection Itolizumab ಅನ್ನು ಕೊರೊನಾ ರೋಗಿಗಳಿಗೆ ತುರ್ತು ಪರಿಸ್ಥಿಯಲ್ಲಿ ನಿಯಮಿತವಾಗಿ ಬಳಸಬಹುದು ಎಂದಿದ್ದಾರೆ.

ಭಾರತದಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಇದು ತೃಪ್ತಿಕರವೆಂದು ಕಂಡುಕೊಂಡ ನಂತರ ಈ ಅನುಮೋದನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಈಗಾಗಲೇ ಅನೇಕ ವರ್ಷಗಳಿಂದ ಸೋರಿಯಾಸಿಸ್ ಚಿಕಿತ್ಸೆಗಾಗಿ ಬಳಸುವ ಬಯೋಕಾನ್ ನ ಅನುಮೋದಿತ ಔಷಧವಾಗಿದೆ ಎಂದು ಅಧಿಕಾರಿ ಹೇಳಿದರು.

ಈ ಔಷಧಿಯನ್ನು ಬಳಸುವ ಮೊದಲು ಪ್ರತಿ ರೋಗಿಯ ಲಿಖಿತ ಒಪ್ಪಿಗೆ ಅಗತ್ಯವಿದೆ ಎಂದು ಅವರು ಹೇಳಿದರು.


ಇದನ್ನೂ ಓದಿ: ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಸಂಶೋಧನೆಯಲ್ಲಿ ಪ್ರಗತಿ; ಮನುಷ್ಯರ ಮೇಲೆ ಪ್ರಯೋಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...