ಭಾರತವು ಪ್ರತಿ ಮಿಲಿಯನ್ ಗೆ 479 ಕೊರೊನಾ ಪರೀಕ್ಷೆಗಳನ್ನು ನಡೆಸುತ್ತಿದೆ: ಆರೋಗ್ಯ ಸಚಿವಾಲಯ
PC: Google

ಭಾರತ ಪ್ರಸ್ತುತ ಒಂದು ಮಿಲಿಯನ್ ಜನಸಂಖ್ಯೆಗೆ ದಿನಕ್ಕೆ 479 ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 6.6 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳು ಸೇರಿದಂತೆ, ಒಟ್ಟು 2 ಕೋಟಿಗೂ ಹೆಚ್ಚು ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಳೆದ 24 ಗಂಟೆಗಳಲ್ಲಿ ಭಾರತವು 52,050 ಹೊಸ ಪ್ರಕರಣಗಳು ಮತ್ತು 803 ಸಾವುಗಳನ್ನು ವರದಿ ಮಾಡಿದ್ದು, ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 18,55,745 ಕ್ಕೆ ಏರಿಕೆಯಾಗಿದೆ.

ಮಂಗಳವಾರ ಸಾವಿನ ಸಂಖ್ಯೆ 38,938 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

ಒಟ್ಟು, ಸಕ್ರಿಯ ಪ್ರಕರಣಗಳು 5,86,298 ಆಗಿದ್ದರೆ, 12,30,509 ಜನರು ಚೇತರಿಸಿಕೊಂಡಿದ್ದಾರೆ. ಸತತ ಆರನೇ ದಿನ ಕೊರೊನಾ ಪ್ರಕರಣಗಳು 50,000 ಕ್ಕಿಂತ ಹೆಚ್ಚಾಗಿದೆ.

ಇದರ ನಡುವೆ, ಜಾಗತಿಕ ಕೊರೊನಾ ವೈರಸ್ ಪ್ರಕರಣಗಳು 18,282,208 ಕ್ಕೆ ಏರಿ 692,679 ಸಾವುಗಳು ಸಂಭವಿಸಿವೆ. ಇದುವರೆಗೆ 10,865,548 ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಜಾನ್ ಹಾಪ್ಕಿನ್ಸ್ ಅಂಕಿಅಂಶಗಳು ತಿಳಿಸಿವೆ.

ಚೇತರಿಸಿಕೊಂಡ ಪ್ರಕರಣಗಳು ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

12.30 ಲಕ್ಷದಲ್ಲಿ ಚೇತರಿಸಿಕೊಂಡ ಪ್ರಕರಣಗಳು, ಭಾರತದಲ್ಲಿ ಕೊರೊನಾ ಕ್ರಿಯಾಶೀಲ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.


ಇದನ್ನೂ ಓದಿ: ಕಾಶ್ಶೀರ ರಾಜ್ಯ ನೆಲಸಮ ಮಾಡಿದ ವಾರ್ಷಿಕ ದಿನವೇ ಬಾಬ್ರಿ ಮಸೀದಿ ನೆಲಸಮವಾದ ಸ್ಥಳದಲ್ಲಿ ಮಂದಿರ ಶಿಲಾನ್ಯಾಸ ಕಾಕತಾಳೀಯವೆ?

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts