Homeಮುಖಪುಟಉತ್ತರ ಪ್ರದೇಶ: ಮುಸ್ಲಿಂ ಕುಟುಂಬಕ್ಕೆ ಬಣ್ಣ ಎರಚಿ ಕಿರುಕುಳ ನೀಡಿದ ಅಪರಿಚಿತರು, ದೂರು ದಾಖಲು

ಉತ್ತರ ಪ್ರದೇಶ: ಮುಸ್ಲಿಂ ಕುಟುಂಬಕ್ಕೆ ಬಣ್ಣ ಎರಚಿ ಕಿರುಕುಳ ನೀಡಿದ ಅಪರಿಚಿತರು, ದೂರು ದಾಖಲು

- Advertisement -
- Advertisement -

ಮುಸ್ಲಿಂ ಕುಟುಂಬಕ್ಕೆ ಬಣ್ಣ ಬಳಿದು ಕಿರುಕುಳ ನೀಡಿದ ಕೆಲವು ಅಪರಿಚಿತ ವ್ಯಕ್ತಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ತಮ್ಮ ಮೋಟಾರುಬೈಕಿನಲ್ಲಿ ಮೂಲಕ ಹಾದು ಹೋಗುತ್ತಿದ್ದ ಮುಸ್ಲಿಂ ಕುಟುಂಬವೊಂದರ ಮೇಲೆ ಕೆಲವರು ಬಲವಂತವಾಗಿ ಬಣ್ಣಗಳನ್ನು ಹಚ್ಚಿ, ನೀರು ಎರಚಿರುವ ತೋರಿಸುವ  ವೀಡಿಯೋ ವೈರಲ್ ಆಗೊರುವುದನ್ನು ಪೊಲೀಸರು ಗಮನಿಸಿದ್ದಾರೆ.

ಬಣ್ಣ ಎಸರಚಿ ಕಿರುಕುಳ ನೀಡಿರುವ ಕೆಲ ಪುರುಷರು, “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಪೊಲೀಸರ ಪ್ರಕಾರ, ಈ ಘಟನೆಯು ಮಾರ್ಚ್ 20ರ ಬುಧವಾರದಂದು ನಗರದ ಧಾಂಪುರ್ ಪ್ರದೇಶದಲ್ಲಿ ಸಂಭವಿಸಿದೆ.

ಬಿಜ್ನೋರ್‌ನ ಹಿರಿಯ ಪೊಲೀಸ್ ಅಧೀಕ್ಷಕರ ಪ್ರಕಾರ, ಆ ಪ್ರದೇಶದ ಸರ್ಕಲ್ ಆಫೀಸರ್ (ಸಿಒ) ಕುಟುಂಬವನ್ನು ಸಂಪರ್ಕಿಸಿ, ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ಸೂಚಿಸಲಾಗಿದೆ.

“ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವನ್ನು ಬಿಜ್ನೋರ್ ಪೊಲೀಸರು ಗಮನಕ್ಕೆ ತೆಗೆದುಕೊಂಡಿದ್ದಾರೆ. ಈ ವೈರಲ್ ವೀಡಿಯೊದಲ್ಲಿ, ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದ ಕುಟುಂಬಕ್ಕೆ ಕೆಲವು ಪುರುಷರು ಕಿರುಕುಳ ಮತ್ತು ಬಲವಂತವಾಗಿ ಬಣ್ಣ ಹಚ್ಚುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಬಿಜ್ಮೋರ್ ಪೊಲೀಸರು ಈ ವ್ಯಕ್ತಿಗಳನ್ನು ಗುರುತಿಸುತ್ತಿದ್ದಾರೆ” ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೀರಜ್ ಜಾದುವಾನ್ ಅವರು ಎಕ್ಸ್‌ನ ವೀಡಿಯೊದಲ್ಲಿ ತಿಳಿಸಿದ್ದಾರೆ.

“ಸಂತ್ರಸ್ತ ಕುಟುಂಬವನ್ನು ವೈಯಕ್ತಿಕವಾಗಿ ಸಂಪರ್ಕಿಸಲು ಮತ್ತು ಅವರಿಂದ ದೂರನ್ನು ಸ್ವೀಕರಿಸಿದ ನಂತರ ಎಫ್‌ಐಆರ್ ದಾಖಲಿಸಲು, ಅವರ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಲ್ ಆಫೀಸರ್ (ಸಿಒ) ಧಂಪುರ್ ಅವರಿಗೆ ಸೂಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ; ಸಿಎಎ ಮೂಲಕ ಸಂವಿಧಾನದ ಸಮಾನತೆಯ ಕಲ್ಪನೆಯನ್ನು ನುಚ್ಚುನೂರು ಮಾಡಲಾಗಿದೆ: ಪಿಣರಾಯಿ ವಿಜಯನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...