Homeಮುಖಪುಟಉತ್ತರಪ್ರದೇಶ: ಪತ್ರಕರ್ತ ಪ್ರಶಾಂತ್ ಕನೋಜಿಯಾಗೆ ಅಲಹಾಬಾದ್ ಹೈಕೋರ್ಟ್ ಜಾಮೀನು

ಉತ್ತರಪ್ರದೇಶ: ಪತ್ರಕರ್ತ ಪ್ರಶಾಂತ್ ಕನೋಜಿಯಾಗೆ ಅಲಹಾಬಾದ್ ಹೈಕೋರ್ಟ್ ಜಾಮೀನು

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ನಕಲಿ ಟ್ವೀಟ್ ಮಾಡಿದ್ದರು ಎಂದು ಆರೋಪಿಸಿ ಆಗಸ್ಟ್ ತಿಂಗಳಿನಲ್ಲಿ ಬಂಧಿಸಲಾಗಿತ್ತು.

- Advertisement -
- Advertisement -

ರಾಮ ಮಂದಿರಕ್ಕೆ ಸಂಬಂಧಿಸಿದಂತೆ ನಕಲಿ ಟ್ವೀಟ್ ಮಾಡಿ ಬಂಧನಕ್ಕೊಳಗಾಗಿದ್ದ ದಿ ವೈರ್ ನ ಮಾಜಿ ವರದಿಗಾರ ಪತ್ರಕರ್ತ  ಪ್ರಶಾಂತ್ ಕನೋಜಿಯಾ ಅವರಿಗೆ ಅಲಹಾಬಾದ್ ಹೈಕೋರ್ಟ್ ಇಂದು ಜಾಮೀನು ನೀಡಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದ ನಕಲಿ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಆಗಸ್ಟ್ 18 ರಂದು ಅವರ ದೆಹಲಿ ಮನೆಯಿಂದ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಈಗ ಅವರಿಗೆ ಜಾಮೀನು ಸಿಕ್ಕಿದೆ.

ಇದರ ಕುರಿತು ಟ್ವೀಟ್ ಮಾಡಿರುವ ಕನೋಜಿಯಾ ಪತ್ನಿ ಜಗಿಶಾ ಅರೋರಾ, “ಪ್ರಶಾಂತ್ ಅವರಿಗೆ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿತು. ನ್ಯಾಯಾಂಗ ಮತ್ತು ಬಾಬಾ ಸಾಹೇಬರ ಸಂವಿಧಾನದ ಮೇಲಿನ ನನ್ನ ನಂಬಿಕೆ ಈ ಫಲಿತಾಂಶವನ್ನು ತಂದಿತು. ನನ್ನ ಹೋರಾಟದಲ್ಲಿ ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಯುಪಿ ಪೋಲಿಸರಿಂದ ಪತ್ರಕರ್ತ ಪ್ರಶಾಂತ್ ಕನೋಜಿಯಾ ಬಂಧನ

ಇದನ್ನೂ ಓದಿ: ಸಿಬಿಐ ದಾಳಿಗಳು ಮತ್ತು ವಕೀಲರು, ಪತ್ರಕರ್ತರ ಕಾನೂನುಬಾಹಿರ ಬಂಧನಗಳು: ಕರಾಳ ದಿನಗಳ ಮುನ್ಸೂಚನೆ

“ಕನೋಜಿಯಾ ದ್ವೇಷವನ್ನು ಹರಡಲು ಹಿಂದೂ ಸೇನೆಯ ಮುಖಂಡ ಸುಶೀಲ್ ತಿವಾರಿ ಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ನ  ಫೋಟೋವನ್ನು ಎಡಿಟ್ ಮಾಡಿ ಟ್ವೀಟ್ ಮಾಡಿದ್ದಾರೆ” ಎಂದು ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲಾದ ಎಫ್‌ಐಆರ್‌ನಲ್ಲಿ ಹೇಳಲಾಗಿತ್ತು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ, 153 ಬಿ, 420, 465, 468, 469 ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಸಂಬಂಧಿಸಿದಂತೆ ಯುಪಿ ಪೊಲೀಸರು ಕನೋಜಿಯಾ ವಿರುದ್ಧ ಮೂರನೇ ಬಾರಿ ಎಫ್‌ಐಆರ್ ದಾಖಲಿಸಿದ್ದರು.

ತಿವಾರಿ ಅವರ ಫೇಸ್‌ಬುಕ್ ಪೋಸ್ಟ್, “ಯುಪಿಎಸ್‌ಸಿಯಲ್ಲಿ ಇಸ್ಲಾಮಿಕ್ ಅಧ್ಯಯನಕ್ಕೆ ಬದಲಾಗಿ ವೈದಿಕ ಅಧ್ಯಯನಗಳು ತಕ್ಷಣ ಬದಲಾಯಿಸಬೇಕೆಂದು” ಒತ್ತಾಯಿಸಿದೆ.

ಇದನ್ನೂ ಓದಿ: ಪತ್ರಕರ್ತರ ಬಂಧನ: ಯೋಗಿಯ ಉತ್ತರಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

ಆದರೆ, ಕನೋಜಿಯಾ ಟ್ವೀಟ್ ಮಾಡಿದ ಫೋಟೋದಲ್ಲಿ, ಚಿತ್ರ ಮತ್ತು ಹಿನ್ನೆಲೆ ಒಂದೇ ರೀತಿ ಕಾಣುತ್ತದೆ. ಆದರೆ, “ತಿವಾರಿ ಆದೇಶದ ಪ್ರಕಾರ, ರಾಮ ಮಂದಿರದೊಳಗೆ ಯಾವುದೇ ಶೂದ್ರ, ಎಸ್‌ಸಿ, ಎಸ್‌ಟಿ ಅಥವಾ ಒಬಿಸಿಗಳಿಗೆ ಪ್ರವೇಶವಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಎಂದಿದೆ.

ಇದನ್ನೂ ಓದಿ: ಬಿಜೆಪಿ ಸೇರಿರುವ ಈ ಶೂಟರ್‌‌ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪುತ್ರಿ ಅಲ್ಲ; ಯಾರಿವರು?

2019 ರಲ್ಲಿ, ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಮದುವೆಯಾಗಲು ಬಯಸುತ್ತೇನೆ’ ಎಂದು ಹೇಳಿಕೊಂಡ ಮಹಿಳೆಯ ವೀಡಿಯೊವನ್ನು ಹಂಚಿಕೊಂಡಿದ್ದಕ್ಕಾಗಿ ಕನೋಜಿಯಾನನ್ನು ಬಂಧಿಸಲಾಗಿತ್ತು.

ಪಿಎಂ ನರೇಂದ್ರ ಮೋದಿ ಮತ್ತು ಸಿಎಂ ಆದಿತ್ಯನಾಥ್ ವಿರುದ್ಧ “ಆಕ್ಷೇಪಾರ್ಹ ಟ್ವೀಟ್” ಮಾಡಿದ್ದಕ್ಕಾಗಿ ಇವರನ್ನು ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಲವ್ ಜಿಹಾದ್ ಹೆಸರಿನಲ್ಲಿ ದ್ವೇಷ ಹರಡುವ ಸುಳ್ಳು ಸುದ್ದಿ, ವಿಡಿಯೋ ಹಂಚಿಕೊಳ್ಳಲಾಗುತ್ತಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...