ಗೋವಾ : ಅರವಿಂದ್ ಕೇಜ್ರಿವಾಲ್‌ರಿಂದ ಮತ್ತೆ ಉಚಿತ ವಿದ್ಯುತ್ ಯೋಜನೆ ಘೋಷಣೆ
PC: PTI

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಮೂರನೇ ಅಲೆ ವ್ಯಾಪಿಸುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ವಪಕ್ಷಗಳ ಸಭೆ ಕರೆದು ಕೊರೊನಾ ನಿರ್ವಹಣೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ನಿನ್ನೆ ತಾನೇ ಕೊರೊನಾ ಹೆಚ್ಚಾದ ಹಿನ್ನೆಲೆ ಮದುವೆ ಸಮಾರಂಭಗಳ ಅತಿಥಿಗಳ ಸಂಕ್ಯೆಯನ್ನು 200ರಿಂದ 50ಕ್ಕೆ ಇಳಿಸಿ ಆದೇಶಿಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿ, ಕೊಳಗಳು, ನದಿ ದಂಡೆಗಳಲ್ಲಿ ಛತ್ ಪೂಜೆಗೆ ನಿರ್ಬಂಧ ಕೂಡ ಹೇರಲಾಗಿದೆ.

ದೆಹಲಿಯಲ್ಲಿ ಅಕ್ಟೋಬರ್ 28 ರಿಂದ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಬುಧವಾರ 7,486 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, 131 ಸಾವು ನೋವುಗಳು ದಾಖಲಾಗಿವೆ. ಇದು ಇದುವರೆಗಿನ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ.

ಇದನ್ನೂ ಓದಿ: ಛತ್ ಪೂಜೆಗೆ ದೆಹಲಿ ಸರ್ಕಾರ ನಿರ್ಬಂಧ, ಹಸ್ತಕ್ಷೇಪ ಮಾಡಲ್ಲ ಎಂದ ಹೈಕೋರ್ಟ್

ಮುಂದಿನ ದಿನಗಳಲ್ಲಿ ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ 660 ಕ್ಕೂ ಹೆಚ್ಚು ಐಸಿಯು ಹಾಸಿಗೆಗಳನ್ನು ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಜೊತೆಗೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿ ಸರ್ಕಾರ ಮತ್ತೆ ಲಾಕ್‌ಡೌನ್ ವಿಧಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಿರ್ವಹಣೆ ಬಗ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಸರ್ವಪಕ್ಷ ಸಭೆ ನಡೆಸುತ್ತಿದ್ದಾರೆ. ಸಭೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ), ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ತಮ್ಮ ಕ್ಷೇತ್ರಗಳಲ್ಲಿ ಕೊರೊನಾ ನಿಯಮಾವಳಿಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಎಲ್ಲಾ ಪಕ್ಷದ ಮುಖಂಡರು, ಸಂಸದರು ಮತ್ತು ಶಾಸಕರ ಸಹಕಾರವನ್ನು ಮುಖ್ಯಮಂತ್ರಿ ಅವರಿಂದ್ ಕೇಜ್ರಿವಾಲ್ ಬಯಸಿದ್ದಾರೆ ಎಂದು ಆಪ್ ಮುಖಂಡರು ತಿಳಿಸಿದ್ದಾರೆ.

ದೆಹಲಿಯ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ “ಲಾಕ್‌ಡೌನ್ ಬಗ್ಗೆ ಮಾತನಾಡುವ ಬದಲು ಮಾರುಕಟ್ಟೆಗಳಲ್ಲಿ ಮಾಸ್ಕ್ ಬಳಸುವುದು ಮತ್ತು ದೈಹಿಕ ಅಂತರ ಕಾಪಾಡುವುದು ಮುಂತಾದ ಕೋವಿಡ್ -19 ಸುರಕ್ಷತಾ ಕ್ರಮಗಳನ್ನು ಎಎಪಿ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಾನು ಸೂಚಿಸುತ್ತೇನೆ” ಎಂದಿದ್ದಾರೆ.

ಜೊತೆಗೆ “ದೆಹಲಿಯ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳಂತಹ ಸೌಲಭ್ಯಗಳನ್ನು ಸುಧಾರಿಸಲು ನಾನು ಮುಖ್ಯಮಂತ್ರಿಯನ್ನು ಕೇಳುತ್ತೇನೆ. ಹಾಗಾದಲ್ಲಿ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು “ಎಂದು ಆದೇಶ್ ಗುಪ್ತಾ ಸಭೆಗೂ ಮುನ್ನ ಹೇಳಿದ್ದಾರೆ.


ಇದನ್ನೂ ಓದಿ: ಬಿಬಿಎಂಪಿ ಗೆದ್ದರೆ ದೆಹಲಿ ಮಾದರಿಯ ’ಮೊಹಲ್ಲಾ ಕ್ಲಿನಿಕ್’ ಆರಂಭ: ಆಮ್ ಆದ್ಮಿ ಪಕ್ಷ

LEAVE A REPLY

Please enter your comment!
Please enter your name here