Homeಮುಖಪುಟಉತ್ತರಪ್ರದೇಶ: ಮಸೀದಿಯಲ್ಲಿ ಹನುಮಾನ್ ಚಾಲಿಸಾ ಪಠಿಸಿದ ಬಿಜೆಪಿ ಕಾರ್ಯಕರ್ತ!

ಉತ್ತರಪ್ರದೇಶ: ಮಸೀದಿಯಲ್ಲಿ ಹನುಮಾನ್ ಚಾಲಿಸಾ ಪಠಿಸಿದ ಬಿಜೆಪಿ ಕಾರ್ಯಕರ್ತ!

- Advertisement -
- Advertisement -

ಬಾಗ್‌ಪತ್‌ನ ಬಿಜೆಪಿ ಮುಖಂಡರೊಬ್ಬರು ಮಸೀದಿಯಲ್ಲಿ ಗಾಯತ್ರಿ ಮಂತ್ರ ಮತ್ತು ಹನುಮಾನ್ ಚಾಲಿಸಾ ಪಠಿಸಿದ್ದು, ಬಿಜೆಪಿಯ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಮನುಪಾಲ್ ಬನ್ಸಾಲ್ ಸೋಮವಾರ ಮಧ್ಯಾಹ್ನ ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿದರು.

ಪರಸ್ಪರ ಒಪ್ಪಿಗೆಯೊಂದಿಗೆ ಇದನ್ನು ಮಾಡಿರುವುದರಿಂದ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಫ್ಯಾಸಿಸಂ ಸೆಳೆತಕ್ಕೆ ಜನ ಮರುಳಾಗುವುದೇಗೆ? ನಮ್ಮೆಲ್ಲರ ಡೇಟಾ ದುರುಪಯೋಗವಾಗದಂತೆ ತಡೆಯಬೇಕಲ್ಲವೇ?

ಮಂಗಳವಾರ, ಮಥುರಾದ ಈದ್ಗಾ ಮಸೀದಿಯಲ್ಲಿ ಹನುಮಾನ್ ಚಾಲಿಸಾ ಓದಿದ ಆರೋಪದ ಮೇಲೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ಪ್ರಕಾರ, ಸೌರಭ್ ಲಂಬಾರ್ದಾರ್, ಕನ್ಹಾ, ರಾಘವ್, ಮತ್ತು ಕೃಷ್ಣ ಠಾಕೂರ್ ಆರೋಪಿಗಳಾಗಿದ್ದು, ಅಕ್ಟೋಬರ್ 29 ರ ಘಟನೆಗೆ ಪ್ರತಿಕ್ರಿಯೆಯಾಗಿ ಇದನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಖುದೈ ಖಿಡ್ಮತ್ಗರ್ ಎಂಬ ಎನ್‌ಜಿಒಗೆ ಸೇರಿದ ಕಾರ್ಯಕರ್ತರ ಗುಂಪು ಮಥುರಾದ ನಂದ್ ಬಾಬಾ ದೇವಸ್ಥಾನದಲ್ಲಿ ನಮಾಜ್ ಮಾಡಿತ್ತು. ನಮಾಜ್ ಮಾಡುವ ಮೂಲಕ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ ಪೊಲೀಸರು ಅವರನ್ನು ಬಂಧಿಸಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ದೇವರು ಎಲ್ಲವನ್ನೂ ನಿರ್ಮಿಸಿದ್ದಾನೆ ಮತ್ತು ಎಲ್ಲಿಯಾದರೂ ಪೂಜಿಸಬಹುದು” ಎಂದು ಮಸೀದಿಯ ಧರ್ಮಗುರು ಅಲಿ ಹಸನ್ ಹೇಳಿದರು.


ಇದನ್ನೂ ಓದಿ: ”ರಾಮ ಮತ್ತು ಅಲ್ಲಾ ನಡುವೆ ಯಾವುದೇ ವ್ಯತ್ಯಾಸವಿಲ್ಲ”: ಸದ್ದಾಂ ಹುಸೇನ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...