Homeಮುಖಪುಟಉತ್ತರ ಪ್ರದೇಶ: ಕೊಟ್ಟ ಸಾಲ ಕೇಳಿದ್ದಕ್ಕೆ ಬಾಲಕನನ್ನು ವಿವಸ್ತ್ರಗೊಳಿಸಿ ಥಳಿಸಿದ ಸಹಪಾಠಿಗಳು!

ಉತ್ತರ ಪ್ರದೇಶ: ಕೊಟ್ಟ ಸಾಲ ಕೇಳಿದ್ದಕ್ಕೆ ಬಾಲಕನನ್ನು ವಿವಸ್ತ್ರಗೊಳಿಸಿ ಥಳಿಸಿದ ಸಹಪಾಠಿಗಳು!

- Advertisement -
- Advertisement -

ತಾನು ಕೊಟ್ಟಿದ್ದ ₹200 ವಾಪಸ್ ಕೊಡುವಂತೆ ಕೇಳಿದ 16 ವರ್ಷದ ಬಾಲಕನಿಗೆ ಬಲವಂತವಾಗಿ ಮದ್ಯ ಕುಡಿಸಿ, ಆತನತ ಸಹಪಾಠಿಗಳೆ ವಿವಸ್ತ್ರಗೊಳಿಸಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ಸೋಮವಾರ ಈ ಘಟನೆ ನಡೆದಿದ್ದು, ಎರಡು ದಿನಗಳ ನಂತರ ವಿವಸ್ತ್ರಗೊಳಿಸಿ ಥಳಿಸಿರುವ ವಿಡಿಯೋಗಳನ್ನು ಆರೋಪಿತ ಬಾಲಕರು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ‘ಬೆಲ್ಟ್ ಮತ್ತು ದೊಣ್ಣೆಗಳಿಂದ ಹೊಡೆದು, ತಮ್ಮ ಫೋನ್‌ಗಳಲ್ಲಿ ಹಲ್ಲೆ ನಡೆಸಿರುವುದನ್ನು ರೆಕಾರ್ಡ್ ಮಾಡಿಕೊಂಡರು. ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ’ ಎಂದು ಬಾಲಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.

ಆರೋಪಿತ ಬಾಲಕರು ಸಂತ್ರಸ್ತನನ್ನು ಅವಾಚ್ಯವಾಗಿ ನಿಂದಿಸುತ್ತಾ, ಬಟ್ಟೆ ಕಳಚುವಂತೆ ಬಲವಂತ ಮಾಡಿದ್ದಾರೆ. ಬಟ್ಟೆ ಬಿಚ್ಚಿಸದಂತೆ ಆತ ಮನವಿ ಮಾಡಿದಾಗ, ಅವರು ಬಾಲಕನ ಮುಖಕ್ಕೆ ಹೊಡೆದಿರುವ ದೃಶ್ಯ ವಿಡಿಯೋದಲ್ಲಿ ಸೆಯಾಗಿದೆ.

‘ವಿಡಿಯೋ ವೈರಲ್ ಆಗಿರುವುದು ನನಗೆ ಮುಜುಗರ ಉಂಟುಮಾಡಿದ್ದು, ತಾನು ತುಂಬಾ ನೊಂದಿದ್ದೇನೆ’ ಎಂದು ಹೇಳಿರುವ ಬಾಲಕ, ತನ್ನ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಇದೀಗ ದೂರು ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತನಿಗೆ ನೀಡಿದ್ದ ₹200 ಸಾಲವನ್ನು ವಾಪಸ್ ಕೊಡುವಂತೆ ಕೇಳಿದ್ದಾಗಿ ಬಾಲಕ ಪೊಲೀಸರಿಗೆ ತಿಳಿಸಿದ್ದು, ಸುಮಾರು ಎರಡು ತಿಂಗಳ ಹಿಂದೆ ಹಣ ಕೇಳಿದ್ದಕ್ಕೆ ಜಗಳ ನಡೆದಿತ್ತು ಎಂದು ಆತ ಮಾಹಿತಿ ನೀಡಿದ್ದಾನೆ. ಕಳೆದ ಸೋಮವಾರ ಬಾಲಕ ಮತ್ತು ಅವನ ಸ್ನೇಹಿತ ಉದ್ಯಾನವನದಲ್ಲಿ ಹರಟೆ ಹೊಡೆಯುತ್ತಿದ್ದರು. ಹಣ ಪಡೆದಿದ್ದ ಆತನ ಸಹಪಾಠಿ ಸೇರಿದಂತೆ ನಾಲ್ವರು ಕಾರಿನಲ್ಲಿ ಪಾರ್ಕಿಗೆ ಬಂದು ಅವನನ್ನು ಕರೆದರು. ಅವನು ಕಾರಿನ ಬಳಿಗೆ ಬಂದ ತಕ್ಷಣ, ಹುಡುಗರು ಅವನನ್ನು ಒಳಗೆ ಎಳೆದುಕೊಂಡು ಸೈನಿಕರ ಅಭ್ಯಾಸವನ್ನು ವೀಕ್ಷಿಸಲು ಹತ್ತಿರದ ಅರಣ್ಯ ಪ್ರದೇಶಕ್ಕೆ ಹೋಗುವುದಾಗಿ ಹೇಳಿದರು ಎಂದು ಬಾಲಕ ಹೇಳಿದ್ದಾನೆ.

ಅರಣ್ಯಕ್ಕೆ ತಲುಪಿದಾಗ, ಅಲ್ಲಿ ಇನ್ನಿಬ್ಬರು ಕಾಯುತ್ತಿರುವುದನ್ನು ಬಾಲಕ ಕಂಡಿದ್ದಾನೆ. ಅವರು ಕುಡಿದು ಹುಡುಗನನ್ನು ಕುಡಿಯಲು ಒತ್ತಾಯಿಸಿದ್ದು, ನಂತರ ಹಲ್ಲೆ ಆರಂಭಿಸಿದ್ದಾರೆ. ಆರು ಮಂದಿ ಹುಡುಗರು ದೊಣ್ಣೆ ಮತ್ತು ಬೆಲ್ಟ್‌ಗಳಿಂದ ಹೊಡೆದು ಬಲವಂತವಾಗಿ ಬಟ್ಟೆ ಬಿಚ್ಚಿಸಿದ್ದರು ಎಂದು ಬಾಲಕ ಆರೋಪಿಸಿದ್ದಾನೆ. ತನ್ನನ್ನು ಬಿಟ್ಟುಬಿಡುವಂತೆ ಮನವಿ ಮಾಡುತ್ತಲೇ ಇದ್ದೆ, ಆದರೆ ಅವರು ಥಳಿಸುವುದನ್ನು ಮುಂದುವರೆಸಿದ್ದಾರೆ. ಜತೆಗೆ, ಹಲ್ಲೆ ನಡೆಸಿದ್ದನ್ನು ಚಿತ್ರೀಕರಿಸಿದರು ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಬಾಲಕ ಹೇಗೋ ಸ್ಥಳದಿಂದ ತಪ್ಪಿಸಿಕೊಂಡು ತನ್ನ ಮನೆಗೆ ತಲುಪಿದ್ದಾನೆ. ಎರಡು ದಿನಗಳ ನಂತರ, ಹಲ್ಲೆ ನಡೆಸಿದ್ದ ಹುಡುಗರು ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ‘ವಿಡಿಯೋ ವೈರಲ್ ಆದ ನಂತರ ನನಗೆ ಮನೆಯಿಂದ ಹೊರಗಡೆ ಕಾಲಿಡಲು ಕೂಡ ಮುಜುಗರವಾಗುತ್ತಿದೆ’ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ಇದನ್ನೂ ಓದಿ; ಸಿಐಎಸ್ಎಫ್ ಯೋಧರ ಹೆಗಲಿಗೆ ಸಂಸತ್ ಭದ್ರತಾ ಜವಾಬ್ದಾರಿ: ಕೇಂದ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಎಎಪಿಯನ್ನು ಹತ್ತಿಕ್ಕಲು ಬಿಜೆಪಿ ಆಪರೇಷನ್ ಜಾದು ಆರಂಭಿಸಿದೆ..’; ಅರವಿಂದ್ ಕೇಜ್ರಿವಾಲ್

0
"ಪ್ರಧಾನಿ ನರೇಂದ್ರ ಮೋದಿ ಅವರು ಯಾರನ್ನಾದರೂ ಜೈಲಿಗೆ ಕಳುಹಿಸಬಹುದು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕರೊಂದಿಗೆ ಇಂದು ಬಿಜೆಪಿ ಕೇಂದ್ರ ಕಚೇರಿಗೆ ಯೋಜಿತ...